»   » ಅಪ್ಪಟ ಬೆಳ್ಳಿ ಜೊತೆಗೆ ಬೆಳ್ಳಿತೆರೆಗೊಂದು ಅಪ್ಪಟ ಚಿತ್ರ!

ಅಪ್ಪಟ ಬೆಳ್ಳಿ ಜೊತೆಗೆ ಬೆಳ್ಳಿತೆರೆಗೊಂದು ಅಪ್ಪಟ ಚಿತ್ರ!

Posted By:
Subscribe to Filmibeat Kannada

ಚಿತ್ರ ನಿರ್ದೇಶಕ ಗುರುಪ್ರಸಾದ್ ಏನೇ ಮಾಡಿದರು ವಿಭಿನ್ನವಾಗಿರುತ್ತದೆ. ತಮ್ಮ ಮಹತ್ವಾಕಾಂಕ್ಷಿ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದಆಮಂತ್ರಣ ಪತ್ರಿಕೆಯಲ್ಲೂ ವೈವಿಧ್ಯತೆಯನ್ನು ಮೆರೆದಿದ್ದಾರೆ. ವಿಶೇಷವಾಗಿ ರೂಪಿಸಿರುವ ಆಮಂತ್ರಣ ಪತ್ರಿಕೆಯ ಒಂದು ಪ್ರತಿ ದಟ್ಸ್ ಕನ್ನಡ ಕಚೇರಿಗೆ ತಲುಪಿದೆ.

ಹೊಸತನದಿಂದ ಕೂಡಿರುವ ಆಮಂತ್ರಣ ಪತ್ರಿಕೆ ಮೊದಲ ನೋಟದಲ್ಲೆ ಕಣ್ಣುಕುಕ್ಕುವಂತ್ತಿದೆ. ವಿಶೇಷವಾಗಿ ಕಾರ್ಡ್ ಬೋರ್ಡ್ ನಲ್ಲಿ ವಿನ್ಯಾಸಗೊಳಿಸಿರುವ ಆಮಂತ್ರಣ ಪತ್ರಿಕೆಯನ್ನು ಕ್ಲಾಪ್ ಮಾದರಿಯಲ್ಲಿ ರೂಪಿಸಲಾಗಿದೆ. ಇದರ ಒಂದು ಅಂಚಿನಲ್ಲಿ ಬೆಳ್ಳಿಯ ನಾಣ್ಯವನ್ನು ಉಡುಗೊರೆಯಾಗಿ ನೀಡಲಾಗಿದೆ.

ಬೆಳ್ಳಿನಾಣ್ಯದ ಕೆಳಗೆ "ಅಪ್ಪಟ ಬೆಳ್ಳಿ ,ಬೆಳ್ಳಿತೆರೆಗೊಂದು ಅಪ್ಪಟ ಚಿತ್ರ" ಎಂದು ಮುದ್ರಿಸಲಾಗಿದೆ. ಲೋಹಗಳಲ್ಲೆ ಬೆಳ್ಳಿ ಅತ್ಯಂತ ಹೊಳಪುಳ್ಳದ್ದು. ಅದೇ ರೀತಿಯ ಹೊಳಪು ತಮ್ಮ ಚಿತ್ರದಲ್ಲೂ ಇರುತ್ತದೆ ಎಂಬ ಸೂಚನೆಯನ್ನು ಗುರುಪ್ರಸಾದ್ ಪರೋಕ್ಷವಾಗಿ ಕೊಟ್ಟಂತಿದೆ.

