»   » ತಾಜ್ ಮಹಲ್ ಚಂದ್ರು ನಾಕು ಕಂಬನಿಗಳ ಕಹಾನಿ

ತಾಜ್ ಮಹಲ್ ಚಂದ್ರು ನಾಕು ಕಂಬನಿಗಳ ಕಹಾನಿ

Posted By:
Subscribe to Filmibeat Kannada

ಇದು ತಾಜ್ ಮಹಲ್ ಚಂದ್ರು ಅವರ ನಾಲ್ಕು ಕಂಬನಿಗಳ ಕಹಾನಿ ಇದು. ಇದೇನಿದು 'ಕೋತಿ ಕೋಳಿ' ಚಿತ್ರದ ಎಫೆಕ್ಟಾ ಎಂದು ಕೇಳಬೇಡಿ. 'ಕೋ ಕೋ' ಚಿತ್ರ ಅರ್ಧ ಸೆಂಚುರಿ ಬಾರಿಸಿದೆ. ಇದೇ ಖುಷಿಯಲ್ಲಿ ಚಂದ್ರು ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

ಆದರೆ ಈ ಬಾರಿ ಅವರು ಚಿತ್ರ ನಿರ್ಮಾಪಕರಾಗಿ ಬದಲಾಗಿದ್ದಾರೆ. ತಮ್ಮ ಹೊಸ ಚಿತ್ರಕ್ಕೆ 'ಚಾರ್ಮಿನಾರ್' ಎಂದು ಹೆಸರಿಟ್ಟಿದ್ದಾರೆ. ರಾಜಾಜಿನಗರದ ಎಸ್ ಮಂಜುನಾಥ್ ಅವರೊಂದಿಗೆ ಕೈ ಜೋಡಿಸಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಚಂದ್ರು. ಆಕ್ಷನ್ ಕಟ್ ಹೇಳುವವರೂ ಅವರೇ.

ಈ ಚಿತ್ರದ ಅಡಿಬರಹ "ನಾಲ್ಕು ಕಂಬನಿಗಳ ಕಹಾನಿ". 'ಚಾರ್ಮಿನಾರ್' ಚಿತ್ರದ ಮೂಲಕ ಹೊಸ ಸಂಗೀತ ನಿರ್ದೇಶಕರನ್ನು ಚಂದ್ರು ಪರಿಚಯಿಸುತ್ತಿದ್ದಾರೆ. ಅವರ ಹೆಸರು ಹರಿ. ಚಿತ್ರದ ಹೀರೋ ಪಾತ್ರಕ್ಕೆ ಅಜಯ್ ರಾವ್, ಶ್ರೀನಗರ ಕಿಟ್ಟಿ, ಲವ್ಲಿ ಸ್ಟಾರ್ ಪ್ರೇಮ್ ಅಥವಾ ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. (ಏಜೆನ್ಸೀಸ್)

English summary
Kannada film director R Chandru turns producer from 'Charminar'. "Naaku Kambanigala Kahani" is the caption of the movie. The hero and heroine of the film yet to be finalised. A top heroine will be introduced to Kannada film says sources.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X