ಬುದ್ಧಿವಂತರಿಗೆ ಮಾತ್ರವಲ್ಲ ದಡ್ಡರು ನೋಡಬಹುದು!

By Rajendra

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸಿದ್ದ 'ಎ' ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ ಹೊಸ ದಾಖಲೆ ನಿರ್ಮಿಸಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ 'ಎ-2' ಚಿತ್ರ ಬರಲಿದೆ. ಆದರೆ ಈ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿಲ್ಲ.ಆಕ್ಷನ್, ಕಟ್ ಸಹ ಹೇಳುತ್ತಿಲ್ಲ. 'ಎ' ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಜಗನ್ನಾಥ್ ಅವರ ಸಹೋದರ ಬಸವರಾಜು 'ಎ-2' ಚಿತ್ರದ ನಿರ್ಮಾಪಕರು.

ಚಿತ್ರದ ನಾಯಕ ನಟ ರೂಪೇಶ್. ಇವರು ಈ ಮುಂಚೆ 'ಅಗ್ರಹಾರ' ಚಿತ್ರದಲ್ಲಿ ನಟಿಸಿದ್ದರು. ಉಳಿದ ಕಲಾವಿದರು ಹಾಗೂ ತಂತ್ರಜ್ಞರ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ. ಹನ್ನೊಂದು ವರ್ಷಗಳ ಹಿಂದೆ ಬಂದ ಉಪೇಂದ್ರ 'ಎ' ಚಿತ್ರ ಹೊಸಬರಿಂದ ಕೂಡುತ್ತು. ಚಾಂದಿನಿ, ಗುರುಕಿರಣ್, ಎಚ್ ಸಿ ವೇಣು ಮುಂತಾದವರಿಂದ ಕೂಡಿದ್ದ ಈ ಚಿತ್ರ ವಿಭಿನ್ನವಾಗಿದ್ದ ಕಾರಣ ಪ್ರೇಕ್ಷಕರನ್ನು ಸೆಳೆದಿತ್ತು.

ಇದೀಗ ಮೂಡಿಬರುತ್ತಿರುವ 'ಎ-2' ಚಿತ್ರ ಸಹ ಹೊಸಬರಿಂದ ಕೂಡಿದೆ. ಒಂದು ಮೂಲಗಳ ಪ್ರಕಾರ 'ಎ' ಚಿತ್ರ ಬಾಕ್ಸಾಫೀಸಲ್ಲಿ 24 ಕೋಟಿ ರುಪಾಯಿ ಬಾಚಿತ್ತಂತೆ. ಉಪೇಂದ್ರ ಅವರ ಡೈಲಾಗ್, ವಿಭಿನ್ನ ನಿರ್ದೇಶನದಿಂದ ಗಮನ ಸೆಳೆದ ಚಿತ್ರ. 'ಬುದ್ಧಿವಂತರಿಗೆ ಮಾತ್ರ' ಎಂಬ ಅಡಿಬರಹ ಕೊಡುವ ಮೂಲಕ ಉಪೇಂದ್ರ ಗಮನ ಸೆಳೆದಿದ್ದರು.

'ಎ-2' ಚಿತ್ರಕ್ಕೂ ಅದೇ ರೀತಿಯ ಅಡಿಬರಹವನ್ನು ಕೊಡಲಾಗಿದೆ. 'ದಡ್ಡರೂ ನೋಡಬಹುದಾದ ಚಿತ್ರ' ಎಂಬುದು ಚಿತ್ರದ ಟ್ಯಾಗ್ ಲೈನ್. 'ಎ' ಚಿತ್ರದಲ್ಲಿ ಗುರುಕಿರಣ್ ಅವರ ಸಂಗೀತವೂ ವಿಭಿನ್ನವಾಗಿತ್ತು. ಮಾರಿ ಕಣ್ಣು ಹೋರಿ ಮ್ಯಾಲೆ, ಇದು ಒನ್ ಡೇ ಮ್ಯಾಚು ಕಣೋ, ಹೇಳ್ಕೊಳ್ಳಕ್ಕೊಂದೂರು ಹಾಡುಗಳು ಜನಪ್ರಿಯವಾಗಿದ್ದವು. 'ಎ-2'ಚಿತ್ರ ಹೇಗಿರುತ್ತದೆ ಎಂಬ ಕುತೂಹಲ ಪ್ರೇಕ್ಷಕರದು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X