For Quick Alerts
  ALLOW NOTIFICATIONS  
  For Daily Alerts

  ಪವನ್ ಲೂಸಿಯಾಕ್ಕೆ ದಿಗಂತ್ ಕೊಕ್; ಸತೀಶ್ ಕಿಕ್

  |

  ಲೈಫು ಇಷ್ಟೇನೆ ಚಿತ್ರ ನಿರ್ದೇಶಿಸಿ, ತಕ್ಕಮಟ್ಟಿಗೆ ಯಶಸ್ಸನ್ನೂ ಕೂಡ ಗಳಿಸಿದ್ದ ಯೋಗರಾಜ್ ಭಟ್ಟರ ಶಿಷ್ಯ ಪವನ್ ಕುಮಾರ್ ಹೊಸ ಚಿತ್ರಕ್ಕೆ ಸಿದ್ಧವಾಗಿರುವ ಸಂಗತಿ ಹೊಸದಲ್ಲ. ಆದರೆ ಈ ಮೊದಲು ನಾಯಕರು ದಿಗಂತ್ ಎನ್ನಲಾಗಿದ್ದು ಈಗ ಬದಲಾಗಿದೆ. ದಿಗಂತ್ ಸಿಕ್ಕಾಪಟ್ಟೆ ಬ್ಯುಸಿ ಇರುವುದರಿಂದ ಆ ಜಾಗಕ್ಕೆ ಈಗ ನೀನಾಸಂ ಸತೀಶ್ ಬಂದಿದ್ದಾರೆ.

  ಪವನ್ ಕಷ್ಟದಲ್ಲಿದ್ದಾಗ ಬಂದು ನಾಯಕನ ಕೊರತೆ ನೀಗಿಸಿದ್ದಿ ಇದೇ ದಿಗಂತ್. ಈ ವಿಷಯ ಎಲ್ಲಡೆ ಸುದ್ದಿಯಾಗಿತ್ತು ಕೂಡ. ಆಗ ಅದು ನಿಜವೂ ಆಗಿತ್ತು. ಆದರೆ ಈಗ ಶೂಟಿಂಗ್ ಪ್ರಾರಂಭವಾಗುವ ಹಂತದಲ್ಲಿ ದಿಗಂತ್ ಕಾಲ್ ಶೀಟ್ ಖಾಲಿಯಿಲ್ಲ.

  ಲೂಸಿಯಾ ಚಿತ್ರಕ್ಕಾಗಿ ದಿಗಂತ್ ಆರು ತಿಂಗಳ ಕಾಲ್‌ಶೀಟ್ ಕೊಡಬೇಕಿತ್ತು. ಈ ಆರು ತಿಂಗಳಲ್ಲಿ ಬೇರೆ ಯಾವ ಚಿತ್ರದಲ್ಲೂ ನಟಿಸುವಂತಿರಲಿಲ್ಲ.

  ಇದಕ್ಕೆ ದಿಗಂತ್ "ಅಷ್ಟೊಂದು ಕಾಲಾವಕಾಶ ಸಾಧ್ಯವಿಲ್ಲ. ಬೇರೆ ಚಿತ್ರಗಳಿವೆ. ಅದರಲ್ಲೂ ಕೋಡಿ ರಾಮಕೃಷ್ಣ ಅವರ ಮಹತ್ವಾಕಾಂಕ್ಷೆಯ ಬಿಗ್ ಬಜೆಟ್ ಚಿತ್ರ ನನಗೆ ಸಿಕ್ಕಿದೆ. ಅದನ್ನು ಬಿಟ್ಟು ಬರಲಾರೆ. ಬೇಕಿದ್ದರೆ ಎರಡೆರಡು ಹಂತದ ಚಿತ್ರೀಕರಣ ಇಟ್ಟುಕೊಳ್ಳಿ. ಡೇಟ್ಸ್ ಕೊಡಲು ರೆಡಿಯಿದ್ದೇನೆ" ಎಂದರೆ ಪವನ್ ಒಪ್ಪಿಲ್ಲ.

  ಹೀಗಾಗಿ ಬೇರೆ ದಾರಿ ಕಾಣದೇ ದಿಗಂತ್ ಅವರನ್ನು ಪವನ್ ಮರೆತಿದ್ದಾರೆ. ಸತೀಶ್ ಗೆ ಮಣೆ ಹಾಕಿ ಕರೆದಿದ್ದಾರೆ. ಸತೀಶ್ ಆರು ತಿಂಗಳೇನು, ಒಂದು ವರ್ಷ ಬೇಕಾದರೂ ಲೂಸಿಯಾಕ್ಕೆ ವ್ಯಯಿಸಲು ಸಿದ್ಧರಿದ್ದಾರಂತೆ. ಹಾಗಾಗಿ ದಿಗಂತ್ ಬಾಯ್ ಅಂದು ಸತೀಶ್ ಹಾಯ್ ಅಂದಿದ್ದು ಈಗ ಸುದ್ದಿಯಾಗುತ್ತಿದೆ. (ಒನ್ ಇಂಡಿಯಾ ಕನ್ನಡ)

  English summary
  Dimple Star Diganth Out from Pawan Kamar's upcoming Movie Loosiya. Neenasam Sathish selected as Hero for this movie. Because of Callsheet problem, Diganth came out from the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X