ಪ್ರೇಮ್ ಹುಟ್ಟೂರಲ್ಲಿ ಜೋಗಯ್ಯ ನೋಡೋರಿಲ್ಲಯ್ಯ!

By * ವೀರೇಶ್ ಗೌಡ, ಕಿರುಗಾವಲು

ಮೊದಲ ಮೂರು ದಿನ ಪ್ರವಾಹೋಪಾದಿಯಲ್ಲಿ 'ಜೋಗಯ್ಯ' ಚಿತ್ರ ವೀಕ್ಷಿಸಲು ಮುಗಿಬಿದ್ದ ಜನ ಆಮೇಲೆ ಚಿತ್ರಮಂದಿರದಿಂದ ದೂರು ಸರಿಯುತ್ತಿದ್ದಾರೆ. ಇತ್ತೀಚೆಗೆ ಬಂದ ವರದಿಗಳ ಪ್ರಕಾರ 'ಜೋಗಯ್ಯ' ಗಳಿಕೆಯಲ್ಲಿ ಹಿನ್ನಡೆ ಅನುಭವಿಸುತ್ತಿದೆ. ರಾಜ್ಯದೆಲ್ಲಡೆ ಯಾವ ಥಿಯೇಟರ್ ನಲ್ಲೂ 'ಚಿತ್ರಮಂದಿರ ಜನಭರಿತ' ಎನ್ನುವ ಬೋರ್ಡ್ ತಗಲಾಕಿಲ್ಲ ಎನ್ನುವುದು ನಗ್ನ ಸತ್ಯ.

ನಿರ್ದೇಶಕ ಪ್ರೇಮ್ ಹುಟ್ಟೂರು ಮಂಡ್ಯದಲ್ಲಿ 'ಜೋಗಯ್ಯ'ನ ಜೋಳಿಗೆ ಭರ್ತಿ ಆಗುತ್ತಿಲ್ಲ. ಪ್ರಚಾರ ತಂತ್ರಕ್ಕಾಗಿ ಒಂದಲ್ಲ ಒಂದು ಗಿಮಿಕ್ ಮಾಡುವ ಪ್ರೇಮ್ ಗಿಮಿಕ್ ತಂತ್ರ ಮಂಡ್ಯದಲ್ಲಿ ವರ್ಕ್ ಔಟ್ ಆಗಿಲ್ಲ. ಒಂದು ಚಿತ್ರಮಂದಿರಕ್ಕೆ ಸೀಮಿತವಾಗಿದ್ದ ಜೋಗಯ್ಯ ಬಿಡುಗಡೆ ಕಡೆ ಗಳಿಗೆಯಲ್ಲಿ ಮೂರು ಚಿತ್ರಮಂದಿರದಲ್ಲಿ ಬಿಡುಗಡೆ ಗೊಂಡಿತು.

ಆದರೆ ಸೋಮವಾರದಿಂದ (ಆ.22) ಜನರ ಪ್ರತಿಕ್ರಿಯೆ ನಿರಾಶಾದಾಯಕ. ಮಂಡ್ಯ ದೊಡ್ಡ ನಗರವೇನೂ ಅಲ್ಲ. ಮೂರು ಮೂರು ಚಿತ್ರಮಂದಿರದಲ್ಲಿ ಫಿಲಂ ರಿಲೀಸ್ ಮಾಡಿದ್ರೆ ಥಿಯೇಟರ್ ಮಾಲೀಕರ ಗತಿ ಏನಾಗಬೇಕು? ಚಿತ್ರದ ಗಳಿಕೆ ಇದೇ ರೀತಿ ಮುಂದುವರಿದರೆ ನಮಗೆ ಎತ್ತಂಗಡಿ ಮಾಡದೆ ಬೇರೆ ದಾರಿಯಿಲ್ಲ ಎನ್ನುತ್ತಾರೆ ಚಿತ್ರಮಂದಿರದ ಮಾಲೀಕರು.

ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಸಿ ಸೆಂಟರ್ ನ ಕೆಲವೊಂದು ಚಿತ್ರಮಂದಿರಗಳಲ್ಲಿ ಎರಡು ದಿನದಿಂದ ಈಚೆಗೆ ಪ್ರೇಕ್ಷಕರ ಸಂಖ್ಯೆ ಎರಡಂಕಿ ದಾಟುತ್ತಿಲ್ಲ. ಈ ಮಾತುಗಳು ಪ್ರೇಮ್ ಅವರಿಗೆ ಕಸಿವಿಸಿ ಉಂಟು ಮಾಡಬಹುದು ಆದರೂ ಪ್ರೇಮ್ ಅನ್ಯಥಾ ಭಾವಿಸ ಬಾರದು.

3ಡಿ ಪ್ರದರ್ಶನದ ಕಥೆ ಏನಾಯಿತೋ ಬಹುಶಃ ಚಿತ್ರದ ನಾಯಕ ಶಿವರಾಜ್ ಕುಮಾರ್ ಅವರಿಗೆ ಕೂಡಾ ತಿಳಿದಿರಲಾರರು. ಆದರೆ ರಾಜ್ಯದೆಲ್ಲಡೆ ಮೊದಲದಿನದ ಗಳಿಕೆ ಮಾತ್ರ All time record break ಅನ್ನೋದು ಸತ್ಯ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮತ್ತು ಬಿಕೆಟಿ ಸೆಂಟರ್ ನಲ್ಲಿ ಕೂಡಾ ಚಿತ್ರಕ್ಕೆ ಸಮಾಧಾನ ಪಡುವಂತ ಕಲೆಕ್ಷನ್ ಇಲ್ಲ ಅನ್ನೋದು ಕೂಡಾ ಅಷ್ಟೇ ಸತ್ಯ.

More from Filmibeat

English summary
Director Prem's film, Jogayya has taken a shockingly dull opening at the box office in his home town Mandya. Is the film headed to a premature death at ticket windows? However the movie is running successfully in Bangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X