»   » ವಸಂತಕಾಲ, ಮೆರವಣಿಗೆ, ಟಾಟಾ ಬಿರ್ಲಾ ತೆರೆಗೆ

ವಸಂತಕಾಲ, ಮೆರವಣಿಗೆ, ಟಾಟಾ ಬಿರ್ಲಾ ತೆರೆಗೆ

Subscribe to Filmibeat Kannada

ಸ್ಯಾಂಡಲ್‌ವುಡ್‌ನಲ್ಲಿ ಒಟ್ಟೊಟ್ಟಿಗೆ ಹಲವು ಚಿತ್ರಗಳು ಬಿಡುಗಡೆ ಕಾಣುತ್ತಿವೆ. ಪ್ರೇಕ್ಷಕ ಮಾತ್ರ ಉತ್ಸಾಹ ಕಳೆದುಕೊಳ್ಳದೆ ಎಲ್ಲ ಚಿತ್ರಗಳನ್ನು ತಾಳ್ಮೆಯಿಂದ ನೋಡುತ್ತಿದ್ದಾನೆ. ಸಾರ ಇಲ್ಲದ ಚಿತ್ರಗಳು ಮೂರು ದಿನಕ್ಕೆ ಎತ್ತಂಗಡಿಯಾಗುತ್ತಿದ್ದರೆ, ಉಳಿದವು ಶತದಿನೋತ್ಸವ ಆಚರಿಸಿಕೊಳ್ಳುತ್ತಿವೆ. ಈ ವಾರ (ಜೂ.27) ಒಟ್ಟಿಗೆ ಮೂರು ಚಿತ್ರಗಳು ಬಿಡುಗಡೆಯಾಗುತ್ತಿವೆ.

ಜಗ್ಗೇಶ್, ರವಿಚಂದ್ರನ್ ನಟನೆಯ 'ನೀ ಟಾಟಾ ನಾ ಬಿರ್ಲಾ', ಪ್ರಜ್ವಲ್ ದೇವರಾಜ್, ದಂತವೈದ್ಯೆ ಅಂದ್ರಿತಾ ರೇ ನಟನೆಯ 'ಮೆರವಣಿಗೆ' ಹಾಗೂ ಹರಿಪ್ರಿಯಾ, ನಾಗಕಿರಣ್ ನಟನೆಯ 'ವಸಂತಕಾಲ' ಒಟ್ಟಿಗೆ ಚಿತ್ರಮಂದಿರಗಳಿಗೆ ಲಗ್ಗೆ ಹಾಕಲಿವೆ. ಜಗ್ಗೇಶ್ ಮತ್ತು ರವಿಚಂದ್ರನ್ ನಟನೆಯ 'ಗಡಿಬಿಡಿ ಗಂಡ; ಮತ್ತು 'ರಾಮಕೃಷ್ಣ' ಚಿತ್ರಗಳು ಯಶಸ್ವಿಯಾದ ನಂತರ ಇಬ್ಬರೂ ಒಟ್ಟಿಗೆ ನಟಿಸುತ್ತಿರುವ ಚಿತ್ರ ಇದಾಗಿದೆ. ಶೇ.100ರಷ್ಟು ಹಾಸ್ಯವನ್ನು ನಂಬಿಕೊಂಡುವ ಹೋಗುವ ಪ್ರೇಕ್ಷಕರಿಗೆ ಶೇ.200ರಷ್ಟು ಹಾಸ್ಯ ಸಿಗುವುದು ಗ್ಯಾರಂಟಿ ಎನ್ನುತ್ತಾರೆ ನಿರ್ಮಾಪಕರು.

'ಅರಸು' ಮತ್ತು 'ಆಕಾಶ್' ಚಿತ್ರಗಳ ಸೂಪರ್‌ಹಿಟ್ ಆದನಂತರ 'ಮೆರವಣಿಗೆ'ಚಿತ್ರವನ್ನು ಕೈಗತ್ತಿಕೊಂಡಿದ್ದಾರೆ ನಿರ್ದೇಶಕ ಮಹೇಶ್ ಬಾಬು. ಈ ಚಿತ್ರ ಗೆದ್ದರೆ ಇವರಿಗೆ ಹ್ಯಾಟ್ರಿಕ್ ಸಂಭ್ರಮ. ಪ್ರಜ್ವಲ್ ದೇವರಾಜ್ ನಟನೆಯ 'ಗಂಗೆ ಬಾರೆ ತುಂಗೆ ಬಾರೆ'ಯನ್ನು ಯಾಕೋ ಪ್ರೇಕ್ಷಕ ಅಷ್ಟಾಗಿ ಇಷ್ಟಪಡಲಿಲ್ಲ.ಈಗ ಪ್ರಜ್ವಲ್ ಬ್ರೇಕ್‌ಗಾಗಿ ಕಾಯುತ್ತಿದ್ದಾರೆ. ವೃತ್ತಿಯಿಂದ ದಂತವೈದ್ಯೆ ಹಾಗೂ ಪ್ರವೃತ್ತಿಯಿಂದ ರೂಪದರ್ಶಿಯಾಗಿರುವ ಅಂದ್ರಿತಾ ರೇಗೆ ಮೆರವಣಿಗೆ ಮೊದಲನೆಯದು. ಕನಕಪುರದ ಕಾಂತರಾಜು ಸಾಕಷ್ಟು ಕನಕವರ್ಷವನ್ನೇ ಸುರಿದಿದ್ದಾರೆ ಮೆರವಣಿಗೆ ಮೇಲೆ. ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ.

