twitter
    For Quick Alerts
    ALLOW NOTIFICATIONS  
    For Daily Alerts

    ನಗರದಲ್ಲಿ ರೌಡಿಗಳಿಂದ 'ನಿಷೇಧಾಜ್ಞೆ 'ಉಲ್ಲಂಘನೆ

    By Staff
    |

    'ನಿಷೇಧಾಜ್ಞೆ' ಜಾರಿಯಲ್ಲಿರುವ ಸ್ಥಳದಲ್ಲಿ ಓಡಾಡಬಾರದು, ಸುಳಿಯಬಾರದು. ಇದು ಕಾನೂನು ಮತ್ತು ಸುವ್ಯವಸ್ಥೆ ವಿಧಿಸುವ ನಿಯಮ. ಈ ನಿಯಮದಂತೆ ನಡೆದುಕೊಳ್ಳುವುದು ಸತ್ಪ್ರಜೆಯ ಕರ್ತವ್ಯ. ಆದರೆ, ರೌಡಿಗಳಿಗೆ, ಸಮಾಜಘಾತುಕರಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಈ ಸಂಗತಿ ನಿಷೇಧಾಜ್ಞೆ ಸಿನಿಮಾ ಚಿತ್ರೀಕರಣದಲ್ಲಿ ಮತ್ತೊಮ್ಮೆ ನಿಜವಾಯಿತು.

    ಚಿತ್ರದ ಒಂದು ಸನ್ನಿವೇಶದಲ್ಲಿ ರೌಡಿಪಡೆ ನಿಷೇಧಾಜ್ಞೆಯನ್ನು ಉಲ್ಲಂಘಿಸುತ್ತಾರೆ. ಅಷ್ಟೇ ಅಲ್ಲ, ಗಲಭೆಗೂ ಮುಂದಾಗುತ್ತಾರೆ. ಅವರನ್ನು ನಾಯಕ ಆದಿಲೋಕೇಶ್ ಬೆನ್ನಟ್ಟುತ್ತಾನೆ. ಆದರೆ ಈ ಸಮಯದಲ್ಲಿ ಗಲಭೆ ಸೂಕ್ತವಲ್ಲ ಎಂಬ ವಿವೇಕ ನಾಯಕನಿಗಿದೆ. ಅವನು ಪ್ರಶಾಂತ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಾನೆ. ಈ ಸನ್ನಿವೇಶವನ್ನು 'ನಿಷೇಧಾಜ್ಞೆ' ಚಿತ್ರಕ್ಕಾಗಿ ನಿರ್ದೇಶಕ ಪದ್ಮನಾಭ ತಣೀಸಂದ್ರದ ಬಳಿ ಇತ್ತೀಚೆಗೆ ಚಿತ್ರೀಕರಿಸಿಕೊಂಡರು.

    ಪೋಲೀಸ್ ಇಲಾಖೆಯಿಂದ ಹಲವು ಮಾಹಿತಿ ಪಡೆದು ಹಾಗೂ ಮಾಜಿ ಪೋಲೀಸ್ ಅಧಿಕಾರಿ ಅಬ್ದುಲ್‌ಅಜೀಮ್ ಅವರನ್ನು ಚಿತ್ರದಲ್ಲಿ ಬಳಸಿಕೊಂಡು ಚಿತ್ರ ಉತ್ತಮವಾಗಿ ಮೂಡಿಬರಲು ನಿರ್ದೇಶಕರು ಅಪಾರ ಶ್ರಮ ವಹಿಸುತ್ತಿದ್ದಾರೆ. ಚಿತ್ರೀಕರಣ ನಡೆಯುತ್ತಿರುವ ಸಮಯದಲ್ಲೇ 'ನಿಷೇಧಾಜ್ಞೆ'ಗೆ ಪ್ರಶಂಸೆಯ ಮಾತು ಕೇಳಿ ಬರುತ್ತಿದೆ ಎಂದು ನಿರ್ಮಾಪಕರು ಹೇಳುತ್ತಾರೆ.

    ಭರತ್‌ಬಾಬು ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಎಸ್.ವಿ.ನಾರಾಯಣ ಸ್ವಾಮಿ ಹೊಸಕೋಟೆ ಹಾಗೂ ಸೂರ್ಯಕಾಂತ್ ಜಾದವ್ ನಿರ್ಮಿಸುತ್ತಿದ್ದಾರೆ. ಬಸವರಾಜಪ್ಪ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಆದಿಲೋಕೇಶ್ ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕ ಪದ್ಮನಾಭ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ರಮೇಶ್ ಛಾಯಾಗ್ರಹಣ, ಗಿರಿಧರ್ ಸಂಗೀತ ಸಂಯೋಜನೆ, ಯತೀಶ್‌ಕುಮಾರ್ ಸಂಕಲನ, ಅರವಿಂದ್ ನೃತ್ಯ ನಿರ್ದೇಶನ, ಕೃಷ್ಣಾಚಾರ್ ಕಲಾ ನಿರ್ದೇಶನ, ಲಕ್ಷ್ಮೀಕುಮಾರ್, ಮೂರ್ತಿ ಸಹನಿರ್ದೇಶನವಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಭರತ್‌ಬಾಬು, ಪದ್ಮಜಾರಾವ್, ಪ್ರಿಯಾಂಕ ಚಂದ್ರ, ಶಂಕರ್ ಅಶ್ವತ್, ನೀನಾಸಂ ಅಶ್ವತ್, ಸುರೇಶ್ ಮಂಗಳೂರು, ಸ್ನೇಹ ಜಗದೀಶ್ ಹಾಗೂ ಧಮ್‌ಕುಮಾರ್ ಇದ್ದಾರೆ. ನಿವೃತ್ತ ಪೋಲೀಸ್ ಅಧಿಕಾರಿ ಹಾಗೂ ಎಂ ಎಲ್ ಸಿ ಅಬ್ದುಲ್ ಅಜೀಮ್ ವಿಶೇಷಪಾತ್ರದಲ್ಲಿ ಅಭಿನಯಿಸಿದ್ದಾರೆ.

    (ದಟ್ಸ್ ಕನ್ನಡಸಿನಿವಾರ್ತೆ)

    Thursday, April 25, 2024, 16:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X