For Quick Alerts
  ALLOW NOTIFICATIONS  
  For Daily Alerts

  ಮಡಿಕೇರಿಲಿ ವರ್ಷಧಾರೆ, ನಿಷೇಧಾಜ್ಞೆಗೆ ತಂತ್ರಜ್ಞಾನ

  By Staff
  |

  ಕರ್ಫ್ಯೂ, ಗೋಲಿಬಾರ್ ಚಿತ್ರಗಳ ನಂತರ ಕನ್ನಡದ ಬೆಳ್ಳಿತೆರೆಯ ಮೇಲೆ ರಾರಾಜಿಸಲಿದೆ ನಿಷೇಧಾಜ್ಞೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ನಂತರದಲ್ಲಿ ದೇಶದಲ್ಲಿದ್ದ ಪರಿಸ್ಥಿತಿಯನ್ನು ಬಣಿಸುತ್ತದೆ ಚಿತ್ರದ ಕೆಲವು ಸನ್ನಿವೇಶಗಳು. ಚಿತ್ರೀಕರಣ ಸೇರಿದಂತೆ ಚಿತ್ರೀಕರಣೇತರ ಚಟುವಟಿಕೆಗಳು ಸರಾಗವಾಗಿ ಮುಗಿದಿರುವ ಚಿತ್ರಕ್ಕೆ ಡಿಜಿಟಲ್ ಇಂಟರ್‌ಮೀಡಿಯೇಟ್(ಡಿ ಐ) ತಂತ್ರಜ್ಞಾನವನ್ನು ಮುಂಬೈನ ಆಡ್‌ಲ್ಯಾಬ್ಸ್‌ನಲ್ಲಿ ಆಳವಡಿಸಲಾಗಿದೆ ಎಂದು ನಿರ್ದೇಶಕ ಪದ್ಮನಾಭ ತಿಳಿಸಿದ್ದಾರೆ.

  ಕನ್ನಡದಲ್ಲಿ ಡಿ ಐ ತಂತ್ರಜ್ಞಾನ ಅಳವಡಿಕೆಯಾಗಿರುವುದು ಬೆರಳಣಿಕೆಯಷ್ಟು ಚಿತ್ರಗಳಿಗೆ ಮಾತ್ರ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಭರತ್‌ಬಾಬು ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್.ವಿ. ನಾರಾಯಣಸ್ವಾಮಿ, ಸೂರ್ಯಕಾಂತ್ ಜಾದವ್ ನಿರ್ಮಿಸುತ್ತಿರುವ ನಿಷೇಧಾಜ್ಞೆಗೆ ನಿರ್ದೇಶಕರೇ ಕತೆ, ಚಿತ್ರಕತೆ ಬರೆದಿದ್ದಾರೆ. ಗಿರಿಧರ್ ಅವರ ಸಂಗೀತವಿರುವ ಚಿತ್ರಕ್ಕೆ ರಮೇಶ್ ಅವರ ಛಾಯಾಗ್ರಹಣವಿದೆ.

