ಕತ್ರಿನಾ ಅಲ್ಲ ಕರೀನಾ ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆ

By Rajendra

ಏಷ್ಯಾ ಖಂಡದಲ್ಲೇ ಅತ್ಯಂತ ಸೆಕ್ಸಿ ಮಹಿಳೆಯಾಗಿ ಬಾಲಿವುಡ್ ತಾರೆ ಕರೀನಾ ಕಪೂರ್ ಅವರನ್ನು ಈಸ್ಟರ್ನ್ ಐ ಪತ್ರಿಕೆ ಆಯ್ಕೆ ಮಾಡಿದೆ. ಮತ್ತೊಬ್ಬ ಬಾಲಿವುಡ್ ತಾರೆ ಕತ್ರಿನಾ ಕೈಫ್ ಎರಡನೇ ಅತ್ಯಂತ ಸೆಕ್ಸಿ ಮಹಿಳೆಯಾಗಿ ಆಯ್ಕೆಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಕತ್ರಿನಾ ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆಯಾಗಿ ಆಯ್ಕೆಯಾಗುತ್ತಿದ್ದರು.

ಆದರೆ ಈ ಬಾರಿ ಮೊದಲ ಸ್ಥಾನ ಕರೀನಾ ಕಪೂರ್ ಪಾಲಾಗಿದೆ. ಈಸ್ಟರ್ನ್ ಐ ಶೋಬಿಜ್ ಸಂಪಾದಕ ಅಸ್ಜದ್ ನಝೀರ್ ಮಾತನಾಡುತ್ತಾ, ಸ್ಪರ್ಧೆಯಲ್ಲಿ ಪಾಪ್ ತಾರೆಗಳು, ಟಿವಿ ಕಲಾವಿದರೂ, ರೂಪದರ್ಶಿಯರು, ಸಿನಿಮಾ ತಾರೆಗಳು ಇದ್ದರು. ಆದರೆ ಕರೀನಾ ಕಪೂರ್ ಅವರಿಗೆ ಅತ್ಯಧಿಕ ಮತಗಳು ಬೀಳುವ ಮೂಲಕ ಆಕೆ ಅತ್ಯಂತ ಸೆಕ್ಸಿ ಮಹಿಳೆಯಾಗಿ ಹೊರಹೊಮ್ಮಿದ್ದಾರೆ ಎಂದಿದ್ದಾರೆ.

ಬಾಲಿವುಡ್ ತಾರೆಗಳಾದ ಪ್ರಿಯಾಂಕಾ ಚೋಪ್ರಾ ಹಾಗೂ ಬಿಪಾಶಾ ಬಸು ಕ್ರಮವಾಗಿ ಮೂರನೇ ಮತ್ತು ನಾಲ್ಕನೆ ಸ್ಥಾನಕ್ಕೆ ತೃಪ್ತರಾಗಿದ್ದಾರೆ. ಫ್ರೀಡಾ ಪಿಂಟೋ ಹಾಗೂ ದೀಪಿಕಾ ಪಡುಕೋಣೆ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿದ್ದಾರೆ. ಐಶ್ವರ್ಯ ರೈ ಬಚ್ಚನ್ 6ನೇ ಸ್ಥಾನದಲ್ಲಿದ್ದರೆ ಸೋನಂ ಕಪೂರ್ 9ನೇ ಸ್ಥಾನದಲ್ಲಿದ್ದಾರೆ. ಇನ್ನು ಸೋನಾಕ್ಷಿ ಸಿನ್ಹಾ ಅಂತೂ ತುಂಬ ದೂರ 38ನೇ ಸ್ಥಾನಕ್ಕೆ ಸರಿದಿದ್ದಾರೆ. (ಏಜೆನ್ಸೀಸ್)

More from Filmibeat

English summary
Eastern Eye, a weekly says that Kareena Kapoor is the sexiest Asian woman in the world. The second position to hold is Katrina Kaif. Priyanka Chopra (3), and Bipasha Basu (4), who both slipped down one place each.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X