ಮಾತು ಮುಗಿಸಿದ 'ಐ.ಪಿ.ಸಿ ಸೆಕ್ಷನ್ 300'

ಕೆಲವು ನಟರು ಸ್ವತಃ ಡಬ್ಬಿಂಗ್‌ನಲ್ಲಿ ಪಾಲ್ಗೊಂಡರೆ, ಮತ್ತೆ ಕೆಲವು ಕಲಾವಿದರಿಗೆ ಕಂಠದಾನ ಕಲಾವಿದರು ಮಾತನಾಡುವುದುಂಟು. ಮಾತುಗಳ ಜೋಡಣೆ ಮುಗಿದರೆ ಚಿತ್ರದ ಅರ್ಧ ಚಟುವಟಿಕೆಗಳು ಮುಗಿದಂತೆ ಎಂಬ ಅಭಿಪ್ರಾಯ ನಿರ್ಮಾಪಕರದು.ಈ ನಿಟ್ಟಿನಲ್ಲಿ ತಮ್ಮ ಚಿತ್ರಕ್ಕೆ ಡಬ್ಬಿಂಗ್ ಪೂರ್ಣಗೊಳಿಸಿರುವ ನಿರ್ಮಾಪಕ ಆರ್.ಶಂಕರ್ ನಂತರದ ಚಟುವಟಿಕೆಗಳನ್ನು ಶೀಘ್ರದಲ್ಲೇ ಪೂರೈಸಿ ಚಿತ್ರವನ್ನು ತೆರೆಗೆ ತರುವ ಯತ್ನದಲಿದ್ದಾರೆ.
ಕುತೂಹಲ ಸನ್ನಿವೇಶಗಳಿಂದ ಕೂಡಿರುವ ಈ ಚಿತ್ರವನ್ನು ಶಶಿಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ವೀರಸಮರ್ಥ್ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಈಶ್ವರ್ ಸಂಕಲನ, ಬಾಬು ಖಾನ್ ಕಲೆ, ಅರುಣ್ ಕುಮಾರ್ ಸಹ ನಿರ್ದೇಶನ, ಅಚ್ಯುತ್ ರಾವ್ ನಿರ್ಮಾಣ ನಿರ್ವಹಣೆ, ಹಾಗೂ ಎಚ್.ನರಸಿಂಹ(ಜಾಲಹಳ್ಳಿ) ನಿರ್ಮಾಣ ಮೇಲ್ವಿಚಾರಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿಜಯರಾಘವೇಂದ್ರ, ಪ್ರಿಯಾಂಕ, ದೇವರಾಜ್, ಸುಮನ್ ರಂಗನಾಥ್, ಸೃಜನ್ ಲೋಕೇಶ್, ಶಂಕರ್, ಮುನಿ, ರವೀಂದ್ರನಾಥ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