'ವಸಂತಕಾಲ' ಚಿತ್ರದ ಮೂಲಕ ಮತ್ತೊಬ್ಬ ನಿರ್ದೇಶಕ ವಡ್ಡನಹಳ್ಳಿ ಶ್ರೀನಿವಾಸ್ ಅವರ ಭವಿಷ್ಯ ನಿರ್ಧಾರವಾಗಲಿದೆ. ಕಥೆ-ಚಿತ್ರಕಥೆ-ನಿರ್ದೇಶನ ಮಾಡಿರುವ ಶ್ರೀನಿವಾಸ್ ಅವರಿಗೆ ಇದು ಪ್ರಥಮ ಚಿತ್ರ. ತಾಯಿ ಮತ್ತು ಮಗನ ನಡುವಿನ ವಾತ್ಸಲ್ಯದ ಸೆಂಟಿಮೆಂಟಿನ ಜೊತೆಗೆ ತ್ರಿಕೋಣ ಪ್ರೇಮದ ಕಥಾ ಹಂದರ ಈ ಚಿತ್ರಕ್ಕಿದೆ. ಸತತ ಫ್ಲಾಪ್ ಚಿತ್ರಗಳಿಂದ ಕಂಗೆಟ್ಟಿರುವ ನಾಯಕ ಕೃಷ್ಣ ಒಂದೇ ಒಂದು ಬ್ರೇಕ್‌ಗಾಗಿ ಹಂಬಲಿಸುತ್ತಿದ್ದಾರೆ. ಎಲ್ಲಾ ಪ್ರೇಕ್ಷಕ ಪ್ರಭುವಿನ ಕೈಯಲ್ಲಿದೆ. ಚಿತ್ರಕ್ಕೆ ಮನೋಹರ್ ಸಂಗೀತ, ವೀನಸ್ ಮೂರ್ತಿ ಛಾಯಾಗ್ರಹಣವಿದೆ.

ಬೆಂಗಳೂರಿನಲ್ಲಿ ಯಾವ ಚಿತ್ರ ಎಲ್ಲಿ?
ನೀ ಟಾಟಾ ನಾ ಬಿರ್ಲಾ: 4 ಆಟದ ಪ್ರದರ್ಶನದ ಚಿತ್ರಮಂದಿರಗಳು- ಪ್ರಸನ್ನ, ನವರಂಗ್, ವಿನಾಯಕ, ಆದರ್ಶ, ಸಿದ್ದೇಶ್ವರ, ಬಾಲಾಜಿ, ಚಂದ್ರೋದಯ, ವೆಂಕಟೇಶ್ವರ(ಕೆ.ಆರ್.ಪುರ), ಕೃಷ್ಣ(ಬೊಮ್ಮನಹಳ್ಳಿ), ಭಾರತಿ(ಪೀಣ್ಯ), ಗಣೇಶ್(ಯಲಹಂಕ), ಉಲ್ಲಾಸ್, ಬಾಬು(ದೊಮ್ಮಸಂದ್ರ), ರಾಜರಾಜೇಶ್ವರಿ(ಲಗ್ಗೆರೆ), ಪೃಥ್ವಿ (ನಾಗಾವರ), ರಾಜರಾಜೇಶ್ವರಿ (ಮಲ್ಲತ್‌ಹಳ್ಳಿ), ವೀರಭದ್ರೇಶ್ವರ (ಲಗ್ಗೆರೆ), ರಾಜಲಕ್ಷ್ಮಿ(ಅರಕೆರೆ), ಅಪ್ಸರ, ಅಶೋಕ, ಲಿಡೋ(2 ಆಟಗಳು), ವೀರೇಶ್(ಬೆ. ಆಟ)

ಮೆರವಣಿಗೆ: ಪ್ರಮೋದ್, ಉಮಾ, ನಂದಿನಿ, ಗೋವರ್ಧನ್, ಸಿದ್ದೇಶ್ವರ, ವೆಂಕಟೇಶ್ವರ(ಆವಲಹಳ್ಳಿ), ಮಾರುತಿ(ರಾಜಗೋಪಾಲನಗರ), ವಿಜಯಲಕ್ಷ್ಮಿ (ಗರುಡಾಚಾರ್ ಪಾಳ್ಯ), ವಜ್ರೇಶ್ವರಿ(ಉಲ್ಲಾಳ್), ವಿಷನ್ ಸಿನಿಮಾಸ್(ಡಬ್ಬರ್ ರೋಡ್), ಲಿಡೋ(ಹಲಸೂರು), ಕಾಮಾಕ್ಯ(ಕತ್ರಿಗುಪ್ಪೆ), ಪಿವಿಆರ್, ಪ್ರಕಾಶ್ (ಯಲಹಂಕ), ಅಶೋಕ(ಚಿಕ್ಕಬಾಣವಾರ) ಎಲ್ಲ ಚಿತ್ರಮಂದಿರಗಳಲ್ಲೂ 4 ಆಟಗಳು.

ವಸಂತಕಾಲ: ನರ್ತಕಿ(4 ಆಟ), ಸಂಪಿಗೆ(4 ಆಟ), ವಿಶಾಲ್(3 ಆಟ), ನಳಂದ(ಬೆ.ಆಟ)

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada