'ರಾಧಿಕನ್ ಗಂಡ'ನ ಬೆನ್ನತ್ತಿದ್ದ ಕಳ್ ಮಂಜ ಕೋಮಲ್

By Rajendra

ತಂಗೆವ್ವ ನಿನ್ನ ಗಂಡ ಯಾರವ್ವ ಎಂದು 'ರಾಧಿಕನ್ ಗಂಡ' ನ ಬಗ್ಗೆ ಕೇಳುತ್ತಿದ್ದಾರೆ 'ಕಳ್ ಮಂಜ' ಕೋಮಲ್ ಕುಮಾರ್. ಇನ್ಯಾರು ಇರಲಿಕ್ಕೆ ಸಾಧ್ಯ ನೀವೆ ಊಹಿಸಿ! ಈ ಹಿಂದೆ ನಟಿ ರಾಧಿಕಾ ತಮ್ಮ ಗಂಡ ಅವರೇ ಇವರು ಎಂದು ಹೇಳಿದ್ದರು. ರಾಧಿಕಾ ಮತ್ತು ಅವರ ಗಂಡನ ಫೋಟೋಗಳು ಜನಮನದ ಜೀವನಾಡಿಯಲ್ಲಿ ರಾಜಾರೋಷವಾಗಿ ಪ್ರಕಟವಾಗಿದ್ದವು.

ಈಗ ವಿಷಯ ಅದಲ್ಲ. ಕಳ್ ಮಂಜ ಖ್ಯಾತಿಯ ಕೋಮಲ್ ಕುಮಾರ್ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಆ ಚಿತ್ರದ ಶೀರ್ಷಿಕೆ ರಾಧಿಕನ್ ಗಂಡ. ಆದರೆ ಈ ಚಿತ್ರದ ಶೀರ್ಷಿಕೆಗೂ ತೆರೆಯ ಮೇಲೆ ಬರುವ ಪಾತ್ರಗಳು, ಸನ್ನಿವೇಶಗಳು ಯಾರೊಬ್ಬರನ್ನೂ ಉದ್ದೇಶಿಸಿದ್ದಲ್ಲ. ಕೇವಲ ಕಾಲ್ಪನಿಕ ಅಷ್ಟೆ ಎನ್ನುತ್ತಾರೆ ಕೋಮಲ್.

ಕೋಮಲ್ ಸ್ವಂತ ಬ್ಯಾನರ್ ಚಿತ್ರ 'ಕಳ್ ಮಂಜ' ಲಂಡನ್‌ನಲ್ಲಿ ಎಲ್ಲರ ಮನಗೆದ್ದಿದ್ದಾನೆ. ಈಗ ಅಲ್ಲಿಂದ ಹಿಂತಿರುಗಿರುವ ಕೋಮಲ್, 'ರಾಧಿಕನ್ ಗಂಡ'ನ ಬೆನ್ನತ್ತಿದ್ದಾರೆ. ಸದ್ಯಕ್ಕೆ ಕೋಮಲ್ ಮುಖ್ಯಭೂಮಿಕೆಯಲ್ಲಿರುವ 'ಮರ್ಯಾದೆ ರಾಮಣ್ಣ' ಚಿತ್ರೀಕರಣ ಮುಗಿದಿದೆ. ಇದಾದ ಬಳಿಕ 'ಗೋವಿಂದಾಯನ ನಮಃ' ಚಿತ್ರೀಕರಣ ಪೂರ್ಣವಾಗಲಿದೆ.

ಅಂದಹಾಗೆ ಕಾನ್ಫಿಡೆಂಡ್ ಗ್ರೂಪ್ ನಿರ್ಮಿಸುತ್ತಿರುವ 'ರಾಧಿಕನ್ ಗಂಡ' ಚಿತ್ರ ಆಗಸ್ಟ್ 8ರಂದು ಸೆಟ್ಟೇರಲಿದೆ. ಕುತೂಹಲ ಹಾಗೂ ಪ್ರೇಕ್ಷಕರ ಗಮನಸೆಳೆಯಲು ಈ ರೀತಿಯ ಶೀರ್ಷಿಕೆಯನ್ನು ಕೋಮಲ್ ಆಯ್ಕೆ ಮಾಡಿಕೊಂಡಂತಿದೆ. ಆದರೆ ವಾಸ್ತವವಾಗಿ ಇದೊಂದು ಪಕ್ಕಾ ಕಾಮಿಡಿ ಚಿತ್ರ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kal Manja fame Komal Kumar has taken a new film titled as Radhikan Ganda. But the movie not about former chief minister H D Kumaraswamy and actress Radhika. The movie to be going on the floor for Confident Group on August 8.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X