'ರಾಜಧಾನಿ'ಗೆ ಬಂದಿಳಿದ ಶೀನಾ ಶಹಬಾದಿ

By Rajendra

ಮುಂಬೈ ಮೂಲದ ರೂಪದರ್ಶಿ ಮತ್ತು ನಟಿ ಶೀನಾ ಶಹಬಾದಿ 'ರಾಜಧಾನಿ'ಗೆ ಬಂದಿಳಿದ್ದಾರೆ. ಆಕೆ ಅಭಿನಯಿಸಿದ ಇತ್ತೀಚೆಗಿನ ಚಿತ್ರಗಳಲ್ಲಿ ತೆಲುಗಿನ 'ಬಿಂದಾಸ್' ಚಿತ್ರವು ಒಂದು. ಬಾಕ್ಸಾಫೀಸ್ ನಲ್ಲಿ ಗೆಲುವು ಸಾಧಿಸಿದ ಚಿತ್ರ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತ್ತಿದ್ದಾರೆ.

ದೇವೀರಮ್ಮ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರ 'ರಾಜಧಾನಿ' ಮೂಲಕ ಶೀನಾ ಕನ್ನಡಕ್ಕೆ ಪರಿಚಯವಾಗುತ್ತ್ತಿದ್ದಾರೆ. ಯಶ್ ಮತ್ತು ಚೇತನ್ ಚಂದ್ರ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಯಶ್ ಗೆ ಜೋಡಿಯಾಗಿ ಶೀನಾ ಕಾಣಿಸಲಿದ್ದಾರೆ.ಈ ಚಿತ್ರದಲ್ಲಿ ಜನಪ್ರಿಯ ನಟ ಪ್ರಕಾಶ್ ರೈ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ತಮ್ಮ ಚಿತ್ರದಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ಕೊಡಬೇಕು ಎಂಬುದು ನಿರ್ಮಾಪಕಿ ಸೌಮ್ಯ ಸತ್ಯನ್ ಅವರ ಬಯಕೆಯಾಗಿತ್ತು. ಆದರೆ ಕನ್ನಡದ ನಟಿಯರು ಮುಂದೆ ಬರದ ಕಾರಣ ಕಡೆಗೆ ಶೀನಾರಿಗೆ ಅವಕಾಶ ಕೊಟ್ಟಿದ್ದಾಗಿ ಸೌಮ್ಯ ತಿಳಿಸಿದ್ದಾರೆ. ರಾಜಧಾನಿಯಲ್ಲಿ ನಟಿಸಲು ನಿರಾಕರಿಸಿದ್ದವರಲ್ಲಿ ಪ್ರಣೀತಾ ಸಹ ಒಬ್ಬರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X