ಬೆಂಗಳೂರಿನಲ್ಲಿ ಕ್ರೇಜಿಸ್ಟಾರ್ ಕ್ರೇಜಿಲೋಕ
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಾಯಕನಾಗಿ ನಟಿಸುತ್ತಿರುವ 'ಕ್ರೇಜಿಲೋಕ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ. ಕಾನ್ಫಿಡೆಂಟ್ ಗ್ರೂಪ್ಸ್ ಅರ್ಪಿಸುವ, ಶಾಂತಾ ಪಿಕ್ಚರ್ಸ್ ಲಾಂಛನದಲ್ಲಿ ಎನ್.ರವಿಕುಮಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಲವತ್ತೈದು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಐದು ಹಾಡುಗಳಿವೆ.
ಕವಿತಾಲಂಕೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕಿಯಾಗಿ ಡೈಸಿ ಬೋಪಣ್ಣ ಅಭಿನಯಿಸುತ್ತಿದ್ದಾರೆ. ಭಾರತಿ ವಿಷ್ಣುವರ್ಧನ, ಹರ್ಷಿಕಾ ಪೂಣಚ್ಛ, ಅವಿನಾಶ್, ನೀನಾಸಂ ಅಶ್ವತ್ ಮುಂತಾದವರು 'ಕ್ರೇಜಿಲೋಕ'ದ ತಾರಾಬಳಗದಲ್ಲಿದ್ದಾರೆ.
ಎ.ಸಿ.ಮಹೇಂದರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜೋ.ನಿ.ಹರ್ಷರ ಸಂಕಲನವಿದೆ. ಇಮ್ರಾನ್ ನೃತ್ಯ ನಿರ್ದೇಶನ, ಕುಮಾರ್ ಕಲಾ ನಿರ್ದೇಶನ ಹಾಗೂ ರವಿಶಂಕರ್ ನಿರ್ಮಾಣ ನಿರ್ವಹಣೆ 'ಕ್ರೇಜಿಲೋಕ ಚಿತ್ರಕ್ಕಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Crazy star V Ravichandran is now joining director Kavitha Lankesh for his upcoming movie Crazy Loka, which is a full commercial flick. Now the movie finished 45 days of shooting in Bangalore. Kavitha Lankesh is director of the movie.
ರವಿಚಂದ್ರನ್ ಡೈಸಿ ಬೋಪಣ್ಣ ಕವಿತಾ ಲಂಕೇಶ್ ಕ್ರೇಜಿ ಸ್ಟಾರ್ ravichandran crazy star daisy bopanna kavitha lankesh


Click it and Unblock the Notifications











