ಬೆಳ್ಳಿಪರದೆಗೆ ಸರ್ಜಾ ಕುಟುಂಬದ ಮತ್ತೊಂದು ಕುಡಿ

By Rajendra

ಸರ್ಜಾ ಕುಟುಂಬದ ಮತ್ತೊಂದು ಕುಡಿ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿದೆ. ಅರ್ಜುನ್ ಸರ್ಜಾ ಅವರ ಸೋದರ ಸಂಬಂಧಿ ಭರತ್ ಸರ್ಜಾ ಈಗ 'ಪುಲಿಕೇಶಿ'ಯಾಗಿ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ಸೆಟ್ಟೇರಿದ ಈ ಚಿತ್ರದ ನಾಯಕಿ 'ಹುಡುಗಾಟ'ದ ಹುಡುಗಿ ರೇಖಾ.

ಚಿತ್ರದಲ್ಲಿ ಭರತ್ ಸರ್ಜಾ ಅವರದು ಖಡಕ್ ಪೊಲೀಸ್ ಅಧಿಕಾರಿ ಪಾತ್ರ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಮಂಜುನಾಥ್. ಆಕ್ಷನ್ ಮತ್ತು ಮನರಂಜನಾತ್ಮಕ ಚಿತ್ರ ಇದಾಗಿದೆ. ಈಗಾಗಲೆ ಚಿರಂಜೀವಿ ಸರ್ಜಾ ಹಾಗೂ ಧ್ರುವ್ ಸರ್ಜಾ ಕನ್ನಡದಲ್ಲಿ ಭದ್ರ ನೆಲೆ ಕಂಡುಕೊಂಡಿದ್ದು ಭರತ್ ಸರ್ಜಾ ಈಗಷ್ಟೆ ಅಂಬೆಗಾಲಿಟ್ಟಿದ್ದಾರೆ.

ಬಿ ರಾಮಮೂರ್ತಿ ನಿರ್ಮಿಸುತ್ತಿರುವ ಈ ಚಿತ್ರದ ಅಡಿಬರಹ 'ನೋ ಎಕ್ಸ್‌ಕ್ಯೂಸ್'. ರಾಜೇಶ್ ರಾಮನಾಥ್ ಅವರ ಸಂಗೀತ, ಬಿ ಗೌಡ ಅವರ ಛಾಯಾಗ್ರಹಣ ಇರುವ ಚಿತ್ರದ ತಾರಾಬಳಗದಲ್ಲಿ ದೇವರಾಜ್, ಪದ್ಮವಾಸಂತಿ, ಮೋಹನ್, ಜಿ ಸುರೇಶ್ ಮುಂತಾದವರಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
One more actor from Sarja family debuts in Kannada. He is Bharath Sarja, nephew of action king Arjun Sarja. He is making his debut as a hero with the film Pulkieshi. The leading lady of the film is Hudugaata Rekha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X