ಸೈಲೆಂಟಾಗಿ ಸೂಪರ್ ಶೂಟಿಂಗ್ ಮುಕ್ತಾಯ

By Rajendra

ಕನ್ನಡ ಚಿತ್ರೋದ್ಯಮದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಚಿತ್ರ ಸೂಪರ್. ಸುದೀರ್ಘ ಸಮಯದ ಬಳಿಕ ಉಪೇಂದ್ರ ಆಕ್ಷನ್, ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. ಈಗಾಗಲೆ ದುಬೈ, ಲಂಡನ್ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಸಣ್ಣಪುಟ್ಟ ತೇಪೆ ಹಚ್ಚುವ ಕೆಲಸಗಳನ್ನು ಬಿಟ್ಟರೆ ಉಳಿದಂತೆ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ.

ದುಬೈ ಮತ್ತು ಲಂಡನ್ ನ ಸುಂದರ ತಾಣಗಳನ್ನು ಸೆರೆಹಿಡಿದಿದ್ದೇವೆ ಎನ್ನುತ್ತಾರೆ ಛಾಯಾಗ್ರಾಹಕ ಅಶೋಕ್ ಕಶ್ಯಪ್. ಲಂಡನ್ ನಲ್ಲಿ 20 ದಿನಗಳ ಚಿತ್ರೀಕರಣ ಮುಗಿಸಿಕೊಂಡು ಸದ್ದಿಲ್ಲದಂತೆ ಚಿತ್ರತಂಡ ಬೆಂಗಳೂರಿಗೆ ಆಗಮಿಸಿದೆ. ಚಿತ್ರದ ಮೊದಲರ್ಧ ಲಂಡನ್ ನಲ್ಲಿ ನಡೆದರೆ ದ್ವಿತೀಯಾರ್ಧ ಬೆಂಗಳೂರಿನಲ್ಲಿ ನಡೆಯುತ್ತದಂತೆ.

ಇನ್ನು ಹತ್ತು ಹನ್ನೆರಡು ದಿನಗಳಲ್ಲಿ ಚಿತ್ರದ ಮೊದಲ ಪ್ರಿಂಟ್ ಸಿದ್ಧವಾಗಲಿದೆ ಎನ್ನುತ್ತವೆ ಮೂಲಗಳು. 2010ರಲ್ಲಿ ನಿರ್ಮಿಸಿದ ಭಾರಿ ಬಜೆಟ್ ಚಿತ್ರ ಇದಾಗಲಿದೆ ಎನ್ನುತ್ತಾರೆ ರಾಕ್ ಲೈನ್ ವೆಂಕಟೇಶ್. ನಯನತಾರಾ ಕನ್ನಡದಲ್ಲಿ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ಸಾಧು ಕೋಕಿಲ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. ವಿ ಮನೋಹರ್ ಅವರ ಸಂಗೀತ ಚಿತ್ರಕ್ಕಿದೆ. ಈ ಎಲ್ಲಾ ವಿಶೇಷಗಳ ಸರಮಾಲೆ ಹೊತ್ತ ಸೂಪರ್ ಶೀಘ್ರ ತೆರೆಗೆ ಅಪ್ಪಳಿಸಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X