ಪುರಾತನ ದೇಗುಲದಲ್ಲಿ ಈ ಸಂಭಾಷಣೆ ಚಿತ್ರ

By Staff

ಇತಿಹಾಸ ಪ್ರಸಿದ್ದ ದೇಗುಲಗಳ ಬೀಡು ಈ ನಮ್ಮ ನಾಡು. ಕರ್ನಾಟಕದಲ್ಲಿ ಪುರಾಣ ಪ್ರಸಿದ್ದ ದೇವಾಲಯಗಳಿಗೇನು ಕಡಿಮೆ . ಆದರೆ ಆ ದೇಗುಲಗಳು ಎಲ್ಲರಿಗೂ ಪರಿಚಿತ. ಚಿತ್ರದಲ್ಲಿ ಏನಾದರೂ ವಿಶೇಷವಿರಬೇಕೆಂಬ ಹಂಬಲ ಹೊತ್ತಿರುವ ಓಂಸಾಯಿ ಪ್ರೊಡಕ್ಷನ್ಸ್ ಸಂಸ್ಥೆ ಮಂಚಿನ ಬಲೆ ಡ್ಯಾಂ ಬಳಿ ಪುರಾತನ ದೇವಸ್ಥಾನವನ್ನು ಹೊಸ್ಮನೆಮೂರ್ತಿ ಅವರ ಕಲಾನಿರ್ದೇಶನದಲ್ಲಿ ನಿರ್ಮಿಸಿದ್ದಾರೆ ಈ ಸಂಭಾಷಣೆ ಚಿತ್ರಕ್ಕಾಗಿ.

ಪುರಾತನ ದೇಗುಲ ಪ್ರೇಮಿಗಳ ಸಂದರ್ಶನ ಸ್ಥಳವೂ ಹೌದು. ಚಿತ್ರದ ನಾಯಕ ಸಂದೇಶ ಹಾಗೂ ಸುಂದರಿ ಹರಿಪ್ರಿಯ ಈ ಸ್ಥಳಕ್ಕೆ ಆಗಮಿಸುವುದನ್ನು ಅರಿತ ಬಿ.ಗಣಪತಿ ಹಾಗೂ ತಂಡ ನಾಯಕನೊಂದಿಗೆ ಹೊಡೆದಾಡುವ ಸನ್ನಿವೇಶವನ್ನು ನಿರ್ದೇಶಕ ರಾಜಶೇಖರ್ ಚಿತ್ರೀಕರಿಸಿಕೊಂಡರು. ಮೇಜರ್ ಶ್ರೀನಿವಾಸ ಪೂಜಾರ್ ತಮ್ಮ ಮಗ ಸಂದೇಶನಿಗಾಗಿ ನಿರ್ಮಿಸುತ್ತಿರುವ ಹಾಗೂ ಜ್ಯೋತಿಬಸವರಾಜ್ ಸಹ ನಿರ್ಮಾಪಕರಾಗಿರುವ ಈ ಚಿತ್ರವನ್ನು ರಾಜಶೇಖರ್ ಅವರು ಪ್ರಥಮ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ವಿ.ಮನೋಹರ್ ಸಂಗೀತ, ಸುರೇಶ್‌ಅರಸ್ ಸಂಕಲನ, ಮಂಜು ಮಾಂಡವ್ಯ ಸಂಭಾಷಣೆ, ಕೌರವ ವೆಂಕಟೇಶ್ ಸಾಹಸ, ಹೊಸ್ಮನೆ ಮೂರ್ತಿ ಕಲೆ, ಚಿನ್ನಿಪ್ರಕಾಶ್, ಹರ್ಷ, ರಘು ನೃತ್ಯ, ಎಸ್.ಎಸ್.ಚಂದ್ರಶೇಖರ್ ನಿರ್ಮಾಣನಿರ್ವಹಣೆ, ಭಾಸ್ಕರ್ ನಿರ್ಮಾಣ ಮೇಲ್ವಿಚಾರಣೆ, ಶಿವಮೂರ್ತಿ ಸಹನಿರ್ದೇಶನ, ದೊಡ್ಡರಂಗೇಗೌಡ, ವಿ.ಮನೋಹರ್, ಜಯಂತಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಗೀತರಚನೆಯಿರುವ ಚಿತ್ರದ ತಾರಾಬಳಗದಲ್ಲಿ ಸಂದೇಶ್, ಹರಿಪ್ರಿಯ, ಜ್ಯೋತಿರಾಣಾ, ಶರಣ್, ಸುಮಲತಾ ಅಂಬರೀಶ್, ಬಿ.ಗಣಪತಿ, ಬುಲೆಟ್ ಪ್ರಕಾಶ್, ವಿ.ಮನೋಹರ್ ಮುಂತಾದವರಿದ್ದಾರೆ.

