»   » ಗೋವಾ ಬೀಚ್ ನಲ್ಲಿ ಮೇಷ್ಟ್ರ ಜೊತೆ ಮಂಜಣ್ಣ!

ಗೋವಾ ಬೀಚ್ ನಲ್ಲಿ ಮೇಷ್ಟ್ರ ಜೊತೆ ಮಂಜಣ್ಣ!

Subscribe to Filmibeat Kannada
producer manju
ಕಳೆದೊಂದು ವರ್ಷದಲ್ಲಿ ಕನ್ನಡ ಚಿತ್ರರಂಗ ಬರೋಬ್ಬರಿ ಮುನ್ನೂರ ಐವತ್ತು ಕೋಟಿ ರೂಪಾಯಿ ಲುಕ್ಸಾನು ಅನುಭವಿಸಿದೆ. ನಾಯಕ ನಟರು ತಮ್ಮ ಸಂಭಾವನೆ ಇಳಿಸಿಕೊಳ್ಳದಿದ್ದಲ್ಲಿ ಕನ್ನಡ ಚಿತ್ರರಂಗಕ್ಕೆ ಉಳಿಗಾಲವಿಲ್ಲ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯೊಂದರಲ್ಲಿ ತಮ್ಮ ವಿಚಾರಧಾರೆ ಮಂಡಿಸಿದ್ದ ಗಂಡುಗಲಿ ಮಂಜು ಈಗ ಏನು ಮಾಡುತ್ತಿದ್ದಾರೆ? ಕೊಂಚ ತಮಾಷೆಯಾಗಿ ಹೇಳುವುದಾದರೆ ಅವರು ಗೋವಾ ಬೀಚುಗಳಲ್ಲಿ ಸುತ್ತಾಡುತ್ತಿದ್ದಾರೆ. ಅದೇ ಮಾತನ್ನು ಗಂಭೀರವಾಗಿ ಹೇಳುವುದಾದರೆ, ಮಂಜಣ್ಣ ಗೋವಾ ಚಿತ್ರೋತ್ಸವದಲ್ಲಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುತ್ತಿದ್ದಾರೆ.

ಚಿತ್ರೋತ್ಸವದಲ್ಲಿ ಮಂಜು ಕೆಲವು ಚಿತ್ರಗಳನ್ನು ನೋಡಿದ್ದೂ ಉಂಟು. ಚೋದ್ಯವೆಂದರೆ ಅವರಿಗೆ ತಾವು ನೋಡಿದ ಅನೇಕ ಸಿನಿಮಾಗಳ ಹೆಸರೇ ತಿಳಿದಿರಲಿಲ್ಲ. 'ಇದೇನು ಮಂಜಣ್ಣ ಹೀಗೆ" ಎಂದರೆ ಅವರದು ಬೇರೆಯೇ ಲೆಕ್ಕಾಚಾರದ ಮಾತು. ಅದು 'ಒಲವೇ ಜೀವನ ಲೆಕ್ಕಾಚಾರ" ಚಿತ್ರದ್ದು.

ಲೆಕ್ಕಾಚಾರ ಸಿನಿಮಾ ಡಬ್ಬಿಂಗ್ ಹಂತದಲ್ಲಿದೆ. ನಾಗತಿಹಳ್ಳಿ ಮೇಷ್ಟ್ರು ಸಿನಿಮಾ ಚೆನ್ನಾಗಿ ಮಾಡಿಕೊಟ್ಟಿದ್ದಾರೆ ಎಂದರು ಮಂಜು. ಹಾಂ, ಇದೇ ನಾಗತಿ ಮೇಷ್ಟ್ರ ಜೊತೆಯೇ ಮಂಜು ಗೋವಾದಲ್ಲಿ ಅಡ್ಡಾಡುತ್ತಿರುವುದು. ನಾಗತಿಹಳ್ಳಿಯವರಿಗೆ ಸಿನಿಮಾ ಧ್ಯಾನವಾದರೆ, ಮಂಜಣ್ಣನವರು ವಿವಿಧ ಧ್ಯಾನ! 'ತಡವಾಯಿತು. ಬೆಂಗಳೂರಿಗೆ ಹೊರಡಬೇಕು. ಡಬ್ಬಿಂಗ್ ಕೆಲಸ ಬಾಕಿಯಿದೆ" ಎಂದರು ಮಂಜು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada