»   » ಮೈಸೂರು ದಸರಾ ಉತ್ಸವಕ್ಕೆ ಸಿನಿಮಾ ಥಳಕು

ಮೈಸೂರು ದಸರಾ ಉತ್ಸವಕ್ಕೆ ಸಿನಿಮಾ ಥಳಕು

Posted By:
Subscribe to Filmibeat Kannada

ಈ ಬಾರಿಯ ದಸರಾ ಉತ್ಸವದಲ್ಲಿ 14 ಮಕ್ಕಳ ಚಿತ್ರಗಳು ಸೇರಿದಂತೆ ಒಟ್ಟು 77 ಪ್ರಸಿದ್ಧ ಸಿನಿಮಾಗಳು ಪ್ರದರ್ಶನವಾಗಲಿವೆ. ಸೆ.30 ರಿಂದ ಪ್ರಾರಂಭವಾಗುವ ಪ್ರದರ್ಶನವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಮಧ್ಯಾಹ್ನ 12.30ಕ್ಕೆ ಉದ್ಘಾಟಿಸಲಿದ್ದಾರೆ. ಪ್ರದರ್ಶನಗೊಳ್ಳಲಿರುವ ಕನ್ನಡದ 49 ಚಿತ್ರಗಳಲ್ಲಿ ಪ್ರಶಸ್ತಿ ಪಡೆದ 14 ಚಿತ್ರಗಳು ಸೇರಿವೆ. ಇವುಗಳ ಜೊತೆಗೆ ಇಂಗ್ಲಿಷ್ ಚಿತ್ರ ಪ್ರದರ್ಶನವು ಇರುತ್ತದೆ. ಮಕ್ಕಳ ಚಿತ್ರಗಳನ್ನು ಬಾಲಭವನದಲ್ಲಿ ಹಾಗೂ ಉಳಿದ ಚಿತ್ರಗಳನ್ನು ಕಲಾಮಂದಿರದಲ್ಲಿ ಪ್ರದರ್ಶಿಸಲಾಗುತ್ತದೆ.

ಬಾಲ ಮಂದಿರ ಹಾಗೂ ಕಲಾ ಮಂದಿರದಲ್ಲಿ ಪ್ರತಿ ದಿನ ಎರಡು ಚಿತ್ರ ಪ್ರದರ್ಶನಗಳಿರುತ್ತವೆ. ಹಾಗೆಯೇ ಕನ್ನಡ ಚಿತ್ರ ಬೆಳೆದು ಬಂದ ಹಾದಿಯನ್ನು ಬಿಂಬಿಸುವ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಮೈಸೂರಿನ ಚಿತ್ರಮಂದಿರ, ಕಲಾಮಂದಿರ ಹಾಗೂ ಬಾಲಭವನದಲ್ಲಿ ಛಾಯಾಚಿತ್ರ ಪ್ರದರ್ಶನವಿರುತ್ತದೆ. ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ಮೈಸೂರಿನ ಏಳು ಚಿತ್ರಮಂದಿರಗಳನ್ನು ಆಯ್ಕೆ ಮಾಡಲಾಗಿದೆ.

ಉದ್ಘಾಟನಾ ಕಾರ್ಯಕ್ರಮಕ್ಕೆ ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ನಟರಾದ ಶ್ರೀನಾಥ್, ಕೆ.ಎಸ್.ಅಶ್ವಥ್, ನಿರ್ದೇಶಕ ಗಿರೀಶ್ ಕಾಸರವಳ್ಳಿ, ಉಮಾಶ್ರೀ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಭಾಗವಹಿಸಲಿದ್ದಾರೆ. ಪ್ರಿಂಟ್ ಗಳ ಕೊರತೆಯ ಕಾರಣ ಹಿಂದಿ ಚಿತ್ರ ಪ್ರದರ್ಶನವನ್ನು ಈ ಬಾರಿ ಕೈಬಿಡಲಾಗಿದೆ ಎಂದು ದಸರಾ ಸಿನಿಮಾ ಉಪ ಸಮಿತಿ ಅಧ್ಯಕ್ಷ ಮದನ್ ಮಲ್ಲು ತಿಳಿಸಿದರು.

ಸೆ.30ರಿಂದ ರಂಗಾಯಣ ಬಿ.ವಿ.ಕಾರಂತ ನವರಾತ್ರಿ ರಂಗೋತ್ಸವವನ್ನು ಒಂಬತ್ತು ದಿನಗಳ ನಡೆಸಲಾಗುತ್ತದೆ. ಪ್ರತಿದಿನ ಮಧ್ಯಾಹ್ನ 3.30ರಿಂದ ಸಂಜೆ 6.30ರ ತನಕ ಪ್ರದರ್ಶನಗಳಿರುತ್ತವೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಗಣ್ಯರನ್ನು ಪ್ರತಿದಿನ ಸನ್ಮಾನಿಸಲಾಗುತ್ತದೆ. ಪ್ರಣಯರಾಜ ಶ್ರೀನಾಥ್ ದಸರಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X