»   » ಭರ್ಜರಿ ಒಪನಿಂಗ್: ಗೆಲುವಿನ ಓಟದಲ್ಲಿ ಅರಮನೆ

ಭರ್ಜರಿ ಒಪನಿಂಗ್: ಗೆಲುವಿನ ಓಟದಲ್ಲಿ ಅರಮನೆ

Subscribe to Filmibeat Kannada

ಏನೂ ಆಗಿದೆ, ನನಗಂತೂ ಸಂಶಯ, ಕಣ್ಣಲ್ಲೇ ಪರಿಚಯವಾದೆ, ಪತ್ರ ಬರೆಯಲಾ, ಇಲ್ಲಾ ಚಿತ್ರ ಬಿಡಿಸಲಾ ಎನ್ನುವ ಸುಮಧುರ ಹಾಡಿನ ಮೂಲಕ ತೆರೆಯ ಆಖಾಡಕ್ಕಿಳಿದ ಅರಮನೆ ಚಿತ್ರ ರಾಜ್ಯದ್ಯಂತ ಇಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯ ವ್ಯಕ್ತವಾಗಿದೆ. ಭರ್ಜರಿ ನಾಗಾಲೋಟದ ಮುನ್ಸೂಚನೆ ನೀಡಿದೆ.

ಸತತ ಸೋಲಿನಿಂದ ಕಂಗೆಟ್ಟಿದ ಕೆ. ಮಂಜು, ಅರಮನೆ ಚಿತ್ರದ ಮೂಲಕ ಗೆಲುವಿನ ಮುಖ ನೋಡುವುದು ಖಚಿತವಾಗಿದೆ. ಮುಂಗಾರುಮಳೆ ಕಥೆಯನ್ನು ಬರೆದಿದ್ದ ಪ್ರಿತಂ ಗುಬ್ಬಿ ಅರಮನೆ ಚಿತ್ರದ ಕಥೆಯನ್ನು ಬರೆದಿದ್ದು, ಪ್ರಥಮ ಬಾರಿಗೆ ನಿರ್ದೇಶಕರಾಗಿರುವ ನಾಗಶೇಖರ್ ಅವರ ಕೈಚಳಕ ಚಿತ್ರದಲ್ಲಿ ಡಾಳವಾಗಿ ಕಾಣಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಉತ್ತುಂಗದಲ್ಲಿರುವ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿನಯ ಎಲ್ಲರನ್ನು ಆಕರ್ಷಿಸುತ್ತದೆ.

ಚಿತ್ರದ ನಗು ನಗು ಹಾಡಿನಲ್ಲಿ ಏಳು ವಿವಿಧ ಪಾತ್ರಗಳಲ್ಲಿ ಕಾಣುವ ಗಣೇಶ್ ಅವರು ಒಂದೊದು ಪಾತ್ರದಲ್ಲಿ ಕೂಡಾ ಅದ್ಭುತ ಅಭಿನಯವನ್ನು ನೀಡಿದ್ದಾರೆ. ಹಿರಿಯ ನಟ ಅನಂತ್ ನಾಗ್ ಅವರ ಮನೋಜ್ಞ ಅಭಿನಯ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಮಲೆಯಾಳಿ ಬೆಡಗಿ ರೋಮಾ ಅಭಿನಯ ಜನರಿಗೆ ಮೆಚ್ಚುಗೆಯಾಗಿದೆ. ಚಿತ್ರದ ಹಾಡುಗಳು ಎಲ್ಲಕ್ಕಿಂತ ಹೈಲೈಟ್ ಎಂದು ಹೇಳಬಹುದು. ಈ ಚಿತ್ರದಲ್ಲಿರುವ ಎಲ್ಲ ಹಾಡುಗಳು ಮುಂಗಾರುಮಳೆ ಚಿತ್ರದ ಹಾಡಿನಂತೆ ಸುಮಧುರವಾಗಿವೆ. ಈಗಾಗಲೇ ಪಡ್ಡೆ ಹುಡುಗರ ಬಾಯಿಯಲ್ಲಿ ಕೊಲ್ಲೆ ಕೊಲ್ಲೆ ಒಮ್ಮೆ ಕೊಲ್ಲೆ ಎಂಬ ಹಾಡು ಎಲ್ಲರ ಬಾಯಿಯಲ್ಲಿ ನಲಿಯುತ್ತಿದೆ.. ಗುರುಕಿರಣ್ ಅವರ ಸಂಗೀತ ಚಿತ್ರಕ್ಕೆ ವಿಶೇಷ ಮೆರಗನ್ನು ನೀಡಿದೆ.

(ದಟ್ಸ್ ಕನ್ನಡಸಿನಿ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada