twitter
    For Quick Alerts
    ALLOW NOTIFICATIONS  
    For Daily Alerts

    'ಹುಲಿ' ಬಂತು ಹುಡುಗ್ರೆಲ್ಲಾ ಅಲ್ಲೋಲ ಕಲ್ಲೋಲ

    By Rajendra
    |

    Huli movie still
    ಕಿಶೋರ್ ಮಿಖ್ಯಭೂಮಿಕೆಯಲ್ಲಿರುವ 'ಹುಲಿ' ಚಿತ್ರಕ್ಕೆ ಸಂಗೀತ ನಿರ್ದೇಶಕ ಅಭಿಮಾನ್‌ರಾಯ್ ರಚಿಸಿರುವ 'ಅಲ್ಲೋಲ್ಲ ಕಲ್ಲೋಲ್ಲ ಆಗೋದ್ರು ಹುಡುಗ್ರೆಲ್ಲಾ ನೋ ಎಂಟ್ರಿ ಬೋರ್ಡಿಲ್ಲ ಫ್ರೀ ಎಂಟ್ರಿ ಸಿಕ್ತಲ್ಲಾ' ಎಂಬ ಹಾಡು ರಾಕ್‌ಲೈನ್ ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡಿದೆ. ಹಿಮಾನ್ಸಿ, ಆದಿಲೋಕೇಶ್, ರವಿ, ಪ್ರೇಂ ಹಾಗೂ ನೃತ್ಯಗಾರರು ಹರ್ಷ ನೃತ್ಯ ಸಂಯೋಜಿಸಿದ ಈ ಗೀತೆಗೆ ಹೆಜ್ಜೆ ಹಾಕಿದರು.

    ಕಲಾ ನಿರ್ದೇಶಕ ಇಸ್ಮಾಯಿಲ್ ಈ ಗೀತೆಯ ಚಿತ್ರೀಕರಣಕ್ಕಾಗಿ ಅದ್ದೂರಿ ಸೆಟ್ ನಿರ್ಮಿಸಿದ್ದರು. ಈ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಪೋಷಕ ಪಾತ್ರಗಳಿಗೆ ಜೀವತುಂಬಿ ನೋಡುಗರ ಮೆಚ್ಚುಗೆಗೆ ಪಾತ್ರರಾಗಿರುವ ಕಿಶೋರ್ ಈ ಚಿತ್ರದ ನಾಯಕ. ಬೆಡಗಿ ಜನ್ನಿಫರ್ ನಾಯಕಿಯಾಗಿ ನಟಿಸಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಸ್ವಸ್ತಿಕ್‌ಶಂಕರ್, ಆದಿಲೋಕೇಶ್, ಪ್ರೇಮ್, ಶೋಭರಾಜ್, ಶ್ರೀನಿವಾಸಮೂರ್ತಿ, ಹಿಮಾನ್ಸಿ, ರವಿ, ಅವಿನಾಶ್, ಮಾಳವಿಕಾ, ಚಿತ್ರಾಶೆಣೈ ಮುಂತಾದವರಿದ್ದಾರೆ.

    ಓಂಪ್ರಕಾಶ್‌ರಾವ್ ನಿರ್ದೇಶನದ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಮನೋಹರ್ ಛಾಯಾಗ್ರಹಣ, ಡೆನ್ನಿಸಾ ಪ್ರಕಾಶ್ ಕಥೆ, ಡಿ.ಮನೋಹರ್ ಚಿತ್ರಕಥೆ, ಪಳನಿರಾಜ್ ಅವರ ಸಾಹಸ 'ಹುಲಿ ಚಿತ್ರಕ್ಕಿದೆ. ಶಿವು ಎಂಟರ್ ಪ್ರೈಸಸ್ ಲಾಂಛನದಲ್ಲಿ ಬಿ.ಎಸ್.ಸುಧೀಂದ್ರ ಹಾಗೂ ಶಿವಪ್ರಕಾಶ್ ನಿರ್ಮಿಸುತ್ತಿರುವ ಚಿತ್ರವಿದು.

    Monday, July 26, 2010, 12:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X