ಇಮ್ರಾನ್ ಸರ್ದಾರಿಯಾ ಜೊತೆ ಕೈಜೋಡಿಸಿದ ಉಪ್ಪಿ
ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಲಿರುವ 'ಸೂಪರ್' ಸಿಂಬಲ್ ನ ಚಿತ್ರಕ್ಕೆ ಸದ್ದಿಲ್ಲದಂತೆ ತೆರೆಮರೆಯ ಕಸರತ್ತುಗಳು ನಡೆಯುತ್ತಿವೆ.ತಂತ್ರಜ್ಞರ, ಕಲಾವಿದರ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಚಿತ್ರದ ನೃತ್ಯ ಸಂಯೋಜನೆಗಾಗಿ ಇಮ್ರಾನ್ ಸರ್ದಾರಿಯಾ ಅವರನ್ನು ಉಪ್ಪಿ ಆಯ್ಕೆ ಮಾಡಿಕೊಂಡಿದ್ದಾರೆ.
'ಸೂಪರ್' ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಗುರುಕಿರಣ್ ಗೆ ಬದಲಾಗಿ ಈ ಬಾರಿ ವಿ ಹರಿಕೃಷ್ಣ ಅವರಿಗೆ ಉಪ್ಪಿ ಮಣೆ ಹಾಕಿರುವುದು ವಿಶೇಷ. ಸದ್ಯಕ್ಕೆ ಉಪ್ಪಿ ಮತ್ತು ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆಯಲ್ಲಿ ಮಗ್ನರಾಗಿದ್ದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ ಎನ್ನುತ್ತವೆ ಮೂಲಗಳು.
ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜಿಸಿದ್ದ 'ರಾಮ್' ಚಿತ್ರದ ''ಹೊಸ ಗಾನ ಬಜಾನಾ...''ಎಂಬ ಹಾಡಿನ ನೃತ್ಯ ಸಂಯೋಜನೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರ ಮೆಚ್ಚಿನ ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ. ಇದೇ ನೃತ್ಯ ನಿರ್ದೇಶಕನ ಜೊತೆ ಉಪ್ಪಿ ಕೈಜೋಡಿಸಿರುವುದು ವಿಶೇಷ.


Click it and Unblock the Notifications