ರಮ್ಯ ತಾಣಗಳಲ್ಲಿ 'ಜಸ್ಟ್ ಮಾತ್ ಮಾತಲ್ಲಿ'ಸಂಚಾರ
ರಮ್ಯ ಮತ್ತು ಸುದೀಪ್ ನಟನೆಯ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಇಡೀ ಚಿತ್ರವನ್ನು ಸಕಲೇಶಪುರ ಮತ್ತು ಸುತ್ತಮುತ್ತ್ತ ಚಿತ್ರೀಕರಿಸಿರುವುದು ಜಸ್ಟ್ ಮಾತ್ ಮಾತಲ್ಲಿ ಚಿತ್ರದ ವಿಶೇಷ. ರಮ್ಯ ಮತ್ತು ಸುದೀಪ್ ಜೋಡಿಯ ಚಿತ್ರ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.
'ಯಜ್ಞ' ಚಿತ್ರದ ಆರ್ ಶಂಕರ್ ಈ ಚಿತ್ರದ ನಿರ್ಮಾಪಕರು. ರಘು ದೀಕ್ಷಿತ್ ರ ಸಂಗೀತ ಸಂಯೋಜನೆ ಹಾಗೂ ವೆಂಕಟ್ ಅವರ ಛಾಯಾಗ್ರಹಣ ಜಸ್ಟ್ ಮಾತ್ ಮಾತಲ್ಲಿ ಚಿತ್ರಕ್ಕಿದೆ. ಸುದೀಪ್ ನಟನೆಯ ತಮಿಳು ರೀಮೇಕ್ ಚಿತ್ರಕ್ಕೂ ರಮ್ಯಾ ಸಹಿ ಹಾಕಿದ್ದಾರೆ. ಈ ವರ್ಷಾಂತ್ಯಕ್ಕೆ ರಮ್ಯಾ ನಟನೆಯ ತಮಿಳು ಚಿತ್ರಗಳು ತೆರೆಕಾಣುತ್ತಿವೆ.
ಇವರಿಬ್ಬರೂ ಈ ಹಿಂದೆ 'ರಂಗ ಎಸ್ ಎಸ್ ಎಲ್ ಸಿ' ಮತ್ತು 'ಮುಸ್ಸಂಜೆ ಮಾತು' ಚಿತ್ರಗಳಲ್ಲಿ ನಟಿಸಿದ್ದರು. ಇವರಿಬ್ಬರ ಕಾಂಬಿನೇಷನಲ್ಲಿ ಬಂದ ಮುಸ್ಸಂಜೆ ಮಾತು ಬಾಕ್ಸಾಫೀಸಲ್ಲಿ ಗೆದ್ದಿತ್ತು. ಈಗ ಜಸ್ಟ್ ಮಾತ್ ಮಾತಲ್ಲಿ ಚಿತ್ರ ಸಹ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಕನ್ನಡ ಸಿನಿಮಾ kannada movies ರಘು ದೀಕ್ಷಿತ್ raghu dixit sudeep ಸುದೀಪ್ ರಮ್ಯಾ ramya shankare gowda ಜಸ್ಟ್ ಮಾತ್ ಮಾತಲ್ಲಿ ಶಂಕರೇಗೌಡ just maat matalli


Click it and Unblock the Notifications