For Quick Alerts
  ALLOW NOTIFICATIONS  
  For Daily Alerts

  ಬಂಗಾರಪ್ಪನವರಿಗೆ ಒಲಿಯದ ಸಿನಿಮಾ ಸರಸ್ವತಿ

  |
  ದಿವಂಗತ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ರಾಜಕಾರಣಿಯಾಗಿ ಚಿರಪರಿಚಿತ. ಆದರೆ ಅದಕ್ಕೂ ಮೊದಲು ಅವರು ಸಿನಿಮಾತಾರೆ ಆಗಬೇಕೆಂದು ಕನಸು ಕಂಡಿದ್ದರು. ಆ ವಿಷಯ ತುಂಬಾ ಮಂದಿಗೆ ಗೊತ್ತಿರಲಿಕ್ಕಿಲ್ಲ.

  ಸೊರಬದ ಸಾರೇಕೊಪ್ಪ ಬಂಗಾರಪ್ಪ ಸಿನಿಮಾ ನಟ ಆಗಬೇಕೆಂಬ ಉದ್ದೇಶದಿಂದ ಸಿನಿಮಾ ಉದ್ಯಮದಲ್ಲಿ ತೊಡಗಿಕೊಂಡರಾದರೂ ಉದ್ಯಮದ ಹಿಂದುಮುಂದು ಗೊತ್ತಿಲ್ಲದ ಕಾರಣ ಯಶಸ್ವಿಯಾಗಲಿಲ್ಲ. ನಂತರ ರಾಜಕೀಯದಲ್ಲಿ ಭವಿಷ್ಯ ಕಂಡುಕೊಂಡರು. ಆದರೆ ಅವರ ಮಗ ಕುಮಾರ್ ಬಂಗಾರಪ್ಪ ತಕ್ಕಮಟ್ಟಿಗೆ ಅವರ ಕನಸನ್ನು ನನಸು ಮಾಡಿದ್ದಾರೆ.

  ಇನ್ನೊಂದು ವಿಷಯವೆಂದರೆ, ಬಂಗಾರಪ್ಪನವರ ಮಗಳು ಗೀತಾ, 'ಅಣ್ಣಾವ್ರ' ಮಗ, ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಪತ್ನಿ. ಮಗಳ ಮೂಲಕ ನಟ ಅಳಿಯನನ್ನು ಪಡೆದು ತಮ್ಮ ಆಸೆಗೆ ನೀರೆರೆದಿದ್ದಾರೆ ಕೂಡ. ಡಾ. ರಾಜ್ ಕುಟುಂಬದ ಜೊತೆ ಕೇವಲ ಸಂಬಂಧ ಮಾತ್ರವಲ್ಲದೇ ಕಲಾ ಪೋಷಣೆಯನ್ನೂ ಅವರದೇ ಆದ ರೀತಿಯಲ್ಲಿ ಮಾಡಿದ್ದಾರೆ.

  ಅವರ ಇನ್ನೊಬ್ಬ ಮಗ ಮಧು ಬಂಗಾರಪ್ಪ ಕೂಡ ಸಿನಿಮಾ ಉದ್ಯಮದಲ್ಲಿ ತುಂಬಾ ವರ್ಷಗಳಿಂದ 'ಆಕಾಶ್' ಆಡಿಯೋ ನಡೆಸಿಕೊಂಡು ಬರುವ ಮೂಲಕ ಸೇವೆಯಲ್ಲಿದ್ದಾರೆ. ಜತೆಗೆ 'ದೇವಿ' ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರ ಬಿಡುಗಡೆ ಹಂತದಲ್ಲಿದೆ. (ಒನ್ ಇಂಡಿಯಾ ಕನ್ನಡ)

  English summary
  Former Karnataka Chief Minister S Bangarappa had dream to become an Actor. But that dream not fulfilled.
 
  Monday, December 26, 2011, 15:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X