ಎಸ್ ನಾರಾಯಣ್ ಆಕ್ಷನ್, ಕಟ್‌ನಲ್ಲಿ ಗೋಲ್ಡನ್ ಸ್ಟಾರ್
ಕೂಲ್ ಸಖತ್ ಹಾಟ್ ಮಗಾ ಎಂದು ಪ್ರೇಕ್ಷಕರ ಮುಂದೆ ಬಂದಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಈಗ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಆದರೆ ಈ ಬಾರಿ ಆಕ್ಷನ್, ಕಟ್ ಹೇಳುತ್ತಿರುವವರು ಕಲಾ ಸಾಮ್ರಾಟ್ ಎಸ್ ನಾರಾಯಣ್. ತಮಿಳಿನ ಯಶಸ್ವಿ ಚಿತ್ರ ಮೈನಾ ರೀಮೇಕ್ ಇದು.
ಕೊಬ್ರಿ ಮಂಜು ನಿರ್ಮಿಸುತ್ತಿರುವ ಈ ಚಿತ್ರವನ್ನು ಎಸ್ ನಾರಾಯಣ್ ಅವರೇ ನಿರ್ದೇಶಿಸಿದರೆ ಚೆನ್ನಾಗಿರುತ್ತದೆ ಎಂದು ಸ್ವತಃ ಸಲಹೆ ಕೊಟ್ಟವರು ಗೋಲ್ಡನ್ ಸ್ಟಾರ್. ನಾರಾಯಣ್ ಅವರ ಮನೆಗೆ ಹೋಗಿ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊರಬೇಕು ಎಂದು ಗಣೇಶ್ ವಿನಂತಿಸಿಕೊಂಡಿದ್ದಾರೆ.
ಕನ್ನಡದ ಜಾಯಮಾನಕ್ಕೆ ತಕ್ಕಂತೆ ಮೈನಾ ಚಿತ್ರವನ್ನು ತೆರೆಗೆ ತರುವುದಾಗಿ ಕಲಾ ಸಾಮ್ರಾಟ್ ತಿಳಿಸಿದ್ದಾರೆ. ಶೀಘ್ರದಲ್ಲೆ ಮೈನಾ ಚಿತ್ರ ಸೆಟ್ಟೇರಲಿದೆ. ಸದ್ಯಕ್ಕೆ ನಾಯಕಿಯಾಗಿ ಹುಡುಕಾಟ ನಡೆದಿದೆ. ತಮಿಳು ಚಿತ್ರದಲ್ಲಿ ಅಮಲಾ ಪೌಲ್ ಅಭಿನಯಿಸಿದ್ದರು. ಈಗ ಆಕೆಯನ್ನೇ ಕನ್ನಡಕ್ಕೆ ಕರೆತರಲಾಗುತ್ತಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Kala Samrat S. Narayan has confirmed that he will direct Golden Star Ganesh in a movie produced by K. Manju. It is the Kannada r Tamil hit Mynaa. The film will be made according to the style and nativity that suits the Kannada audience.
ಗೋಲ್ಡನ್ ಸ್ಟಾರ್ ಗಣೇಶ್ ಕೆ ಮಂಜು ರೀಮೇಕ್ ಶಿಕಾರಿ ಉಪೇಂದ್ರ golden star ganesh k manju shikari remake upendra


Click it and Unblock the Notifications











