ರಜನಿಕಾಂತ್ ಜೊತೆ ನಟಿಸಲು ಸೈನಾ ನೆಹ್ವಾಲ್ ತಹತಹ
ಅದೇನು ವಿಚಿತ್ರವೋ ಏನೋ ಗೊತ್ತಿಲ್ಲ ಭಾರತದ ಬ್ಯಾಡ್ಮಿಂಟನ್ ತಾರೆ ಸೈಯಾ ನೆಹ್ವಾಲ್ ಅವರಿಗೆ ನಟ ರಜನಿಕಾಂತ್ ಚಿತ್ರಗಳಲ್ಲಿ ನಟಿಸುವ ಮನಸ್ಸಾಗಿದೆ. ಹಾಗಂತ ಆಕೆ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ರಜನಿ ಚಿತ್ರದಲ್ಲಿ ನಟಿಸುವ ಅವಕಾಶ ಕೊಡಿ ಕಣ್ಮುಚ್ಚಿ ಪತ್ರಗಳಿಗೆ ಸಹಿ ಹಾಕುತ್ತೇನೆ ಎಂದು ಅತೀವ ಉತ್ಸಾಹದಲ್ಲಿ ಮಾತನಾಡಿದ್ದಾರೆ.
ಈ ವಯಸ್ಸಲ್ಲೂ ರಜನಿಕಾಂತ್ ತೆರೆಯ ಮೇಲೆ ಎಷ್ಟು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣುತ್ತಾರೆ. ಅವರ ಜೊತೆ ನಟಿಸಲು ಕಾತುರದಿಂದ ಇರುವುದಾಗಿ ಸೈನಾ ಹೇಳಿಕೊಂಡಿದ್ದಾರೆ. ಕ್ರಿಕೆಟನ್ನೂ ಮಿಸ್ ಮಾಡಿಕೊಳ್ಳದೆ ನೋಡುತ್ತಿದ್ದಾರಂತೆ. ಭಾರತ ಕಂಡಿತ ವಿಶ್ವಕಪ್ ಗೆಲ್ಲುತ್ತೆ ಎಂಬ ವಿಶ್ವಾಸವನ್ನೂ ಸೈನಾ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ರಜನಿ ಚಿತ್ರದಲ್ಲಿ ನಟಿಸಲು ಸೈನಾ ಏನೋ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಆದರೆ ಬಾಲಿವುಡ್ ಅಭಿನೇತ್ರಿ ರೇಖಾ ಹಾಗೂ ಮೋಹಕ ತಾರೆ ವಿದ್ಯಾ ಬಾಲನ್ ಮಾತ್ರ ಹಿಂದೆ ಸರಿದದ್ದು ಯಾಕೋ? ಬಣ್ಣಜಗತ್ತಿನ ಕನಸು ಕಾಣುತ್ತಿರುವ ಸೈನಾ ಸದ್ಯಕ್ಕೆ ಇಂಡಿಯನ್ ಓಪನ್‌ಗಾಗಿ ಪ್ರಾಕ್ಟೀಸ್ ಭರ್ಜರಿಯಾಗಿ ಮಾಡುತ್ತಿದ್ದಾರೆ.


Click it and Unblock the Notifications











