ಇಲಿಯಾನಾ ದಿನಗೂಲಿ ದೀಪಿಕಾ ಪಡುಕೋಣೆಗಿಂತ ಜಾಸ್ತಿ!

By Rajendra

ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯ ಕೈಕೊಟ್ಟ ಕಾರಣ 'ರಾಣಾ' ಚಿತ್ರದ ಚಟುವಟಿಕೆಗಳೂ ಸ್ತಬ್ಧವಾಗಿದ್ದವು. ಈಗ ಮತ್ತೆ ರಾಣಾ ಗರಿಗೆದರಿದೆ. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯಲಿದ್ದು, ಇದಕ್ಕಾಗಿ ಭಾರಿ ಸೆಟ್ಸ್‌ಗಳನ್ನು ನಿರ್ಮಿಸಲಾಗುತ್ತಿದೆ.

ಈ ಚಿತ್ರದ ನಾಯಕಿ ಡಿಂಪಲ್ ಸುಂದರಿ ದೀಪಿಕಾ ಪಡುಕೋಣೆ. ಲೇಟೆಸ್ಟ್ ಸುದ್ದಿ ಎಂದರೆ ಈ ಚಿತ್ರಕ್ಕೆ ಮತ್ತೊಬ್ಬ ನಾಯಕಿಯ ರಂಗಪ್ರವೇಶವಾಗಿದೆ. ಆಕೆ ಬೇರಾರು ಅಲ್ಲ ದಕ್ಷಿಣದ ಬೆಡಗಿ ಇಲಿಯಾನಾ. ಈ ಚಿತ್ರದಲ್ಲಿ ದೀಪಿಕಾಗಿಂತಲೂ ಇಲಿಯಾನಾ ಸಂಭಾವನೆ ಜಾಸ್ತಿ ಎಂಬುದು.

ರಾಣಾ ಚಿತ್ರದ 90 ದಿನಗಳ ಕಾಲ್ ಶೀಟ್‌ಗೆ ರು.2 ಕೋಟಿ ಚಾರ್ಜ್ ಮಾಡಿದ್ದಾರೆ ದೀಪಿಕಾ. ಆದರೆ ಕೇವಲ 15 ದಿನಕ್ಕೆ ಇಲಿಯಾನಾ ಸಂಭಾವನೆ ರು.60 ಲಕ್ಷ ಎನ್ನುತ್ತವೆ ಮೂಲಗಳು. ಈ ಪ್ರಕಾರ ಲೆಕ್ಕಾಚಾರ ಮಾಡಿದರೆ ದೀಪಿಕಾ ದಿನಗೂಲಿ ರು.2 ಲಕ್ಷ ಚಿಲ್ಲರೆ ಇದ್ದರೆ ಇಲಿಯಾನಾ ರೇಟು ರು.4 ಲಕ್ಷ ಚಿಲ್ಲರೆಯಾಗುತ್ತದೆ. ಇದು ಚಿಲ್ಲರೆ ಸಮಾಚಾರ ಎಂದು ತಳ್ಳಿಹಾಕುವಂತಿಲ್ಲ. (ಏಜೆನ್ಸೀಸ್)

More from Filmibeat

English summary
The latest buzz is that actress Ileana charges more than Deepika Padukone! Both are acting in Rajinikanth latest flick Rana. while Deepika Padukone is getting Rs 2 crore for 90 days work in Rana , and Ileana is getting Rs 60 lakh for just 15 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X