ಸಬ್ಸಿಡಿ ಚಿತ್ರಗಳ ಸಂಖ್ಯೆ 50 ರಿಂದ 70ಕ್ಕೆ:ಯಡಿಯೂರಪ್ಪ

By Rajendra

BS Yeddyurappa
ಈ ಬಾರಿ ನಾಲ್ಕು ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರರಂಗ ಕೀರ್ತಿ ಪತಾಕೆ ಹಾರಿಸಿದ್ದು, ಕರ್ನಾಟಕದ ಘನ ಸರ್ಕಾರಕ್ಕೆ ಅತೀವ ಆನಂದವನ್ನು ತಂದಿದೆ. ಇದೇ ಸಂತಸದಲ್ಲಿ ಈಗಿರುವ ಸಬ್ಸಿಡಿ (ರು.20 ಲಕ್ಷ) ಚಿತ್ರಗಳ ಸಂಖ್ಯೆಯನ್ನು 50ರಿಂದ 70ಕ್ಕೆ ಏರಿಸುತ್ತಿರುವುದಾಗಿ ಸನ್ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.

ಚಿತ್ರ ವಿತರಕರಿಗೆ ಹೆಚ್ಚು ಹೊರೆಯಾಗುತ್ತಿರುವ ತೆರಿಗೆಯಲ್ಲೂ ಕೊಂಚ ವಿನಾಯಿತಿ ನೀಡುವುದಾಗಿಯೂ ಸಿಎಂ ಭರವಸೆ ನೀಡಿದ್ದಾರೆ. ಚಿತ್ರ ನಿರ್ದೇಶಕರಾದ ಪಿ ಆರ್ ರಾಮದಾಸ್ ನಾಯ್ಡ (ಹೆಜ್ಜೆಗಳು ), ಪಿ ಶೇಷಾದ್ರಿ (ಬೆಟ್ಟದ ಜೀವ), ಬಿ ಸುರೇಶ್ (ಪುಟ್ಟಕ್ಕನ ಹೈವೇ) ಹಾಗೂ ಚಿತ್ರ ವಿಮರ್ಶಕ ಮನು ಚಕ್ರವರ್ತಿ ಅವರನ್ನು ಅಭಿನಂದಿಸಿದ್ದಾರೆ.

ಡಾ.ವಿಷ್ಣುವರ್ಧನ್ ಸ್ಮಾರಕಕ್ಕಾಗಿ ರು.10 ಕೋಟಿ, ಅಮೃತ ಮಹೋತ್ಸವ ಭವನ ನಿರ್ಮಾಣಕ್ಕಾಗಿ ರು.5 ಕೋಟಿ ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಈ ವಿಷಯವನ್ನು ಅವರು 2008-09ರ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಿಳಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Chief Minister B S Yeddyurappa announced subsidy scheme of Rs 20 lakh per film to 70 movies from the present 50.Recently Kannada films which are riding on a wave after bagging four national awards are in for a major fillip starting this year with the government deciding to extend the subsidy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X