ತಾರೆಗಳ ಮನೆಯಲ್ಲಿ ಸಿಕ್ಕಿದ್ದು 40 ಕೋಟಿ ಬೇನಾಮಿ ಹಣ!

By Rajendra

ತೆಲುಗು ಸಿನಿಮಾ ತಾರೆಗಳಾದ ಅನುಷ್ಕಾ ಶೆಟ್ಟಿ, ನಾಗಾರ್ಜುನ ಹಾಗೂ ರವಿತೇಜ ಅವರ ಮನೆಗಳ ಮೇಲೆ ಆದಾಯ ತೆರಿಗೆ ದಾಳಿ ನಡೆದದ್ದು ಇಡೀ ಆಂದ್ರದಲ್ಲಿ ಸಂಚಲನ ಮೂಡಿಸಿತ್ತು. ಐಟಿ ದಾಳಿಯಲ್ಲಿ ರು.40 ಕೋಟಿ ಬೇನಾಮಿ ಆಸ್ತಿ ದೊರಕಿದೆ. ಈ ಆಸ್ತಿಗೆ ಸೂಕ್ತ ದಾಖಲೆ ಹಾಗೂ ವಿವರ ನೀಡುವಂತೆ ಆದೇಶಿಸಿ ತಾರೆಗಳಿಗೆ ಆದಾಯತೆರಿಗೆ ಅಧಿಕಾರಿಗಳು ನೋಟೀಸು ಜಾರಿ ಮಾಡಿದ್ದಾರೆ.

ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋ, ಬೆಂಗಳೂರು ಹಾಗೂ ಚೆನ್ನೈನಲ್ಲಿರುವ ಅವರ ಮನೆಗಳ ಮೇಲೂ ಏಕಕಾಲಕ್ಕೆ ದಾಳಿ ನಡೆಸಲಾಗಿತ್ತು. ಅನುಷ್ಕಾ ಶೆಟ್ಟಿ ಅವರ ಹೈದರಾಬಾದ್ ಹಾಗೂ ಬೆಂಗಳೂರು ನಿವಾಸದ ಮೇಲೂ ಐಟಿ ದಾಳಿ ನಡೆದಿತ್ತು. ಮುಂಚಿನಿಂದಲೂ ಈ ತಾರೆಗಳ ಮೇಲೆ ಐಟಿ ಅಧಿಕಾರಿಗಳು ಒಂದು ಕಣ್ಣು ಇಟ್ಟಿದ್ದರು.

ಇವರ ಐಶಾರಾಮಿ ಮನೆಗಳು, ಭೂಮಿ ಖರೀದಿ ವ್ಯವಹಾರಗಳು ಐಟಿ ಅಧಿಕಾರಿಗಳ ಕಣ್ಣು ಕುಕ್ಕಿದ್ದವು. ಪಕ್ಕಾ ಪ್ಲಾನ್ ಪ್ರಕಾರವೇ ಅವರು ದಾಳಿ ಮಾಡಿದಾಗ ತಾರೆಗಳ ಬಂಡವಾಳ ಬಯಲಾಗಿದೆ. ಸೂಕ್ತ ಸಮಯ ನೋಡಿ ಐಟಿ ಅಧಿಕಾರಿಗಳು ಮತ್ತಷ್ಟು ಸಿನಿಮಾ ತಾರೆಗಳ ಮನೆಗಳ ಮೇಲೆ ದಾಳಿ ಮಾಡುವ ಸಾಧ್ಯತೆಗಳಿವೆ.

More from Filmibeat

English summary
The Income Tax officers found more than Rs 40 crore unaccounted assets in Telugu actors Anushka and Nagarjuna houses. They sent notices to these actors to give proper accounts and explanation for that.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X