***

ಟಾಕಿ ಮುಗಿಸಿದ ರಾಕಿ

ನಾಯಕ ಯಶ್‌ಗೆ ಕಾಲಿಗಾದ ಪೆಟ್ಟಿನಿಂದ ಚೇತರಿಸಿಕೊಂಡ ನಂತರ ರಾಕಿಗೆ ೧೫ದಿನಗಳ ಚಿತ್ರೀಕರಣ ನಡೆದಿದೆ. ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿರುವ ರಾಕಿಗೆ ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದ್ದು ಆ ಗೀತೆಗಳು ವಿದೇಶದಲ್ಲಿ ಚಿತ್ರೀಕೃತವಾಗಲಿದೆ ಎಂದು ನಿರ್ದೇಶಕ ನಾಗೇಂದ್ರ ಅರಸ್ ತಿಳಿಸಿದ್ದಾರೆ.

ಟಿ.ಎನ್.ಫಿಲಂ ಲಾಂಛನದಲ್ಲಿ ಮೇಕಲ್ ನಾರಾಯಣಸ್ವಾಮಿ ಹಾಗೂ ಕೆ.ಎಲ್.ಸಿದ್ದರಾಜು ನಿರ್ಮಿಸುತ್ತಿರುವ ಕೆ.ಆನಂದಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ವಿಜಯ ಚೆಂಡೂರ್ ಕಥೆ ಬರೆದರೆ ನಾಗೇಂದ್ರ ಅರಸ್ ಚಿತ್ರಕಥೆ ಬರೆದಿದ್ದಾರೆ. ಜಯಂತ ಕಾಯ್ಕಿಣಿ, ತಂಗಾಳಿ ನಾಗರಾಜ್, ರಾಂನಾರಾಯಣ್, ಹರೀಶ್‌ಶೃಂಗ, ಸಂತೋಷ್ ರಚಿಸಿರುವ ಹಾಡುಗಳಿಗೆ ವೆಂಕಟ್-ನಾರಾಯಣ್ ಸಂಗೀತ ಸಂಯೋಜಿಸಿದ್ದಾರೆ. ಎಸ್.ಆರ್.ಸುಧಾಕರ್ ಛಾಯಾಗ್ರಹಣ, ಹರೀಶ್‌ಶ್ರುಂಗ ಸಂಭಾಷಣೆ, ಕೌರವ ವೆಂಕಟೇಶ್, ರವಿವರ್ಮ ಸಾಹಸ, ಮುರುಳಿ, ಬ್ರಹ್ಮಾವರ್, ರಾಜೇಶ್ ನೃತ್ಯ, ಹೊಸ್ಮನೆಮೂರ್ತಿ ಕಲೆ, ಬಸವರಾಜ್ ಕಮ್ಥರ್ ಸಹನಿರ್ದೇಶನ, ಶರೀಫ್ ‌ ರಾಜು ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯಶ್, ಬಿಯಾಂಕದೇಸಾಯಿ, ಜೈಜಗದೀಶ್, ಪದ್ಮಜಾರಾವ್, ಎಂ.ಎನ್.ಲಕ್ಷ್ಮೀದೇವಿ, ಸಂಕೇತ್‌ಕಾಶಿ, ಪದ್ಮಾವಾಸಂತಿ, ರವಿ ಆರ್ ಗೌಡ, ಮೋಹನ್‌ಜುನೇಜ, ಶರತ್‌ಲೋಹಿತಾಶ್ವ ಮುಂತಾದವರಿದ್ದಾರೆ.

(ದಟ್ಸ್ ಸಿನಿವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X