»   » ‘ಗಂಡನ ಮನೆ’ಯಲ್ಲಿ ಬಸ್‌ ಕಂಡಕ್ಟರ್‌ ಶಿವಣ್ಣ!

‘ಗಂಡನ ಮನೆ’ಯಲ್ಲಿ ಬಸ್‌ ಕಂಡಕ್ಟರ್‌ ಶಿವಣ್ಣ!

Subscribe to Filmibeat Kannada


ಇನ್ನೊಂದು ಕರವಸ್ತ್ರದ ಚಿತ್ರಕ್ಕೆ ಪ್ರಯತ್ನಗಳು ನಡೆದಿವೆ. ಕಣ್ಣೀರು ನಿರ್ದೇಶಕ ಎಸ್‌.ಮಹೇಂದರ್‌ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಚಿತ್ರದ ಹೆಸರು ‘ಗಂಡನ ಮನೆ’.

‘ತವರಿಗೆ ಬಾ ತಂಗಿ’ ನಿರ್ಮಾಣ ಮಾಡಿದ ಆರ್‌.ಎಸ್‌.ಗೌಡ ಈ ಚಿತ್ರದ ನಿರ್ಮಾಪಕರು. ಈ ಚಿತ್ರದಲ್ಲಿ ನಟ ಶಿವರಾಜ್‌ ಕುಮಾರ್‌ ಬಸ್‌ ಕಂಡಕ್ಟರ್‌ ಪಾತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸುತ್ತಿದ್ದಾರೆ. ಜ.29ರಂದು ಮುಹೂರ್ತ ಸಮಾರಂಭ ನಡೆಯಲಿದ್ದು, ಗ್ಲಾಮರಸ್‌ ಬೊಂಬೆ ಗೌರಿ ಚಿತ್ರದ ನಾಯಕಿ. ಆಕೆ ‘ಗಂಡನ ಮನೆ’ಯಲ್ಲಿ ಅದೇನು ಕಷ್ಟಪಡುವಳೋ ನೋಡಬೇಕು.

ದೊಡ್ಡಣ್ಣ, ಅವಿನಾಶ್‌, ಹೇಮಾ ಚೌಧುರಿ, ಕರಿಬಸವಯ್ಯ, ಟೆನ್ನಿಸ್‌ ಕೃಷ್ಣ ತಾರಾಗಣದಲ್ಲಿದ್ದಾರೆ. ಸುಂದರನಾಥ್‌ ಸುವರ್ಣ ಕ್ಯಾಮೆರಾ ಹಿಡಿಯಲಿದ್ದು, ಬಿ.ಎ.ಮಧು ಮನಮಿಡಿಯುವ ಸಂಭಾಷಣೆ ಬರೆದಿದ್ದಾರೆ. ಚಿತ್ರದ ಪ್ರಕಟಣೆ ಕೇಳಿದ ಕರವಸ್ತ್ರದ ಕಾರ್ಖಾನೆಗೆ ಖುಷಿಯಾಯಿತಂತೆ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada