'ಹುಲಿ' ಬಂತು ಹುಡುಗ್ರೆಲ್ಲಾ ಅಲ್ಲೋಲ ಕಲ್ಲೋಲ

ಕಲಾ ನಿರ್ದೇಶಕ ಇಸ್ಮಾಯಿಲ್ ಈ ಗೀತೆಯ ಚಿತ್ರೀಕರಣಕ್ಕಾಗಿ ಅದ್ದೂರಿ ಸೆಟ್ ನಿರ್ಮಿಸಿದ್ದರು. ಈ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಪೋಷಕ ಪಾತ್ರಗಳಿಗೆ ಜೀವತುಂಬಿ ನೋಡುಗರ ಮೆಚ್ಚುಗೆಗೆ ಪಾತ್ರರಾಗಿರುವ ಕಿಶೋರ್ ಈ ಚಿತ್ರದ ನಾಯಕ. ಬೆಡಗಿ ಜನ್ನಿಫರ್ ನಾಯಕಿಯಾಗಿ ನಟಿಸಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಸ್ವಸ್ತಿಕ್‌ಶಂಕರ್, ಆದಿಲೋಕೇಶ್, ಪ್ರೇಮ್, ಶೋಭರಾಜ್, ಶ್ರೀನಿವಾಸಮೂರ್ತಿ, ಹಿಮಾನ್ಸಿ, ರವಿ, ಅವಿನಾಶ್, ಮಾಳವಿಕಾ, ಚಿತ್ರಾಶೆಣೈ ಮುಂತಾದವರಿದ್ದಾರೆ.
ಓಂಪ್ರಕಾಶ್‌ರಾವ್ ನಿರ್ದೇಶನದ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಮನೋಹರ್ ಛಾಯಾಗ್ರಹಣ, ಡೆನ್ನಿಸಾ ಪ್ರಕಾಶ್ ಕಥೆ, ಡಿ.ಮನೋಹರ್ ಚಿತ್ರಕಥೆ, ಪಳನಿರಾಜ್ ಅವರ ಸಾಹಸ 'ಹುಲಿ ಚಿತ್ರಕ್ಕಿದೆ. ಶಿವು ಎಂಟರ್ ಪ್ರೈಸಸ್ ಲಾಂಛನದಲ್ಲಿ ಬಿ.ಎಸ್.ಸುಧೀಂದ್ರ ಹಾಗೂ ಶಿವಪ್ರಕಾಶ್ ನಿರ್ಮಿಸುತ್ತಿರುವ ಚಿತ್ರವಿದು.
ಹುಲಿ ಕಿಶೋರ್ ಓಂ ಪ್ರಕಾಶ್ ರಾವ್ ಜೆನ್ನಿಫರ್ ಕೊತ್ವಾಲ್ ಮೈಸೂರು ರಂಗಾಯಣ ರಘು ಸಾಧು ಕೋಕಿಲ ಬುಲೆಟ್ ಪ್ರಕಾಶ್ huli kishore n omprakash rao jennifer kotwal mysore tejaswini rangayana raghu


Click it and Unblock the Notifications