ಜೋಗಯ್ಯನಿಗೆ ಪ್ರಪ್ರಥಮ ಬಾರಿಗೆ ಅದ್ದೂರಿ ಹೂಮಾಲೆ
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಜೋಗಯ್ಯ' ಚಿತ್ರ ಯಶಸ್ವಿ ಎರಡನೆ ವಾರ ಪೂರೈಸಿದೆ. ಈ ಎರಡು ವಾರಗಳಲ್ಲಿ 'ಜೋಗಯ್ಯ' ಕಲೆಕ್ಷನ್ ಕೂಡ ಬೊಂಬಾಟಾಗಿದೆ. ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಜೋಗಯ್ಯನಿಗೆ ಅಭಿಮಾನಿಗಳು ಕಪಾಲಿ ಚಿತ್ರಮಂದಿರದಲ್ಲಿ ಅದ್ದೂರಿ ಹೂವಿನ ಹಾರ ಸಮರ್ಪಿಸಿದ್ದಾರೆ.
ಈ ರೀತಿಯ ಅದ್ದೂರಿ ಹಾರದ ಸಮರ್ಪಣೆ ಭಾರತೀಯ ಚಿತ್ರರಂಗದಲ್ಲೇ ಪ್ರಪ್ರಥಮ ಎನ್ನಲಾಗಿದೆ. ಕಪಾಲಿ ಚಿತ್ರಮಂದಿರದ ಮುಂದಿನ ಜೋಗಯ್ಯ ಕಟೌಟ್ ಈಗ ಪುಷ್ಪಾಲಂಕಾರದಲ್ಲಿ ಕಂಗೊಳಿಸುತ್ತಿದೆ. ನಾಡಿನ ಎಲ್ಲ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘಗಳು ಕೈಜೋಡಿಸಿ ಈ ಮಾಲೆಯನ್ನು ಜೋಗಯ್ಯನಿಗೆ ಸಮರ್ಪಿಸಿರುವುದು ವಿಶೇಷ.
ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಸೇನಾ ಸಮಿತಿ, ಶ್ರೀರಾಮ್ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಗಂಡುಗಲಿ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಕೆಚ್ಚೆದೆಯ ಸಿಂಹ ಶಿವರಾಜ್ ಕುಮಾರ್ ಸೇನಾ ಸಮಿತಿ, ಶಿವು ಅಡ್ಡ, ಕಲಾ ಕಂಠೀರವ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಅಖಿಲ ಕರ್ನಾಟಕ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘಗಳು ಹೂಮಾಲೆ ಸಮರ್ಪಿಸಿವೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