  ಮಾಜಿ ಪೊಲೀಸ್ ಅಧಿಕಾರಿ ಅಬ್ದುಲ್‌ಅಜೀಂ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿರುವ ಚಿತ್ರದಲ್ಲಿ ನಿರ್ಮಾಪಕ ನಾರಾಯಣಸ್ವಾಮಿ ಅವರ ಪುತ್ರ ಭರತ್‌ಬಾಬು ನಾಯಕರಲೊಬ್ಬರಾಗಿದ್ದಾರೆ. ಆದಿಲೋಕೇಶ್ ದ್ವಿಪಾತ್ರದಲ್ಲಿ ನಟಿಸುತ್ತಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಪ್ರಿಯಾಂಕ, ಪದ್ಮಜಾರಾವ್, ಶಂಕರ್‌ಅಶ್ವಥ್, ನೀನಾಸಂಅಶ್ವಥ್, ಸುರೇಶ್‌ಮಂಗಳೂರು, ಸ್ನೇಹಾಜಗದೀಶ್, ಧಮ್‌ಕುಮಾರ್ ಮುಂತಾದವರಿದ್ದಾರೆ.
  **********
  ಮಡಿಕೇರಿಯಲ್ಲಿ ವರ್ಷಧಾರೆ - ನವಜೋಡಿಯ ಪ್ರೇಮಧಾರೆ
  ಇತ್ತೀಚೆಗೆ ಬೆಂಗಳೂರಿನ ನೆಟ್‌ಕಲ್ಲಪ್ಪ ವೃತ್ತದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ವೇಮಗಲ್ ಜಗನ್ನಾಥ್ ನಿರ್ದೇಶನದ 10ನೇ ಚಿತ್ರ 'ವರ್ಷಧಾರೆಗೆ ಖ್ಯಾತ ಸಾಹಿತಿ ಡಾ:ಎಚ್.ಎಸ್.ವೆಂಕಟೇಶ್‌ಮೂರ್ತಿ ಚಾಲನೆ ನೀಡಿದರು. ಕಲ್ಯಾಣ ನಗರಿಯಲ್ಲಿ ಮುಹೂರ್ತ ಮುಗಿಸಿದ ನಿರ್ದೇಶಕರು ತಮ್ಮ ತಂಡದೊಂದಿಗೆ ಮಂಜಿನ ನಗರಿ ಮಡಿಕೇರಿಗೆ ಪ್ರಯಾಣ ಬೆಳಿಸಿದರು.

  ಮದುವೆ ಮುಗಿದ ಕೂಡಲೆ ನವದಂಪತಿಗಳು ಮಧುಚಂದ್ರಕ್ಕೆ ಉತ್ತಮ ಸ್ಥಳ ಹುಡುಕಾಡುತ್ತಾರೆ. ಅದೇ ರೀತಿ 'ವರ್ಷಧಾರೆಯಲ್ಲೂ ನೂತನ ಜೋಡಿ ಸಂತೋಷ್ ಹಾಗೂ ನಿಶಾ ಮಧುಚಂದ್ರದ ಮಧುರ ಗಳಿಗೆಯನ್ನು ಕಳೆಯಲು ಮಡಿಕೇರಿಗೆ ಆಗಮಿಸುತ್ತಾರೆ. ಮಿತ್ರ ಮಿಥುನ್‌ತೇಜಸ್ವಿ ಹಾಗೂ ಪಾಯಲ್‌ಘೋಷ್ ನಿವಾಸದಲ್ಲಿ ವಾಸ್ತವ್ಯ ಹೂಡಿದ ಜೋಡಿ ಮಡಿಕೇರಿಯ ನಯನ ಮನೋಹರ ಸ್ಥಳಗಳಲ್ಲಿ ಮಧುಚಂದ್ರದ ರಸಮಯ ಕ್ಷಣಗಳನ್ನು ಅನುಭವಿಸುತ್ತಾರೆ. ಈ ಸನ್ನಿವೇಶಗಳನ್ನು 'ವರ್ಷಧಾರೆ ಚಿತ್ರಕ್ಕಾಗಿ ಛಾಯಾಗ್ರಾಹಕ ದೇವರಾಜ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

  ಪಿ.ರಾಮಸ್ವಾಮಿ ಮತ್ತು ಸಂಧ್ಯಾವೆಂಕಟೇಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವೆಂಕಟೇಶ್ ಅವರೊಡಗೂಡಿ ಕಥೆ ರಚಿಸಿರುವ ವೇಮಗಲ್ ಜಗನ್ನಾಥ್ ಚಿತ್ರಕಥೆ, ಸಂಭಾಷಣೆಯನ್ನು ಬರೆದಿದ್ದಾರೆ. ಅಜನೀಶ್‌ಲೋಕನಾಥ್ ಸಂಗೀತವಿರುವ ಚಿತ್ರದ ತಾರಾಬಳಗದಲ್ಲಿ ಮಿಥುನ್‌ತೇಜಸ್ವಿ, ಪಾಯಲ್‌ಘೋಷ್, ಆಶಿಟ್ಯಾಗೂರ್, ರಾಮ್‌ಪ್ರಸಾದ್, ಸಂತೋಷ್, ನಿಶಾ ಮುಂತಾದವರಿದ್ದಾರೆ.
  (ದಟ್ಸ್ ಕನ್ನಡ ಸಿನಿವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X