»   » ವಿದೇಶ ಸುತ್ತಿ ಬಂದ ಪ್ರಜ್ವಲ್ ರ 'ನನ್ನವನು

ವಿದೇಶ ಸುತ್ತಿ ಬಂದ ಪ್ರಜ್ವಲ್ ರ 'ನನ್ನವನು

Posted By:
Subscribe to Filmibeat Kannada

ಈಗಿನ ಬಹುತೇಕ ಚಿತ್ರಗಳ ಹಾಡುಗಳು ವಿದೇಶದಲ್ಲಿ ಚಿತ್ರೀಕೃತವಾಗುತ್ತಿದೆ. ಮತ್ತೆ ಇದರಲೇನಿದೆ ವಿಶೇಷ ಅನಿಸುವುದು ಸಹಜ. ಆದರೆ ಮಾರ್ಕ್‌ವೆಲ್ ಸಂಸ್ಥೆಯ ನಿರ್ಮಾಣದ ನನ್ನವನು ಚಿತ್ರಕ್ಕೆ ಹನ್ನೊಂದು ದಿನಗಳಲ್ಲಿ ಮೂರು ಹಾಡುಗಳು ಮೂರು ದೇಶಗಳಲ್ಲಿ ಚಿತ್ರೀಕೃತವಾಗಿದೆ.

'ಮುತ್ತು ತಾರೆ ಮುತ್ತಮ್ಮ, ಹೆಂಡ್‌ತಮ್ಮ ಸುವ್ವಿಸುವ್ವಿ ಸುವ್ವಲಾಲಿ' ಎಂಬಗೀತೆಗೆ ಪ್ರಜ್ವಲ್ ಹಾಗೂ ಅಂದ್ರಿತಾ ರೇ ಆಸ್ಟ್ರೀಯಾ, ಜರ್ಮನ್‌ನಲ್ಲಿ ಹೆಜ್ಜೆಹಾಕಿದ್ದ ನಂತರ ಅದೇ ದೇಶದ ಬೇರೆ ಸ್ಥಳದಲ್ಲಿ ವಿಶ್ವ ಹಾಗೂ ಪ್ರಜ್ವಲ್ ಅಭಿನಯದಲ್ಲಿ ಹೇ ಮಾಮು ನಮ್ಮ ಗಾಂಧಿ ಸ್ಟೈಲನ್ನು ನೋಡು ನೋಡು ಎಂಬ ಹಾಡನ್ನು ಚಿತ್ರೀಕರಿಸಿಕೊಳ್ಳಲಾಯಿತು. ಈ ಗೀತೆಗಳ ಚಿತ್ರೀಕರಣ ಮುಗಿಸಿ ಇಟಲಿಗೆ ಬಂದ ಚಿತ್ರತಂಡ ಪ್ರಜ್ವಲ್ ಹಾಗೂ ಅಂದ್ರಿತಾ ರೇ ಅಭಿನಯದಲ್ಲಿ 'ಮೊದಲ ಬಾರಿಗೆ ನನಗೇನೋ ಆಗಿದೆ ನಿನ್ನದೇ ಧ್ಯಾನ ಗುಂಗಾಗಿ ಹೋಗಿದೆ ಎಂಬಗೀತೆಯನ್ನು ಚಿತ್ರೀಕರಿಸಿಕೊಂಡಿದೆ. ಈ ಮೇಲಿನ ಮೂರು ಗೀತೆಗಳನ್ನು ಡಾ.ನಾಗೇಂದ್ರಪ್ರಸಾದ್ ಅವರೇ ರಚಿಸಿದ್ದು ಹರೀಶ್ ಪೈ ನೃತ್ಯ ಸಂಯೋಜಿಸಿದ್ದಾರೆ.

ಹೈದರಬಾದ್, ಬೆಂಗಳೂರು ನಗರಗಳಲ್ಲಿ ಮಾತಿನಭಾಗದ ಚಿತ್ರೀಕರಣ ಮುಗಿಸಿರುವ ಈ ಚಿತ್ರಕ್ಕೆ ಸೆಪ್ಟಂಬರ್ ಮೊದಲವಾರದಲ್ಲಿ ಕೊನೆಯಹಂತದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ಮಾಪಕ ತುಳಸಿಗೋಪಾಲ್ ತಿಳಿಸಿದ್ದಾರೆ.

ಮಾರ್ಕ್‌ವೆಲ್ ಎಂಟರ್ ಟೈನ್‌ಮೆಂಟ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ನನ್ನವನು ಚಿತ್ರವನ್ನು ಶ್ರೀನಿವಾಸರಾಜು ಕತೆ, ಚಿತ್ರಕತೆ ಬರೆದು ನಿರ್ದೇಶಿಸುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಸಂಗೀತವಿರುವ ಈ ಚಿತ್ರಕ್ಕೆ ದತ್ತು ಅವರ ಛಾಯಾಗ್ರಹಣವಿದೆ. ಎಂ.ಎಸ್.ರಮೇಶ್ ಸಂಭಾಷಣೆ, ಥ್ರಿಲ್ಲರ್‌ಮಂಜು ಸಾಹಸ, ಹೊಸ್ಮನೆ ಮೂರ್ತಿ ಕಲೆ, ಥಾಮಸ್ ಪ್ರಸಾದ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್, ಅಂದ್ರಿತಾ ರೇ, ಕಿಶೋರಿಬಲ್ಲಾಳ್, ಅವಿನಾಶ್, ಜಯಂತಿ, ದೊಡ್ಡಣ್ಣ, ಕೋಮಲ್, ವಿಶ್ವ,,ಬುಲೆಟ್‌ಪ್ರಕಾಶ್, ಮನದೀಪ್‌ರಾಯ್ ಮುಂತಾದವರಿದ್ದಾರೆ. ತುಳಸಿಗೋಪಾಲ್ ಅವರ ಪುತ್ರ ಗಿರಿಧರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

(ದಟ್ಸ್ ಕನ್ನಡ ಸಿನಿ ವಾರ್ತೆ)

ಪ್ರಜ್ವಲ್ ಜೊತೆ ಆಂದ್ರಿತಾ ಮೆರವಣಿಗೆಗೆ ಸಿದ್ಧತೆ
ಮತ್ತೆ ಕ್ರಿಕೆಟ್ ಮೈದಾನದತ್ತ ಪ್ರಜ್ವಲ್ ದೇವರಾಜ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada