»   » ನಿರ್ದೇಶನದತ್ತ ಹೊರಳಿದ ಪಿಕೆ ಎಚ್ ದಾಸ್

ನಿರ್ದೇಶನದತ್ತ ಹೊರಳಿದ ಪಿಕೆ ಎಚ್ ದಾಸ್

Posted By:
Subscribe to Filmibeat Kannada
cameramand pkh das
ಕನ್ನಡ ಚಿತ್ರರಂಗದ ಸಂವೇದನಾಶೀಲ ಛಾಯಾಗ್ರಾಹಕ ಪಿಕೆ ಎಚ್ ದಾಸ್ ನಿರ್ದೇಶನದತ್ತ ಹೊರಳಿದ್ದಾರೆ. ಹಾಗಂತ ದಾಸ್ ಅವರ ಗುರು ದಿನೇಶ್ ಬಾಬು ಖಚಿತಪಡಿಸಿದ್ದಾರೆ. ಮುಂದಿನ ವರ್ಷ ಏಪ್ರಿಲ್ ಗೆ ಪಿಕೆ ಎಚ್ ದಾಸ್ ನಿರ್ದೇಶನದ ಮೊದಲ ಚಿತ್ರಸೆಟ್ಟೇರಬಹುದು.

ನಿರ್ದೇಶನದ ದೀಕ್ಷೆ ಪಡೆದ ನಂತರ ಪಿಕೆ ಎಚ್ ದಾಸ್ ಚಿತ್ರಕಥೆ ಹೆಣೆಯುವುದರಲ್ಲಿ ತಲ್ಲೀನರಾಗಿದ್ದಾರೆ. ದುನಿಯಾ, ಸ್ಲಂ ಬಾಲ ಖ್ಯಾತಿವಿಜಯ್ ನಾಯಕ ನಟನಾಗುವ ಸಾಧ್ಯತೆಗಳಿವೆ.ಚಿತ್ರದ ಉಳಿದ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ.

ಚಿತ್ರೋದ್ಯಮದ ಬಗ್ಗೆ ಅರಿವಿಲ್ಲದವರೆಲ್ಲಾ ಕನ್ನಡ ಚಿತ್ರರಂಗಕ್ಕೆ ಬರುತ್ತಿರುವ ಬಗ್ಗೆ ದಿನೇಶ್ ಬಾಬು ಬೇಸರ ವ್ಯಕ್ತಪಡಿಸಿದ್ದಾರೆ. ನಿರ್ದೇಶನ ಎನ್ನುವುದು ಅಷ್ಟು ಸುಲಭವಾದ ಕೆಲಸವಲ್ಲ. ಮಲೆಯಾಳಂ ಚಿತ್ರರಂಗದಲ್ಲಿ ರಘುನಾಥ್ 300 ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ನಂತರವಷ್ಟೇ ಅವರಿಗೆ ನಿರ್ದೇಶನದ ಜವಾಬ್ದಾರಿ ಸಿಕ್ಕಿದ್ದು ಎಂದರು.

ಚಿತ್ರರಂಗದಲ್ಲಿ ನಾನು ಕಲಿಯ ಬೇಕಾಗಿರುವುದು ಇನ್ನೂ ಬಹಳಷ್ಟಿದೆ.ಇಲ್ಲಿ ಸದಾ ನಾನು ವಿದ್ಯಾರ್ಥಿ. ತಲೆಬುಡ ಗೊತ್ತಿಲ್ಲದವರೆಲ್ಲಾ ಚಿತ್ರ ಮಾಡುತ್ತಿದ್ದಾರೆ. ಸೋತ ನಂತರ ಚಿತ್ರೋದ್ಯಮವನ್ನು ಬೈಯ್ಯುವುದು ಸಾಮಾನ್ಯವಾಗಿದೆ ಎಂದು ತಮ್ಮ ಅಂತರಂಗವನ್ನು ಬಿಚ್ಚಿಟ್ಟರು.
(ದಟ್ಸ್ ಕನ್ನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada