ತಮಿಳು 'ಮಾಯಿ' ರೀಮೇಕ್‌ನಲ್ಲಿ ಕ್ರೇಜಿ ಸ್ಟಾರ್
ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತೆ ಕ್ರಿಯಾಶೀಲರಾಗಿದ್ದಾರೆ. ಈಗ ಅವರ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ಸಿದ್ಧತೆ ನಡೆದಿವೆ. ಖ್ಯಾತ ವಿತರಕ ಕೆ ಸಿ ಎನ್ ಕುಮಾರ್ ಚಿತ್ರವೊಂದನ್ನು ನಿರ್ಮಿಸುತ್ತಿದ್ದು, ರವಿಚಂದ್ರನ್ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಶೀರ್ಷಿಕೆ ಇಡದ ಈ ಚಿತ್ರವನ್ನು ನಟ ಮೋಹನ್ ನಿರ್ದೇಶಿಸಲಿದ್ದಾರೆ.
ರವಿಚಂದ್ರನ್ ಅವರು ಚಿತ್ರಕ್ಕೆ 'ಧರ್ಮರಾಯ' ಎಂಬ ಶೀರ್ಷಿಕೆ ಸೂಚಿಸಿದ್ದಾರೆ. ಆದರೆ ಈ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ನಿರ್ದೇಶನದ ಜೊತೆಗೆ ಚಿತ್ರಕತೆ ಮತ್ತು ಸಂಭಾಷಣೆಯನ್ನು ಮೋಹನ್ ಬರೆದಿದ್ದಾರೆ. ಚಿತ್ರದ ವಿವಿಧ ಪಾತ್ರಗಳ ಆಯ್ಕೆ ನಡೆಯಬೇಕಾಗಿದೆ.
ಅಂದಹಾಗೆ ಈ ಚಿತ್ರ ಶರತ್ ಕುಮಾರ್ ಮತ್ತು ಮೀನಾ ಮುಖ್ಯಭೂಮಿಕೆಯಲ್ಲಿದ್ದ ತಮಿಳಿನ 'ಮಾಯಿ' ಚಿತ್ರದ ರೀಮೇಕ್ ಎನ್ನಲಾಗಿದೆ. ಇದೇ ಚಿತ್ರ ತೆಲುಗಿನಲ್ಲಿ 'ಸಿಂಹ ರಾಶಿ' ಎಂದು ರೀಮೇಕ್ ಆಗಿತ್ತು. ಈಗ ಕನ್ನಡಕ್ಕೆ ತರಲಾಗುತ್ತಿದೆ. ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯಲ್ಲಿರುವ 'ಕೋಟೆ' ಚಿತ್ರ ಕೆ ಸಿ ಎನ್ ಕುಮಾರ್ ಸಹ ನಿರ್ಮಾಣದಲ್ಲಿ ಮೂಡಿಬರುತ್ತಿದೆ.


Click it and Unblock the Notifications











