»   » ‘ಚುಂಬನ’ ಕನ್ಯೆ ರಕ್ಷಿತಾ ಮುತ್ತಿನ ಕಥೆ

‘ಚುಂಬನ’ ಕನ್ಯೆ ರಕ್ಷಿತಾ ಮುತ್ತಿನ ಕಥೆ

Posted By:
Subscribe to Filmibeat Kannada
  • ಎಂ. ವಿನೋದಿನಿ
‘ಗುಡ್‌ಲಕ್‌’ಗಾಗಿ ಬಿಚ್ಚಮ್ಮನಾಗಲೂ ಸೈ ಗೌರಮ್ಮನಾಗಲೂ ಸೈ ಎನ್ನುತ್ತಿರುವ ರಾಧಿಕಾ! ನಾನು ಬಳುಕುವ ಬಳ್ಳಿ ಎಂದು ಮೈಚಳಿ ಬಿಟ್ಟಿರುವುದನ್ನು ತೊದಲುಗನ್ನಡದಲ್ಲಿ ಘೋಷಿಸಿಕೊಂಡಿರುವ ದಾಮಿನಿ! ರಾಧಿಕಾ, ದಾಮಿನಿಯೇ ಎಲ್ಲಕ್ಕೂ ಸೈ ಎನ್ನುವಾಗ ರಕ್ಷಿತಾ ಸುಮ್ಮನಿದ್ದಾರಾ?

ಹೇಳಿಕೇಳಿ ರಕ್ಷಿತಾ ‘ಸುಂಟರಗಾಳಿ’ ಖ್ಯಾತಿಯ ಹುಡುಗಿ. ಪಕ್ಕದೂರುಗಳಲ್ಲಿ ಸೌಂದರ್ಯ ಪ್ರದರ್ಶಿಸಿ ಸೈ ಅನ್ನಿಸಿಕೊಂಡಿರುವ ಹುಡುಗಿ. ಈ ಪರಿಯ ಖ್ಯಾತಿಯ ರಕ್ಷಿತಾ ಇದೀಗ ತವರುನೆಲದಲ್ಲೂ ಬಾಗಿ ಬಳುಕುತ್ತಿದ್ದಾರೆ.

ದರ್ಶನ್‌ರ ಭಜಬಲ ಪರಾಕ್ರಮಕ್ಕೆ ಕ್ಯಾರೆ ಎನ್ನದ ಪ್ರೇಕ್ಷಕರು ರಕ್ಷಿತಾಳ ಸುಂಟರಗಾಳಿ ಸೌಂದರ್ಯ ದರ್ಶನವನ್ನು ಮೆಚ್ಚಿ ‘ಕಲಾಸಿ ಪಾಳ್ಯ’ ಗೆಲ್ಲಿಸಿದ್ದೀಗ ಇತಿಹಾಸ. ಕಲಾಸಿಪಾಳ್ಯ ಯಶಸ್ಸಿನಿಂದಾಗಿ ರಕ್ಷಿತಾಗೆ ಸಿನಿಮಾ ಗೆಲ್ಲಿಸುವ ವರ್ಚಸ್ಸೂ ಬಂದುಬಿಟ್ಟಿದೆ. ಇದೆಲ್ಲ ಸರಿ, ಸುಂಟರಗಾಳಿಯ ನಂತರ ಮತ್ತೇನು? ‘ಯಶವಂತ್‌’ ಎನ್ನುತ್ತಾರೆ ದಯಾಳ್‌.

ದಯಾಳ್‌ ಗೊತ್ತಲ್ಲ ? ‘ಬಾ ಬಾರೋ ರಸಿಕ’ ಖ್ಯಾತಿಯ ನಿರ್ದೇಶಕರು. ರಮ್ಯಕೃಷ್ಣ , ಆಶಿತಾ, ಸುನೀಲ್‌ ನಟನೆಯ ‘ಬಾ ಬಾರೋ ರಸಿಕ’ ಕಳೆದ ವರ್ಷದ ಹಿಟ್‌ ಚಿತ್ರಗಳಲ್ಲೊಂದು. ಇದೇ ದಯಾಳ್‌ ಈಗ ‘ಯಶವಂತ್‌’ ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದ ನಾಯಕ ಮುರಳಿ, ನಾಯಕಿ ರಕ್ಷಿತಾ.

ರಸಿಕ ಚಿತ್ರದಲ್ಲಿ ಸುನೀಲ್‌ ಹಾಗೂ ಆಶಿತಾ ತುಟಿಗೆ ತುಟಿ ಬೆಸೆದ ವಿಷಯ ಸುದ್ದಿಯಾಗಿತ್ತು . ಈ ಸುದ್ದಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಕರ್ಷಿಸುವಲ್ಲಿಯೂ ಗೆದ್ದಿತ್ತು. ಈ ಗೆಲುವಿನ ಎಳೆಯನ್ನೇ ಮುಂದುವರೆಸಲು ದಯಾಳ್‌ ಮತ್ತೆ ಮುತ್ತಿನ ಹಿಂದೆ ಬಿದ್ದಾರೆ. ಪಾತ್ರಧಾರಿಗಳು ಮಾತ್ರ ಬದಲಾಗಿದ್ದಾರೆ. ಆಶಿತಾ-ಸುನಿಲ್‌ ಜಾಗದಲ್ಲೀಗ ರಕ್ಷಿತಾ-ಮುರಳಿ.

