»   »  ಜಿಂಬಾಬ್ವೆಯಲ್ಲಿ 'ದಾಟು'ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

ಜಿಂಬಾಬ್ವೆಯಲ್ಲಿ 'ದಾಟು'ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

Subscribe to Filmibeat Kannada

ಕೆ.ಶಿವರುದ್ರಯ್ಯ ನಿರ್ದೇಶನದ ಕನ್ನಡದ 'ದಾಟು' ಚಿತ್ರ ಜಿಂಬಾಬ್ವೆಯ ಅಂತಾರಾಷ್ಟ್ರೀಯ ಮಹಿಳಾ ಚಿತ್ರೋತ್ಸವ 2008ರಲ್ಲಿ ಅತ್ಯುತ್ತಮ ಮಹಿಳಾ ಚಿತ್ರವಾಗಿ ಆಯ್ಕೆಯಾಗಿದೆ. ಮಹಿಳೆಯೊಬ್ಬಳ ಹೋರಾಟ ಕುರಿತ ಚಿತ್ರ ಇದಾಗಿದ್ದು ಮುಖ್ಯಭೂಮಿಕೆಯಲ್ಲಿ 'ಮುಖಪುಟ'ಖ್ಯಾತಿಯ ರೂಪಾ ಅಯ್ಯರ್ ಅಭಿನಯಿಸಿದ್ದಾರೆ.

ಚಲನ ಚಿತ್ರೋತ್ಸವ ನಿರ್ದೇಶನಾಲಯದ (ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ) ಹಿರಿಯ ಉಪ ನಿರ್ದೇಶಕ ಶಂಕರ್ ಅವರಿಗೆ ಜಿಂಬಾಬ್ವೆ ಚಲನಚಿತ್ರೋತ್ಸವವ ನಿರ್ದೇಶಕರು ಪತ್ರ ಮುಖೇನ 'ದಾಟು' ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ವಿಷಯವನ್ನು ತಿಳಿಸಿದ್ದಾರೆ.

ಮೈಸೂರು ಅಶ್ವಥ್ ಅವರ 'ಧರ್ಮ ಕೊಂಡ' ಸಣ್ಣ ಕತೆ ಆಧಾರಿತ ಚಿತ್ರ'ದಾಟು'. ಈ ಚಿತ್ರಕ್ಕೆ ರಾಮಚಂದ್ರ ಐತಾಳ್ ಅವರ ಛಾಯಾಗ್ರಹಣ, ಹಂಸಲೇಖ ಅವರ ಸಂಗೀತ ಸಂಯೋಜನೆ ಇದ್ದು ಡಾ.ಎಂ.ಬೈರೇಗೌಡ, ರೂಪಾ ಅಯ್ಯರ್, ಸಚಿನ್ ಕಣಬೂರ್, ಸ್ಫೂರ್ತಿನಾಥ್, ವೆಂಕಟೇಶ್ ಪ್ರಸಾದ್, ನಾಕುಲ್, ರವೀಂದ್ರ ಸಿರಿವಾರ ನಿರ್ಮಿಸಿದ್ದಾರೆ.

ಚಿತ್ರದ ತಾರಾಗಣದಲ್ಲಿ ರೂಪಾ ಅಯ್ಯರ್, ದತ್ತಾತ್ರೇಯ, ರಾಜೇಶ್, ಗಿರಿಜಾ ಲೋಕೇಶ್, ವೀಣಾಸುಂದರ್, ವೆಂಕಟ ರಾವ್, ಪದ್ಮಾ ಶಿವಮೊಗ್ಗ, ಧನಂಜಯ, ಮಾಧವಿ, ರೇಖಾ, ಶಶಿ, ವೆಂಕಟೇಶ್ ಪ್ರಸಾದ್, ಶ್ರೀನಾಥ್ ಮತ್ತು ಮಾಸ್ಟರ್ ರೇವಂತ್ ಇದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada