twitter
    For Quick Alerts
    ALLOW NOTIFICATIONS  
    For Daily Alerts

    ಈ ಸಿನಿಮಾ ನೋಡಿ ಉಚಿತವಾಗಿ ಅಮೆರಿಕಾಗೆ ಹಾರಿ

    By Rajendra
    |

    ಹೌದು ಈ ರೀತಿಯ ಆಫರ್ ಒಂದನ್ನು ನೀಡಿದೆ ಕನ್ನಡದ 'ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ' ಚಿತ್ರ. ಈ ಚಿತ್ರ ಸೆಪ್ಟೆಂಬರ್ 9ರಂದು ತೆರೆಕಾಣುತ್ತಿದ್ದು ಸತ್ಯಕತೆ ಆಧಾರಿತವಾಗಿದೆ. ಈ ಚಿತ್ರದಮತ್ತೊಂದು ವಿಶೇಷ ಎಂದರೆ ಅಮೇರಿಕಾದಲ್ಲಿ ಸಂಪೂರ್ಣ ಚಿತ್ರೀಕರಣಗೊಂಡಿರುವ ಅದ್ದೂರಿ ಚಿತ್ರ.

    ನಮ್ಮ ಸಿನಿಮಾ ನೋಡಿ ಉಚಿತ ಅಮೆರಿಕಾ ಪ್ರವಾಸ ಮಾಡುವ ಅವಕಾಶ ಗೆಲ್ಲಿ ಎನ್ನುತ್ತಿದೆ ಚಿತ್ರತಂಡ. ಹೂಂಕಣೇಳು ಮಗ...ಎಂಬುದು ಚಿತ್ರದಅಡಿಬರಹ. ಇದೊಂದು ಅಮೆರಿಕಾ ನೆಲದಲ್ಲಿ ನಡೆದ ಭಾರತೀಯ ಮನಸ್ಸಿನ ಕತೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಗೋಪಿ ಪೀಣ್ಯ.

    ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎಂಬ ಬದುಕಿನ ನಶ್ವರತೆ ಸಾರುವ ಪುರಂದರದಾಸರ ಕೀರ್ತನೆಯ ಸಾಲುಗಳನ್ನು ಈ ಚಿತ್ರಕ್ಕೆ ಶೀರ್ಷಿಕೆಯಾಗಿ ಬಳಸಿಕೊಳ್ಳಲಾಗಿದೆ. ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿ ಅಮೆರಿಕಾ ಕನಸು ಕಂಡು ಅಲ್ಲಿಗೆ ಹಾರುವ ಮಂಡ್ಯ ಯುವಕನೊಬ್ಬನ ಕತೆಯಿದು.

    ಈ ಯುವಕ ಅಲ್ಲಿ ಅಂದುಕೊಂಡದ್ದನ್ನು ಸಾಧಿಸುತ್ತಾನಾ, ಇಲ್ಲವೆ ಎಂಬುದು ಚಿತ್ರದ ಕಥಾಹಂದರ. ಶ್ರೀರಜ್, ಯಜ್ಞಾಶೆಟ್ಟಿ, ರಿನಾ ಮೆಹ್ತಾ ಹಾಗೂ ಸೌರವ್ ಬಾಬು ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಚಿತ್ರದ ನಿರ್ಮಾಪಕರು ರೂಪಾ ಸೌರವ್.ಗುರುಕಿರಣ್ ಸಂಗೀತ, ಪಿಕೆಎಚ್ ದಾಸ್ ಛಾಯಾಗ್ರಹಣ ಈ ಚಿತ್ರಕ್ಕಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Allide Nammane Illibande Summane, a Kannada movie is based on real life incident by Gopi Peenya. A typical village lad finding his foothold in faraway America. How the modern day epidemic Medical Insurance traumatizes an entire family.
    Friday, August 26, 2011, 13:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X