"ಸಿನಿಮಾ ಮಾಡಲಾಗದ ಕಥೆಗಳು ಮತ್ತಿತರ ಲೇಖನಗಳು" ಕೃತಿಯೂ ಲೋಕಾರ್ಪಣೆಯಾಗಲಿದೆ
ಆರಂಭದಿಂದಲೂ ಗುರುಪ್ರಸಾದ್ ತಮ್ಮ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದ ಬಗ್ಗೆ ಕುತೂಹಲ ಕಾಯ್ದುಕೊಂಡೆ ಬಂದಿದ್ದರು. ಶುಕ್ರವಾರ (ಆ.26) 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರ ಸೆಟ್ಟೇರುವ ಮೂಲಕ ಈ ಎಲ್ಲಾ ಕುತೂಹಲಗಳಿಗೆ ತೆರೆಬೀಳಲಿದೆ. ಅಬ್ಬಾಯಿನಾಯ್ಡು ಸ್ಟುಡಿಯೋದ ಪುಟ್ಟಣ್ಣ ಕಣಗಾಲ್ ಫ್ಲೋರ್ ನಲ್ಲಿ ಚಿತ್ರೀಕರಣ ಚಾಲನೆ ಪಡೆದುಕೊಳ್ಳಲಿದೆ.

ಇದೇ ಸಂದರ್ಭದಲ್ಲಿ ಗುರುಪ್ರಸಾದ್ ಬರೆದಿರುವ "ಸಿನಿಮಾ ಮಾಡಲಾಗದ ಕಥೆಗಳು ಮತ್ತಿತರ ಲೇಖನಗಳು" ಕೃತಿಯೂ ಲೋಕಾರ್ಪಣೆಯಾಗಲಿದೆ. ಪುಸ್ತಕ ಬಿಡುಗಡೆ ಮತ್ತು ಮುಹೂರ್ತ ಒಟ್ಟಿಗೆ ನೆರವೇರುತ್ತಿರುವುದು ಗುರುಪ್ರಸಾದ್ ಸಂತಸವನ್ನು ಹೆಚ್ಚಿಸಿದೆ. ಪುಸ್ತಕವನ್ನು ಅಂಬರೀಷ್ ಅವರು ಬಿಡುಗಡೆ ಮಾಡಲಿದ್ದಾರೆ.

ಚಿತ್ರಕ್ಕೆ ಕ್ಲಾಪ್ ಮಾಡುವವರು ಪಾರ್ವತಮ್ಮ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕ್ಯಾಮೆರಾ ಚಾಲನೆ ಮಾಡಲಿದ್ದಾರೆ. ಈ ಹಿಂದೆ ತಮ್ಮ ಯಶಸ್ವಿ ಚಿತ್ರ 'ಎದ್ದೇಳು ಮಂಜುನಾಥ'ನಿಗೆ ಸಂಗೀತ ನಿರ್ದೇಶಿಸಿದ್ದ ಅನೂಪ್ ಸೀಳಿನ್ ಅವರಿಗೆ ಈ ಬಾರಿಯೂ ಗುರು ಅವಕಾಶ ಕೊಟ್ಟಿರುವುದು ವಿಶೇಷ.

ಉಳಿದಂತೆ ಪಿ ಎಲ್ ರವೀ ಛಾಯಾಗ್ರಹಣ, ಶಾರದಾಸುತ ಸಾಹಿತ್ಯ, ಬಿ ಎಸ್ ಕೆಂಪರಾಜು ಸಂಕಲನ, ರವಿವರ್ಮ ಸಾಹಸವಿದೆ. ಆಮಂತ್ರಣ ಪತ್ರಿಕೆಯಲ್ಲೂ ಚಿತ್ರದತಾರಾಗಣದ ಬಗ್ಗೆ ಗುರುಪ್ರಸಾದ್ ಸುಳಿವು ಬಿಟ್ಟುಕೊಟ್ಟಿಲ್ಲ. ಕುತೂಹಲ ಕಾಯ್ದಿಟ್ಟಿರುವ ಗುರು ಚಿತ್ರದ ತಾರಾಗಣದ ವಿವರಗಳು ಮುಹೂರ್ತದ ದಿನ ಬಯಲಾಗಲಿವೆ. ಅಲ್ಲಿಯವರೆಗೂ ಕಾಯಲೇಬೇಕು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada