ಬೆಂಗಳೂರಿನಲ್ಲಿ ಸುದೀಪ್ ಜೊತೆ ಮಲ್ಲು ಬೆಡಗಿ ಭಾವನಾ

By Rajendra

ಪುನೀತ್ ರಾಜ್ ಕುಮಾರ್ ಅವರ ಜಾಕಿ ಚಿತ್ರದಲ್ಲಿ ಅಭಿನಯಿಸುವ ಮೂಲಕ ಉತ್ತಮ ಪ್ರಶಂಸೆಗೆ ಪಾತ್ರವಾಗಿದ್ದರು ಮಲ್ಲು ಬೆಡಗಿ ಭಾವನಾ. ಈಗ ಆಕೆ ಮತ್ತೊಂದು ಕನ್ನಡ ಚಿತ್ರಕ್ಕೆ ಸಹಿಹಾಕಿದ್ದು ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ದ್ವಾರಕೀಶ್ ನಿರ್ಮಿಸುತ್ತಿರುವ ಪ್ರೊಡಕ್ಷನ್ ನಂ.47 ಚಿತ್ರದಲ್ಲಿ ಸುದೀಪ್‌ಗೆ ಜೊತೆಯಾಗಿ ಭಾವನಾ ಅಭಿನಯಿಸುತ್ತಿದ್ದಾರೆ.

ಈ ಚಿತ್ರಕ್ಕೆ 'ವಿಷ್ಣುವರ್ಧನ' ಎಂಬ ಶೀರ್ಷಿಕೆ ಇಡಲಾಗಿದೆ. ಆದರೆ ಶೀರ್ಷಿಕೆಗೆ ಇನ್ನೂ ಫಿಲಂ ಚೇಂಬರ್ ಅನುಮತಿ ಕೊಟ್ಟಿಲ್ಲ. ಈಗಾಗಲೆ ಎರಡು ಹಂತದ ಚಿತ್ರೀಕರಣ ಮುಗಿದಿದ್ದು ಸುದೀಪ್, ಪ್ರಿಯಾಮಣಿ ಹಾಗೂ ಸೋನು ಸೂದ್ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಭಾವನಾ ಹಾಗೂ ಸುದೀಪ್ ನಡುವಿನ ಸನ್ನಿವೇಶಗಳನ್ನು ಭರದಿಂದ ಚಿತ್ರೀಕರಿಸಲಾಗುತ್ತಿದೆ.

ಅಂದಹಾಗೆ ಈ ಚಿತ್ರಕ್ಕೆ ವಿ ಕುಮಾರ್ ಎಂಬುವವರು ಆಕ್ಷನ್, ಕಟ್ ಹೇಳುತ್ತಿದ್ದಾರೆ. ಏಪ್ರಿಲ್ 18ರಿಂದ ಭಾವನಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಆದರೆ ಪ್ರಿಯದರ್ಶನ್ ನಿರ್ದೇಶಿಸುತ್ತಿರುವ ಮಲಯಾಳಂ ಚಿತ್ರದಲ್ಲಿ ಆಕೆಗೆ ಒಂದು ವಾರ ಬಿಡುವು ಸಿಕ್ಕಿದೆ.

ಈ ವಿಷಯ ಗೊತ್ತಾಗಿದ್ದೇ ತಡ ಚಿತ್ರದ ಕಾರ್ಯಕಾರಿ ನಿರ್ಮಾಪಕ ಯೋಗೀಶ್ ದ್ವಾರಕೀಶ್ ಆಕೆಯನ್ನು ಬೆಂಗಳೂರಿಗೆ ಆಹ್ವಾನಿಸಿದ್ದಾರೆ. ಸುದೀಪ್ ಚಿತ್ರದಲ್ಲಿ ಹೊಸ ಉಲ್ಲಾಸ ಉತ್ಸಾಹದಿಂದ ಭಾವನಾ ಪಾಲ್ಗೊಂಡಿದ್ದಾರೆ. ಕೆಂಪಾಪುರ ಅಗ್ರಹಾರದ ಮನೆಯೊಂದರಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇದರ ಜೊತೆಗೆ ಹೊರಾಂಗಣ ಚಿತ್ರೀಕರಣವೂ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.

More from Filmibeat

English summary
Malayalam actress Bhavana acts with Sudeep in untitled film (which is tentatively titled 'Vishnuvardhana'). He sequences will be shot in Bengaluru recently. The shooting held at a house in Kempapura Agrahara. Some more sequences will be shot in outdoors said the the executive producer of the film Yogish Dwarakish.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X