For Quick Alerts
  ALLOW NOTIFICATIONS  
  For Daily Alerts

  ಬೆಂಗಾಲಿಯ ಖ್ಯಾತ ಕಿರುತೆರೆ ನಟಿ ಮೇಲೆ ಅತ್ಯಾಚಾರ: ವಿಡಿಯೋ ಮಾಡಿ ಬ್ಲಾಕ್ ಮೇಲ್

  |

  ಬೆಂಗಾಲಿಯ ಖ್ಯಾತ ನಟಿ ಮತ್ತು ರೂಪದರ್ಶಿ ಮೇಲೆ ಅತ್ಯಾಚಾರವೆಸಗಿರುವ ಬಗ್ಗೆ ವರದಿಯಾಗಿದೆ. ಕಲ್ಕತ್ತಾದ ಬಿಜೋಯ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. "ಸಾತ್ ಭಾಯ್ ಚಂಪ" ಮತ್ತು ಇತರ ಟಿವಿ ಕಾರ್ಯಕ್ರಮಗಳ ಮೂಲಕ ಖ್ಯಾತಿಗಳಿಸಿದ್ದ ನಟಿಯ ಮೇಲೆ, ಪರಿಚಯವಿದ್ದ ವ್ಯಕ್ತಿಯೇ ಅತ್ಯಾಚಾರ ಮಾಡಿರುವ ಬಗ್ಗೆ ವರದಿಯಾಗಿದೆ.

  Sushanth Singh Rajput ಕೊನೆಯದಾಗಿ ನಟಿಸಿದ್ದು ಈ ಹಾಡಿನಲ್ಲಿ | Last Song shoot | Filmibeat Kannada

  ಈ ಸಂಬಂಧ ಜಾದವ್ ಪುರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಜುಲೈ 5 ರಂದು ಈ ಘಟನೆ ನಡೆದಿರುವುದಾಗಿ ತಿಳಿಸಿದ್ದಾರೆ. ಪರಿಚಿತ ವ್ಯಕ್ತಿಯೊಬ್ಬ ಹಣದ ಸಹಾಯ ಕೇಳಿ ಬಿಜೋಯ್ ನ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ನಟಿಯ ಮನೆಗೆ ಭೇಟಿ ನೀಡಿದ್ದಾನೆ. ಅದೆ ಸಮಯವನ್ನು ಬಳಸಿಕೊಂಡು ನಟಿಯ ಮೇಲೆ ಅತ್ಯಾಚಾರ ವೆಸಗಿದ್ದಾನೆ.

  ಅಷ್ಟೆಯಲ್ಲದೆ ಅತ್ಯಾಚಾರ ದೃಶ್ಯವನ್ನು ಆತ ಫೋನಿನಲ್ಲಿ ಚಿತ್ರೀಕರಿಸಿದ್ದಾನೆ. ಆಕೆ ಈ ವಿಚಾರವನ್ನು ಎಲ್ಲಿಯೂ ಹೇಳಬಾರದು ಮತ್ತು ದೂರು ನೀಡಿದರೆ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  ಆದರೆ ನಟಿ ಧೈರ್ಯ ತೋರಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅತ್ಯಾಚಾರವೆಸಗಿದ ವ್ಯಕ್ತಿ ಜೊತೆ ನಟಿ ಮೊದಲು ಉತ್ತಮ ಬಾಂಧವ್ಯ ಹೊಂದಿದ್ದರಂತೆ. ಆದರೆ ಕಳೆದ ಕೆಲವು ವರ್ಷಗಳಿಂದ ಇಬ್ಬರ ಗೆಳೆತನ ಮುರಿದುಬಿದ್ದಿತ್ತು ಎಂದು ಹೇಳಲಾಗುತ್ತಿದೆ.

  ಆದರೆ ಲಾಕ್ ಡೌನ್ ಸಮಯದಲ್ಲಿ ಆತ ಫೇಸ್ ಬುಕ್ ನಲ್ಲಿ ಮತ್ತೆ ಸಂಪರ್ಕ ಮಾಡಿ ಹಣದ ಸಹಾಯ ಕೇಳಿ ಭೇಟಿಯಾಗಲು ವಿನಂತಿಸಿದ್ದಾನೆ. ಆದರೆ ನಟಿ ಭೇಟಿಯಾಗಲು ನಿರಾಕರಿಸಿದ್ದಾರೆ. ಕಷ್ಟವನ್ನು ಹೇಳಿಕೊಂಡು, ನಟಿಯ ಮನವೊಲಿಸಿ ಭೇಟಿಯಾಗಲು ಒಪ್ಪಿಸಿ ಆಕೆಯ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಸದ್ಯ ಪೊಲೀಸರು ಆಕೆಯ ಹೇಳಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

  English summary
  26 year old Famous Bengali actress Raped. she lodged complaint in Jadavpur police station.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X