ಈ ಹಾಸ್ಯ ಚಕ್ರವರ್ತಿಯನ್ನು ಅದೇಗೆ ಮರೆಯಲು ಸಾಧ್ಯ?

By Rajendra

T. R. Narasimharaju
ಅರುವತ್ತು ಎಪ್ಪತ್ತರ ದಶಕದಲ್ಲಿ ಹಾಸ್ಯ ಚಕ್ರವರ್ತಿಯಾಗಿ ಕನ್ನಡಿಗರನ್ನು ರಂಜಿಸಿದ "ನರಸಿಂಹರಾಜು' ಅವರನ್ನು ನೆನೆಪಿಸಿಕೊಳ್ಳಲು ಜುಲೈ ತಿಂಗಳು ಅತ್ಯಂತ ಸೂಕ್ತ. ಯಾಕೆಂದರೆ ಅವರು ಜನಿಸಿದ್ದು ಮತ್ತು ನಿಧನವಾಗಿದ್ದು ಎರಡೂ ಜುಲೈ ಮಾಸದಲ್ಲೇ. ನರಸಿಂಹರಾಜು ಗಂಭೀರ ದೃಶ್ಯದಲ್ಲಿದ್ದರೂ ಅವರ ಹಾವಭಾವ, ಬಾಡಿ ಲಾಂಗ್ವೆಜ್ ಎಂಥವರನ್ನೂ ನಗೆಗಡಲಲ್ಲಿ ತೇಲಿಸುತ್ತದೆ.

ಸಂದರ್ಶನವೊಂದರಲ್ಲೊಮ್ಮೆ "ನಗಿಸುವುದು ನನ್ನ ಕರ್ಮ, ನಗುವುದು ನಿಮ್ಮ ಧರ್ಮ" ಎಂದು ಹೇಳಿಕೊಂಡಿದ್ದ ನರಸಿಂಹರಾಜು ಸಂಭಾಷಣೆಯನ್ನು ದೇಹಭಾಷೆಯೊಂದಿಗೆ ಸಂಯೋಜಿಸಿಕೊಂಡಿದ್ದ ಒಬ್ಬ ಅಪ್ಪಟ ಹಾಸ್ಯ ಕಲಾವಿದ. ಪೌರಾಣಿಕ ಪಾತ್ರದಲ್ಲಿ ರಾಜನ ಗೆಳೆಯನಾಗಿ, ಸಾಮಾಜಿಕ ಪಾತ್ರದಲ್ಲಿ ನಾಯಕನಿಗೆ ಮಿತ್ರನಾಗಿ ಅವರ ಪಾತ್ರ ಇದ್ದೇ ಇರುತ್ತಿತ್ತು.

ಚಿತ್ರಕ್ಕೆ ನಾಯಕ, ನಾಯಕಿಯಂತೆ ಹಾಸ್ಯನಟನ ಪಾತ್ರವೂ ಮುಖ್ಯ ಎನ್ನುವುದನ್ನು ತೋರಿಸಿಕೊಟ್ಟವರು ನರಸಿಂಹರಾಜು. 1926 ರಿಂದ 1979ರ ವರೆಗೆ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನರಸಿಂಹರಾಜು ತಮ್ಮ ನಾಲ್ಕನೇ ವಯಸ್ಸಿನಲ್ಲೇ ಬಾಲಕಲಾವಿದನಾಗಿ ಬಣ್ಣ ಹಚ್ಚಿಕೊಂಡರು. ರಂಗ ಮಂಚದ ಮೇಲೆ ಬಂದರೆ ಸಾಕು ಪ್ರೇಕ್ಷಕರಿಗೆ ಪುಷ್ಕಳ ಹಾಸ್ಯ ಖಚಿತ. ಡಾ. ರಾಜ್ ಜೊತೆಗೆ 'ಬೇಡರ ಕಣ್ಣಪ್ಪ' ಚಿತ್ರದಮೂಲಕ ಚಿತ್ರರಂಗ ಪ್ರವೇಶಿಸಿದರಾಜು ನಂತರವೂ ರಂಗ ಭೂಮಿಯನ್ನು ಕಡೆಗಣಿಸಲಿಲ್ಲ.

ಜುಲೈ 1926 ರಲ್ಲಿ ಜನಿಸಿದ ಇವರು ನಿಧನಹೊಂದಿದ್ದು ಜುಲೈ 20ರ 1979 ರಂದು. ತಮ್ಮ 56ನೇ ವಯಸ್ಸಿನಲ್ಲಿ ನಸುಕಿನ 4.30 ರ ಸಮಯದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದರು. ಇಂತಹ ಮಹಾನ್ ಹಾಸ್ಯ ಚಕ್ರವರ್ತಿಗೆ ಒಮ್ಮೆಯೂ ರಾಜ್ಯ ಸರಕಾರ ಪ್ರಶಸ್ತಿ ನೀಡಲಿಲ್ಲ ಅಥವಾ ಅವರ ನೆನಪಿಸುವಂತಹ ಯಾವುದೇ ಕೆಲಸ ಮಾಡಿಲ್ಲ ಎನ್ನುವುದು ನೋವಿನ ವಿಷಯ. ಕನ್ನಡಿಗರ ನೆನಪಿನಲ್ಲಿ ಇನ್ನೂ ಮಾಸದ ಈ ಹಾಸ್ಯ ಚಕ್ರವರ್ತಿಯನ್ನು ಸ್ಮರಿಸಲು ಇದೇ ಸೂಕ್ತ ಸಮಯ ಅಲ್ಲವೆ?

More from Filmibeat

English summary
Kannada films popular comedy actor T. R. Narasimharaju has acted in more than 250 Kannada movies between 1954 and 1979. He had the necessary looks and voice needed by a comedian.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X