ಇನ್ನೊಂದು ರಾಯಲ್ ಮದುವೆಗೆ ಆಂಧ್ರ ಸಜ್ಜು
ತೆಲುಗು ಚಿತ್ರರಂಗ ಮತ್ತೊಂದು ಅದ್ದೂರಿ ಮದುವೆಗೆ ಸಜ್ಜಾಗಿದೆ. ಚಿರಂಜೀವಿ ಪುತ್ರ ರಾಮ್ ಚರಣ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದ್ದು ಟಾಲಿವುಡ್ ಮತ್ತೊಂದು ಅದ್ದೂರಿ ಮದುವೆಗೆ ಸಾಕ್ಷಿಯಾಗಲಿದೆ. ಜೂ.14ರಂದು ತಿರುಪತಿ ಅಥವಾ ಹೈದರಾಬಾದ್‌ನಲ್ಲಿ ಮದುವೆ ನೆರವೇರಲಿದೆ.
ಅಪೋಲೋ ಆಸ್ಪತ್ರೆಯ ಸಂಸ್ಥಾಪಕ ಮತ್ತು ಚೈರ್ಮನ್ ಡಾ. ಪ್ರತಾಪ್ ರೆಡ್ಡಿ ಮೊಮ್ಮಗಳು ಉಪಾಸನಾ ಕಾಮಿನೇನಿ ಜೊತೆ ರಾಮ್ ಚರಣ್ ನಿಶ್ಚಿತಾರ್ಥ ಡಿ.1ರಂದು ನೆರವೇರಿತ್ತು. ಈಗ ನಡೆಯಲಿರುವ ಮದುವೆಗೆ ಅಭಿಮಾನಿಗಳಿಗೆಂದೇ ವಿಶೇಷವಾಗಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ರಾಮಚರಣ್‌ಗೆ 120 ಕೋಟಿ ರೂಪಾಯಿ ಲಿಕ್ವಿಡ್ ಕ್ಯಾಷ್ ಮತ್ತು ಸುಸಜ್ಜಿತ ಮಿನಿ ಫ್ಲೈಟ್ ಕೂಡಾ ಸಿಗಲಿದೆ ಎನ್ನುವುದು ತೆಲುಗು ಮಿಡಿಯಾ ಕಡೆಯಿಂದ ಬಂದಿರುವ ವರ್ತಮಾನ. ಇದನ್ನು ವರದಕ್ಷಿಣೆ ರೂಪದಲ್ಲಿ ನೀಡುತ್ತಿದ್ದಾರೋ ಅಥವಾ ಹಾಗೆಯೇ ಪ್ರೀತಿಯಿಂದ ನೀಡುತ್ತಿದ್ದಾರೋ ನಮಗದು ತಿಳಿಯದು.
ಈ ಹಿಂದೆ ಊಸರವಳ್ಳಿ ಜ್ಯೂ.ಎನ್ಟಿಆರ್ ಮದುವೆ ಕೂಡ ಸಾಕಷ್ಟು ಸುದ್ದಿಯಾಗಿತ್ತು. ವರದಕ್ಷಿಣೆ ರೂಪದಲ್ಲಿ ಬರೋಬರಿ 500 ಕೋಟಿ ತೆಗೆದುಕೊಂಡಿರುವ ಸುದ್ದಿ ಕೂಡ ಚಾಲ್ತಿಯಲ್ಲಿತ್ತು. ಮದುವೆ ಸೂಟ್ ಅನ್ನು ಚಿನ್ನದಲ್ಲಿ ಹೊಲಿಸಿದ್ದ ಜ್ಯೂ.ಎನ್ಟಿಆರ್‌ಗಾರು ಇದಕ್ಕೆ 20 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. (ಏಜೆನ್ಸೀಸ್)


Click it and Unblock the Notifications











