ಕೊಳ್ಳೆಗಾಲದಲ್ಲಿ ಗಣೇಶನ ಮದುವೆ ಸಂಭ್ರಮ
ಸದಾ ಹಚ್ಚಹಸಿರಿನಿಂದ ಕಂಗೊಳ್ಳಿಸುವ ಜಿಲ್ಲೆ ಕೊಳ್ಳೆಗಾಲ. ಆ ಜಿಲ್ಲೆಯ ಸಮೀಪ ಎಡಕುರಿಯಾ ಎಂಬ ಸುಂದರ ಹಳ್ಳಿ. ಆ ಹಳ್ಳಿಯಲ್ಲಿ ಗಣೇಶ್ ನಾಯಕನಾಗಿ ನಟಿಸುತ್ತಿರುವ 'ಮದುವೆಮನೆ' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಗಣೇಶ್, ಶ್ರದ್ಧಾಆರ್ಯ, ಸ್ಪೂರ್ತಿ ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.
ಜೆ.ಜೆ ಇಂಟರ್ ನ್ಯಾಷನಲ್ ಸಂಸ್ಥೆಯ ಮೂಲಕ ರುಹಿನಾ ರೆಹಮಾನ್ ಅವರು ನಿರ್ಮಿಸುತ್ತಿರುವ 'ಮದುವೆಮನೆ' ಚಿತ್ರವನ್ನು ಸುನೀಲ್‌ಕುಮಾರ್ ಸಿಂಗ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಕಿರುತೆರೆಯ ಧಾರಾವಾಹಿಗಳನ್ನು ನಿರ್ದೇಶಿಸಿ ಅನುಭವವಿರುವ ನಿರ್ದೇಶಕರಿಗೆ ಹಿರಿತೆರೆಯಲ್ಲಿ ಇದು ಚೊಚ್ಚಲ ಯತ್ನ.
ಗಣೇಶ್ ಹಾಗೂ ಶ್ರದ್ದಾಆರ್ಯ ನಾಯಕ/ನಾಯಕಿಯರಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ 'ಜುಗಾರಿ'ಯ ಅವಿನಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಬಲನಾಣಿ, ಶರಣ್, ಹನುಮಂತೇಗೌಡ, ಕೆ.ವಿ.ನಾಗೇಶ್‌ಕುಮಾರ್, ಎಂ.ಎನ್.ಎಂ. ಚಿತ್ಕಲಾ, ಡಾ.ನಾಗೇಶ್, ಜಾದವ್‌ಮೈಸೂರು, ಚಿನ್ನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರು ಛಾಯಾಗ್ರಹಣವಿದೆ. ಸೌಂದರ್‌ರಾಜ್ ಸಂಕಲನ, ರವಿವರ್ಮ ಸಾಹಸ, ಮೋಹನ್ ಬಿ ಕೆರೆ ಕಲಾನಿರ್ದೇಶನ 'ಮದುವೆಮನೆ' ಚಿತ್ರಕ್ಕಿದೆ.


Click it and Unblock the Notifications











