ಕತೆ ಕದ್ದ ಆರೋಪ; ಹೊಸ ವಿವಾದದಲ್ಲಿ ಎಂಧಿರನ್

ಚೆನ್ನೈ ಪೊಲೀಸ್ ಕಮಿಷನರ್ ಅವರಿಗೆ ಕೊಟ್ಟಿರುವ ದೂರಿನಲ್ಲಿ, ತಾವು ರಚಿಸಿದ್ದ 'ಜುಗಿಬಾ' ಎಂಬ ಸಣ್ಣಕತೆ ಆಧಾರವಾಗಿ 'ಎಂಧಿರನ್' ಚಿತ್ರವನ್ನು ತೆರೆಗೆ ತರಲಾಗಿದೆ. ಇನಿಯಾ ಉದಯಂ ಎಂಬ ತಮಿಳು ಪತ್ರಿಕೆಯಲ್ಲಿ ಈ ಕತೆ 1996ರಲ್ಲಿ ಪ್ರಕಟವಾಗಿತ್ತು. ಬಳಿಕ 2007ರಲ್ಲಿ ಪುನರ್ ಮುದ್ರಣ ಕಂಡಿತ್ತು ಎಂದಿದ್ದಾರೆ.
ಭಾರತೀಯ ಕಾಪಿ ರೈಟ್ ಕಾಯಿದೆ ಪ್ರಕಾರ ಮುದ್ರಿತ ಕತೆಯನ್ನು ಚಿತ್ರ ಮಾಡಿರುವ ಬಗ್ಗೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 63ರ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳಬೇಕು ಎಂದು ಆರೂರು ಪೊಲೀಸರಲ್ಲಿ ವಿನಂತಿಸಿದ್ದಾರೆ. ಚಿತ್ರದ ನಿರ್ಮಾಪಕ ಕಲಾನಿಧಿ ಮಾರನ್ ಹಾಗೂ ನಿರ್ದೇಶಕ ಶಂಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅವರು ಕೋರಿದ್ದಾರೆ.
'ಎಂಧಿರನ್' ಚಿತ್ರ ನಿಮ್ಮ ಕತೆಯ ನಕಲಿನಂತಿದೆ. ಚಿತ್ರವನ್ನು ತಾವೇಕೆ ಒಮ್ಮೆ ನೋಡಬಾರದು ಎಂದು ತಮ್ಮ ಓದುಗರು ಹಾಗೂ ಗೆಳೆಯರು ಸೂಚಿಸಿದ್ದರು. ಹಾಗಾಗಿ ಚಿತ್ರಮಂದಿರದಲ್ಲಿ ತಾವು ಚಿತ್ರವನ್ನು ವೀಕ್ಷಿಸಿದೆವು. ಈ ಚಿತ್ರ ತಮ್ಮ ಕತೆಯನ್ನು ಯಥಾವತ್ತಾಗಿ ಕದ್ದು ಚಿತ್ರ ಮಾಡಿರುವ ಅಂಶ ಬೆಳಕಿಗೆ ಬಂದಿದೆ ಎಂದು ಆರೂರು ತಿಳಿಸಿದ್ದಾರೆ.


Click it and Unblock the Notifications