ತುಟಿಮುತ್ತಿನ ದೃಶ್ಯ ‘ಯಶವಂತ್‌’ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲೊಂದು ಎಂದು ಕೆನ್ನೆ ದಯಾಳ್‌ ಹೇಳುತ್ತಾರೆ. ರಸಿಕ ಚಿತ್ರಕ್ಕಿಂತಲೂ ಯಶವಂತ್‌ ಚಿತ್ರದಲ್ಲಿನ ಮುತ್ತಿನ ದೃಶ್ಯ ರೋಚಕವಾಗಿದೆ ಎಂದು ಹೇಳುವಾಗ ದಯಾಳ್‌ ಕೆನ್ನೆ ಕೆಂಪುಕೆಂಪು. ದಯಾಳ್‌ ಮಾತಿನಲ್ಲಿ ತಥ್ಯವೂ ಇರಬಹುದು. ಅವರಿಗ ಚುಂಬನ ದೃಶ್ಯಗಳ ನಿರ್ದೇಶನದಲ್ಲಿ ಪಳಗಿದ್ದಾರೆ. ಇನ್ನು ನಟಿ ರಕ್ಷಿತಾ ಕೂಡ ತುಟಿಗೆ ತುಟಿ ಬೆಸೆಯುವುದರಲ್ಲಿ ಅನುಭವಿಯೇ. ಈಮುನ್ನ ‘ಲವ್‌’ ಚಿತ್ರಕ್ಕಾಗಿ ಆದಿತ್ಯನನ್ನು ಚುಂಬಿಸಿದ್ದ ರಕ್ಷಿತಾ ಯಶವಂತ್‌ ಮೂಲಕ ಚುಂಬಕ ದಾರಿಯಲ್ಲಿ ಪಯಣ ಮುಂದುವರೆಸಿದ್ದಾರೆ. ಇದ್ದುದರಲ್ಲಿ ಮುರಳಿಯೇ ಅಮಾಯಕ!

ಚುಂಬನದ ವಿಷಯ ಬಿಡಿ, ರಕ್ಷಿತಾ ತೆಳ್ಳಗಾಗಿರುವ ಸುದ್ದಿ ನಿಮಗೆ ಗೊತ್ತುಂಟಾ? ಡಯೆಟ್ಟು , ಆಯುರ್ವೇದ ಟ್ಯಾಬ್ಲೆಟ್ಟು ಎಂದೆಲ್ಲಾ ಒದ್ದಾಡಿ ರಕ್ಷಿತಾ ತೂಕ ಇಳಿಸಿಕೊಂಡಿದ್ದಾರೆ. ಆದರೆ ಸ್ಲಿಂ ಆಗಿರುವ ಕುರಿತು ರಕ್ಷಿತಾಗೇ ಅಂಥಾ ಖುಷಿಯೇನೂ ಇಲ್ಲ . ಆಕೆಗೆ ಅಸುರಕ್ಷತೆಯ ಭಯ!

ರಕ್ಷಿತಾ ಜಾತಕದಲ್ಲೀಗ ಅವಕಾಶಗಳ ಸುಂಟರಗಾಳಿಯ ಕಾಲ. ತೆಲುಗು, ತಮಿಳು ಸುತ್ತಿಬಂದದ್ದಾಯಿತು, ಕೊನೆಗುಳಿದದ್ದು ಕನ್ನಡವೇ ಎನ್ನುವಷ್ಟರಲ್ಲಿ ತೆಲುಗಿನಲ್ಲಿ ಎರಡು ಮೂರು ಭಾರೀ ಅನ್ನುವಂಥ ಅವಕಾಶಗಳು ರಕ್ಷಿತಾಳನ್ನು ಹುಡುಕಿಕೊಂಡು ಬಂದಿವೆ. ತೆಲುಗು ಚಿತ್ರಗಳೆಂದ ಮೇಲೆ ಸ್ಲಿಂ ಆಗಿದ್ದರೆ ಹೇಗೆ? ಅಲ್ಲಿ ಗಜಗಾಮಿನಿಯರಿಗೇ ಮೊದಲ ಮಣೆ. ಅಲ್ಲದೇ ರಕ್ಷಿತಾ ಜೊತೆ ನಟಿಸುವ ನಾಯಕರೂ ‘ತೂಕ’ದ ವ್ಯಕ್ತಿಗಳು. ಆದ್ದರಿಂದ ರಕ್ಷಿತಾ ತೂಕ ಹೆಚ್ಚಿಸಿಕೊಳ್ಳಲೇಬೇಕು. ಹಾಗಾಗಿ ಸ್ಲಿಂ ಆಗಿರುವ ರಕ್ಷಿತಾಗೆ ಮತ್ತೆ ಗುಂಡಮ್ಮನಾಗುವ ಬಯಕೆ.

ಬಣ್ಣದ ಲೋಕ ಹೇಗಿರುತ್ತೆ ನೋಡಿ?

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada