ಪರಭಾಷೆ ಸಿನಿಮಾ ಬಿಡುಗಡೆ ಕುರಿತಾದ ಸ್ಪಷ್ಟೀಕರಣ

<ul id="pagination-digg"><li class="previous"><a href="/news/26-no-kannada-movie-release-for-deepavali-aid0172.html">« Previous</a>

Sharuk Kareena
ಸಿನಿಮಾ ಬಿಡುಗಡೆಗೆ ಸಂಬಂಧಪಟ್ಟಂತೆ ಕೆಎಫ್ ಸಿಸಿ ಹಲವಾರು ನಿಯಮಗಳನ್ನು ಹೊಂದಿದೆ. ಅದರಂತೆ ಕನ್ನಡೇತರ ಚಿತ್ರಗಳು ಕರ್ನಾಟಕದಲ್ಲಿ 25 ಥಿಯೇಟರ್ ಗಳಲ್ಲಿ ಮಾತ್ರ ಬಿಡುಗಡೆ ಆಗತಕ್ಕದ್ದು. ಹಾಗೂ ಸಂಬಂಧಪಟ್ಟ ಭಾಷೆಯ ರಾಜ್ಯಗಳಲ್ಲಿ ಬಿಡುಗಡೆಯಾದ 6 ವಾರಗಳ ನಂತರ ಇಲ್ಲಿ ಪ್ರದರ್ಶನವಾಗತಕ್ಕದ್ದು.

ಆದರೆ ನಿಯಮವನ್ನು ಪಾಲಿಸಲು ತೊಂದರೆ ಆಗಿರುವ ಬಗ್ಗೆ ಅಧ್ಯಕ್ಷರಾದ ಕೆ. ವಿ. ಚಂದ್ರಶೇಖರ್ ವಿಷಾದ ವ್ಯಕ್ತಪಡಿಸಿದ್ದಾರೆ. ಮತ್ತು ಪರಭಾಷೆಯ ಚಿತ್ರಗಳು ಅನಿವಾರ್ಯವಾಗಿ ಬಿಡುಗಡೆ ಆಗುತ್ತಿರುವುದು ಹೇಗೆಂಬ ಬಗ್ಗೆ ಸ್ಷಷ್ಟೀಕರಣ ಕೂಡ ನೀಡಿದ್ದಾರೆ.

"ಕಾರಣವಿಷ್ಟೇ, ನವೆಂಬರ್ ಒಂದಕ್ಕೆ ಕರ್ನಾಟಕ ರಾಜ್ಯೋತ್ಸವ ಇರುವುದರಿಂದ ಸಾಕಷ್ಟು ಕನ್ನಡ ಸಿನಿಮಾಗಳು ಅಂದು ಬಿಡುಗಡೆ ಕಾಣುತ್ತಿವೆ. ಹಾಗಾಗಿ ಈ ದೀಪಾವಳಿಗೆ ಯಾವುದೇ ಕನ್ನಡ ಸಿನಿಮಾ ಇಲ್ಲವಾಗಿ ಪರಭಾಷೆಯ ಚಿತ್ರಗಳು ಆ ಜಾಗಕ್ಕೆ ಬಂದು ಕೂತಿವೆ" ಎಂದಿದ್ದಾರೆ.

"ಆದರೆ ನಮ್ಮಲ್ಲಿ ಕೆಲವು ಚಿತ್ರಮಂದಿರಗಳಲ್ಲಿ ಮಾತ್ರ ಅವು ಬಿಡುಗಡೆ ಆಗಿವೆ ಹಾಗೂ ನಾವು ಕನ್ನಡ ಭಾಷೆಯ ಚಿತ್ರಗಳಿಗೇ ಪ್ರಾಮುಖ್ಯತೆ ಕೊಡಲಿದ್ದೇವೆ" ಎಂದೂ ಕೂಡ ತಿಳಿಸಿದ್ದಾರೆ. ಈಗ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಕನ್ನಡ ಚಿತ್ರಗಳು ಹಾಗೇ ಮುಂದುವರಿಯಲಿವೆ ಕೂಡ.

ಕನ್ನಡ ಚಿತ್ರಗಳು ಕಡಿಮೆ ಬಜೆಟ್ ಹಾಗೂ ಸೀಮಿತ ಮಾರುಕಟ್ಟೆ ಹೊಂದಿರುವುದರಿಂದ ಪ್ರಬಲಸ್ಪರ್ಧೆ ಎದುರಿಸಬೇಕಾಗಿದೆ. ಹಾಗಾಗಿ ಇವುಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ನಾವು ಪ್ರಯತ್ನಿಸಬೇಕಾಗಿದೆ" ಎಂದಿದ್ದಾರೆ. ಒಟ್ಟಿನಲ್ಲಿ ಹೊಸ ಕನ್ನಡ ಚಿತ್ರಗಳಿಲ್ಲದ ದೀಪಾವಳಿಯನ್ನು ಜನ ಆಚರಿಸಬೇಕಾಗಿದೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/26-no-kannada-movie-release-for-deepavali-aid0172.html">« Previous</a>

More from Filmibeat

English summary
For this Deepavali festival, there is no kaannada films to release. Only non-kannada films are releasing for this deepavali. Because most of the kannada movies have to release Nov. 1st, because of Kannada Rajyothsava.&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X