ದಿ ಡರ್ಟಿ ಪಿಕ್ಚರ್ ನಲ್ಲಿ ವಿದ್ಯಾ ಬಾಲನ್ ಭರ್ಜರಿ ಶಾಕ್

ನೋಡಿದ ಕೂಡಲೆ ಚಳಿಗುಳ್ಳೆಗಳೆನ್ನಿಬ್ಬಿಸುವ, ಉಕ್ಕುವ ಯೌವನ ಪ್ರದರ್ಶಿಸುವ ಮೈಬಿಗಿದ ಉಡುಪುಗಳು, ವೈಯಾರ ತುಂಬಿದ ಮಾದಕ ನೋಟ, ಅವರನ್ನು ಸುತ್ತುವರಿದು ಮುತ್ತು ನೀಡುತ್ತಿರುವ ನಾಯಕರ ಚಿತ್ರಗಳು ಚಿತ್ರಪ್ರೇಮಿಗಳಲ್ಲಿ ನಿರೀಕ್ಷೆಗೂ ಮೀರಿದ ನಿರೀಕ್ಷೆಗಳನ್ನು ಹುಟ್ಟುಹಾಕುತ್ತಿವೆ.
ಇಶ್ಕಿಯಾ ಚಿತ್ರದಲ್ಲಿ ವಿದ್ಯಾ ಬಾಲನ್ ತಾವು ಎಂತಹ ನಟಿ ಎಂಬುದನ್ನು ಸಾಬೀತು ಮಾಡಿದ್ದಾರೆ. ಅದರಲ್ಲಿ ಅರ್ಶದ್ ವಾರ್ಸಿ ಜೊತೆ ಇದ್ದ ಸುದೀರ್ಘ ಚುಂಬನದ ದೃಶ್ಯ ವಿದ್ಯಾ ಹಿಂದೆ ಮಾಡಿದ್ದ ಚಿತ್ರ ನೋಡಿದವರನ್ನು ಬೆಚ್ಚಿ ಬೀಳಿಸಿತ್ತು. ಆ ಚಿತ್ರದಲ್ಲಿ ಪ್ರೇಮ ಪ್ರತಿತ್ಯಕ್ತನಾಗಿ ನಟಿಸಿದ್ದ ನಾಸಿರುದ್ದಿನ್ ಷಾ ದಿ ಡರ್ಟಿ ಪಿಕ್ಚರ್ ನಲ್ಲಿ ಮತ್ತೆ ವಿದ್ಯಾ ಜೊತೆ ನಟಿಸುತ್ತಿದ್ದಾರೆ.
ಈ ಚಿತ್ರದಲ್ಲಿ ನಾಸಿರುದ್ದಿನ್, ಕಿಸ್ಸಿಂಗ್ ಸ್ಟಾರ್ ಇಮ್ರಾನ್ ಹಶ್ಮಿ ಮತ್ತು ಮೊದಲ ಬಾರಿ ಮೀಸೆ ಹೊತ್ತಿರುವ ತುಷಾರ್ ಕಪೂರ್ ಅವರು ವಿದ್ಯಾ ಬಾಲನ್ ಸಂಗ ಸರಸವಾಡಲಿದ್ದಾರೆ. ಕ್ಲಬ್ ಡಾನ್ಸ್ ದೃಶ್ಯವೊಂದರಲ್ಲಿ ಮೂವರೂ ವಿದ್ಯಾಳನ್ನು ಅಪ್ಪಿ ಮುದ್ದಿಸುತ್ತಿರುವ ದೃಶ್ಯ ಇಂಟರ್ನೆಟ್ ನಲ್ಲಿ ಈಗಾಗಲೆ ಬಿಸಿಗಾಳಿಯನ್ನು ಎಬ್ಬಿಸಿದೆ.
ಬ್ಯೂಟಿಫುಲ್ ಆಗಿರುವ ವಿದ್ಯಾ ಬಾಲನ್ ತಮ್ಮ ಹಿಂದಿನ ಎಲ್ಲ ಚಿತ್ರಗಳಿಗಿಂತ ಅತ್ಯಂತ ಬೋಲ್ಡಾಗಿ ನಟಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಿಲ್ಕ್ ಸ್ಮಿತಾ ಪಾತ್ರ ತುಂಬಲೆಂದೇ ತಮ್ಮ ದೇಹವನ್ನೂ ವಿದ್ಯಾ ಬಾಲನ್ ತುಂಬಿಕೊಂಡು ದುಂಡದುಂಡಗಾಗಿದ್ದಾರೆ. ಇನ್ನು ಅವರನ್ನು ಬೆಳ್ಳಿತೆರೆಯಲ್ಲಿ ನೋಡಿ ಆನಂದಿಸಲು ಕಾಯಬೇಕಷ್ಟೆ.


Click it and Unblock the Notifications