»   » ಅ.31ಕ್ಕೆ ಸೈಕೋ ನಾಯಕ, ನಾಯಕಿ ಬಿಡುಗಡೆ

ಅ.31ಕ್ಕೆ ಸೈಕೋ ನಾಯಕ, ನಾಯಕಿ ಬಿಡುಗಡೆ

Subscribe to Filmibeat Kannada

ಮಕ್ಕಳಿಂದ ಮುದುಕರತನಕ ಎಲ್ಲರೂ ಗುನುಗುತ್ತಿರುವ 'ನಿನ್ನ ಪೂಜೆಗೆ ಬಂದೆ ಮಾದೇಶ್ವರ ಗೀತೆಯನ್ನೊಳಗೊಂಡ, ಬಹು ನಿರೀಕ್ಷೆಯ ಚಿತ್ರ 'ಸೈಕೋ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಪೂರ್ವದಲ್ಲೇ ಚಿತ್ರ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಅದಕ್ಕೆ ಕಾರಣ ಇನ್ನೂ ಗೌಪ್ಯವಾಗಿರುವ ಚಿತ್ರದ ನಾಯಕ, ನಾಯಕಿ.

ಮುಹೂರ್ತದಿಂದ ಆರಂಭವಾಗಿ ಚಿತ್ರಕ್ಕೆ ಸಂಬಂಧ ಪಟ್ಟ ಹಾಗೆ ಅನೇಕ ಸಮಾರಂಭಗಳಲಾಗಲಿ ಅಥವಾ ಯಾವುದೇ ಮಾಧ್ಯಮ ಅಥವಾ ಜಾಹಿರಾತುಗಳಲ್ಲಿ ನಾಯಕ, ನಾಯಕಿಯರ ಸುಳಿವೇ ಇಲ್ಲ. ಎಲ್ಲಾ ಗೌಪ್ಯಗಳನ್ನು ಈ ಶುಕ್ರವಾರ ಮೊದಲ ಪ್ರದರ್ಶನದ ವೇಳೆ ನಿರ್ದೇಶಕರು ಬಹಿರಂಗಗೊಳಿಸಲಿದ್ದಾರೆ. ಚಿತ್ರಕ್ಕೆ ಯು/ಎ ಅರ್ಹತಾಪತ್ರವನ್ನು ನೀಡಿರುವ ಸೆನ್ಸಾರ್ ಮಂಡಲಿ ಹಾಡುಗಳನ್ನು ವಿಶೇಷವಾಗಿ ಪ್ರಶಂಸಿಸಿದೆ.

4ಡಿ ಕ್ರಿಯೇಷನ್ಸ್ ಲಾಂಛನದಲ್ಲಿ ಗುರುದತ್ ನಿರ್ಮಿಸಿರುವ ಈ ಚಿತ್ರಕ್ಕೆ ರಘುದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ. ಸಭಾಕುಮಾರ್ ಛಾಯಾಗ್ರಹಣ, ವಿನ್ಸೆಂಟ್ ನೃತ್ಯ, ರವಿವರ್ಮ ಸಾಹಸ, ಬಿ.ಎಸ್.ಕೆಂಪರಾಜ್ ಸಂಕಲನ ಹಾಗೂ ಶಾಸ್ತ್ರಿ ಅವರ ನಿರ್ಮಾಣನಿರ್ವಹಣೆ 'ಸೈಕೋ'ಗಿದೆ.

ನಗರದ ಮೇನಕ(4 ಆಟ), ಪ್ರಮೋದ್(ಬೆ.ಆಟ), ಉಮಾ(ಬೆ. ಆಟ), ನವರಂಗ್(2 ಆಟ), ಸಿದ್ದೇಶ್ವರ (4 ಆಟ), ರೇಣುಕಾ ಪ್ರಸನ್ನ(4 ಆಟ), ತುಳಸಿ (4 ಆಟ), ತಿರುಮಲ(4 ಆಟ), ಪಿವಿಆರ್, ಲಿಡೋ ಫೇಮ್, ವೀರಭದ್ರೇಶ್ವರ (4 ಆಟ) .. ಹಾಗೂ ರಾಜ್ಯದ ಪ್ರಮುಖ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ಅಮೆರಿಕ ನ್ಯೂಜೆರ್ಸಿ -ಮೂವಿಸಿಟಿ-5 ಥಿಯೇಟರ್ಸ್,
ಲಂಡನ್,ಬ್ರಾಡ್ ಪೋರ್ಡ್, ಕಾರ್ಡಿಫ್, ಕ್ರಾಲಿ, ಗ್ಲಾಸ್ಗೋವ್, ಲಿವರ್ ಪೂಲ್, ಇಲ್ ಪೋರ್ಡ್, ಇಪ್ ಸ್ವಿಚ್, ಬ್ರಿಸ್ಟಲ್, ಹಾರ್ಲೋ ನಗರದ ಪ್ರಮುಖ ಚಿತ್ರಮಂದಿರಗಳು
ಆಸ್ಟ್ರೇಲಿಯ: ಸಿಡ್ನಿ ;ಐಮ್ಯಾಕ್ಸ್
ವ್ಯಾರಿವುಡ್, ಯುನೈಟೆಡ್ ಸಿನಿಮಾಸ್
ಮೆಲ್ಬೋರ್ನ್: ಸಿಟಿ ಸಿನಿಮಾಸ್
ಮಲೇಷಿಯ: ಟ್ಯಾನ್-ಜಾಂಗ್, ಗೋಲ್ಡನ್ ವಿಲೇಜ್ ಸಿನಿಮಾಸ್
ನ್ಯೂಜಿಲ್ಯಾಂಡ್, ಆಕ್ಲೆಂಡ್ -ಸ್ಕೈ ಸಿನಿಮಾಸ್
ಕುವೈತ್ ಅಜಿಯಲ್ -ಸಿನಿ ಸ್ಕೇಪ್
ಯುಎಇ, ದುಬೈ-ಗ್ರ್ಯಾಂಡ್ ಸಿನಿಮಾಸ್

(ದಟ್ಸ್ ಕನ್ನಡ ಸಿನಿವಾರ್ತೆ)

ಪೂರಕ ಓದಿಗೆ:

ಸೈಕೋ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಪ್ರಶಂಸೆ
ಅಕ್ಟೋಬರ್ ನಲ್ಲಿ ಪ್ರೇಕ್ಷಕರ ಮುಂದೆ 'ಸೈಕೊ'
ಸೈಕೋ ಚಿತ್ರದ ಗುಂಗುಡುವ ಹಾಡುಗಳ ಮಾಯಗಾರ
ಸದಾಶಿವ ಬ್ರಹ್ಮಾವರ ಅವರಿಗೆ ನೆಲೆ ನೀಡಿದ ಸೈಕೊ
'ಯೂ ಟೂಬ್' ಮಾಯಾತಾಣದಲ್ಲಿ ಕನ್ನಡ ಝಲಕ್!
ಕುತೂಹಲ ಕೆರಳಿಸಿರುವ ಸೈಕೋ ಚಿತ್ರ ಟ್ರೈಲರ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada