ಶಿವರಾಜ್ ಕುಮಾರ್ ಜೊತೆ ಪ್ರಿಯಾಮಣಿ ಚಿತ್ರ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮತ್ತೊಂದು ಚಿತ್ರ ಶೀಘ್ರದಲ್ಲೆ ಸೆಟ್ಟೇರಲಿದೆ. ಈ ಬಾರಿ ಶಿವಣ್ಣನ ಜೊತೆ ಪ್ರಿಯಾಮಣಿ ನಾಯಕಿಯಾಗಿ ಕಾಣಿಸಲಿದ್ದಾರೆ. ಈ ಚಿತ್ರವನ್ನು ಭರಣಿ ಮಿಲ್ಸ್ ನಿರ್ಮಿಸುತ್ತ್ತಿದ್ದು ಚಿತ್ರಕ್ಕೆ ಶೀರ್ಷಿಕೆ ಇನ್ನೂ ಇಟ್ಟಿಲ್ಲ.
ಆಂಧ್ರ ಪ್ರದೇಶದ ರವಿ ಮತ್ತು ಭಾಸ್ಕರ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರದ ಹಾಡಿನ ರೆಕಾರ್ಡಿಂಗ್ ಮುಹೂರ್ತ ಆಕಾಶ್ ಸ್ಟುಡಿಯೋದಲ್ಲಿ ಶುಕ್ರವಾರ ನಡೆಯಲಿದೆ. ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ರಾಘವ ಲೋಕಿ. ಗುರುಕಿರಣ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿರುತ್ತದೆ.
ಚಿತ್ರದ ಉಳಿದ ಪಾತ್ರವರ್ಗದಲ್ಲಿ ರಂಗಾಯಣ ರಘು, ದಿಲೀಪ್ ರಾಜ್, ಅವಿನಾಶ್ ಮತ್ತು ಕೋಮಲ್ ಕುಮಾರ್ ಮುಂತಾದವರಿದ್ದಾರೆ. ಸದ್ಯಕ್ಕೆ ಈ ಚಿತ್ರಕ್ಕೆ ಪ್ರೊಡಕ್ಷನ್ ನಂ.1 ಎಂದು ಹೆಸರಿಡಲಾಗಿದೆ. ಕನ್ನಡದಲ್ಲಿ ಪ್ರಿಯಾಮಣಿ ನಟಿಸುತ್ತಿರುವ ಮೂರನೇ ಚಿತ್ರ ಇದಾಗಿದೆ. ಈ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಏನೋ ಒಂಥರಾ' ಹಾಗೂ ಪುನೀತ್ ರಾಜ್ ಕುಮಾರ್ ಜೊತೆ 'ರಾಮ್' ಚಿತ್ರದಲ್ಲಿ ಅಭಿನಯಿಸಿದ್ದರು.


Click it and Unblock the Notifications











