»   » ‘ಇನ್ನೂ ನಟಿಸುವಾಸೆ... ’ನನ್ನೊಳಗಿನ ಕಲಾವಿದನಿಗಿನ್ನೂ ನಟಿಸುವ ಆಸೆ ತೀರಿಲ್ಲ ಎಂದರು ವರನಟ ರಾಜ್‌. ಅವರ ಮಾತು ಹೊಸ ಚಿಗುರಿನ ಮುಹೂರ್ತದಲ್ಲಿ ಹಳೆಯ ಬೇರಿನ ಹೊಸ ಮೊಳಕೆಯಂತಿತ್ತು !

‘ಇನ್ನೂ ನಟಿಸುವಾಸೆ... ’ನನ್ನೊಳಗಿನ ಕಲಾವಿದನಿಗಿನ್ನೂ ನಟಿಸುವ ಆಸೆ ತೀರಿಲ್ಲ ಎಂದರು ವರನಟ ರಾಜ್‌. ಅವರ ಮಾತು ಹೊಸ ಚಿಗುರಿನ ಮುಹೂರ್ತದಲ್ಲಿ ಹಳೆಯ ಬೇರಿನ ಹೊಸ ಮೊಳಕೆಯಂತಿತ್ತು !

Subscribe to Filmibeat Kannada

ಮುಖಪುಟ  --> ಸ್ಯಾಂಡಲ್‌ವುಡ್‌  --> ರಾಜಮಾರ್ಗ  --> ಲೇಖನಫೆಬ್ರವರಿ 26, 2003

‘ಇನ್ನೂ ನಟಿಸುವಾಸೆ... ’
ನನ್ನೊಳಗಿನ ಕಲಾವಿದನಿಗಿನ್ನೂ ನಟಿಸುವ ಆಸೆ ತೀರಿಲ್ಲ ಎಂದರು ವರನಟ ರಾಜ್‌. ಅವರ ಮಾತು ಹೊಸ ಚಿಗುರಿನ ಮುಹೂರ್ತದಲ್ಲಿ ಹಳೆಯ ಬೇರಿನ ಹೊಸ ಮೊಳಕೆಯಂತಿತ್ತು !

*ದಟ್ಸ್‌ಕನ್ನಡ ಬ್ಯೂರೊ

‘ಕಲಾಸಾಗರದ ಪುಟ್ಟ ಮೀನು ನಾನು !’

ಹಾಗೆಂದದ್ದು ವರನಟ ರಾಜ್‌ಕುಮಾರ್‌. ಉಳಿದ ಯಾವ ನಟರ ಬಾಯಲ್ಲಿ ಅಸಹ್ಯವಾಗಿ ಅಪದ್ಧವಾಗಿ ತೋರುವ ಈ ಮಾತನ್ನು ರಾಜ್‌ ಸಹಜವಾಗಿ ಹೇಳಿದರು. ಅದು ಸಾಧಕನ ವಿನಯ.

ರಾಜ್‌ಕುಮಾರ್‌ ಮಾತನಾಡುತ್ತಿದ್ದುದು ನಿರ್ದೇಶಕ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಅವರ ಪುತ್ರ ಆದಿತ್ಯನ ಮೊದಲ ಸಿನಿಮಾ ‘ಲವ್‌’ ಮುಹೂರ್ತದಲ್ಲಿ , ಫೆ.25ರ ಮಂಗಳವಾರ. ಈಚೆಗೆ ವೇದಿಕೆಗೇ ಅಪರೂಪ ಎಂಬಂತಾಗಿರುವ ರಾಜ್‌ಕುಮಾರ್‌, ಉತ್ಸಾಹದಿಂದ ಮಾತನಾಡಿದರು. ತಮ್ಮ ನಟಿಸುವ ಆಸೆ ಇನ್ನೂ ತೀರಿಲ್ಲ ಎಂದರು. ಆಗ ನೋಡಬೇಕಿತ್ತು ಅವರ ಕಣ್ಣುಗಳಲ್ಲಿನ ಹೊಳಪು.

‘ಇವತ್ತಿಗೂ ಪಾರ್ಟ್‌ ಮಾಡಬೇಕು ಅನ್ನೋ ಆಸೆ ಇದೆ. ಮನುಷ್ಯನಿಗೆ ಮೊದಲು ಭಯ ಬೇಕು. ಆಗ ನಯ ಕೂಡ ಇರ್ತದೆ’ ಎಂದರು ರಾಜ್‌. ಅವರು ತಮ್ಮ ಎಂದಿನ ಫಿಲಸಾಫಿಕಲ್‌ ಶೈಲಿಯಲ್ಲಿ ಮಾತಾಡುತ್ತಿದ್ದರು.

ಹೊಸ ಹುಡುಗರನ್ನು ಪರಿಚಯಿಸುವಾಗ ಥೇಟ್‌ ಮಗುವಂತಾಗುವ ಅಣ್ಣಾವ್ರು ನಿರ್ದೇಶಕ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ಮಗ ಆದಿತ್ಯನನ್ನು ಆಶೀರ್ವದಿಸಿದರು.

ಮಹಾತ್ಮ ಪಿಕ್ಚರ್ಸ್‌ ಎಂಬ ತವರುಮನೆ
‘ವಿದ್ಯೆ ಕಲಿಯುವಾಗ ವಿನಯ ಇರಬೇಕು. ನಮ್ಮಪ್ಪ ನನಗೆ ಹೇಳಿದ್ದು ಅದನ್ನೇ. ಅದಿದ್ದರೆ ಈ ಪ್ರಪಂಚದಲ್ಲಿ ಬೇರೇನೂ ಬೇಕಾಗಿಲ್ಲ. ಶಂಕರ್‌ ಸಿಂಗ್‌ ಅವರ ಮಹಾತ್ಮ ಪಿಕ್ಚರ್ಸ್‌ ಕನ್ನಡ ಚಿತ್ರರಂಗಕ್ಕೆ ತವರು ಮನೆ ಇದ್ದಹಾಗೆ. ನಾನೂ ಈ ಸಂಸ್ಥೆಯ ಚಿತ್ರವೊಂದರಲ್ಲಿ ಪುಟ್ಟ ಪಾತ್ರ ಮಾಡಿದ್ದೆ. ಸಿನಿಮಾ ರಿಲೀಸ್‌ ಆದಾಗ ಆ ಪಾತ್ರ ನೋಡಲು ಹೋದೆ. ನಾನು ಎಲ್ಲಿದ್ದೀನಿ ಅಂತ ಹುಡುಕುವಷ್ಟರಲ್ಲಿ ಆ ಸೀನೇ ಮುಗಿದುಹೋಗಿತ್ತು :) ’
ರಾಜ್‌ ನೆನಪುಗಳ ಪುಟಗಳನ್ನು ತಿರುವಿಹಾಕಿದರು.

‘ಲವ್‌’ ಚಿತ್ರದ ಮೊದಲ ಶಾಟ್‌ಗೆ ಕ್ಲಾಪ್‌ ಮಾಡಿದ ಸಂಸದ ಹಾಗೂ ನಟ ಅಂಬರೀಶ್‌ ತಮ್ಮ ಏಳಿಗೆಯಲ್ಲಿ ಮಹಾತ್ಮ ಪಿಕ್ಚರ್ಸ್‌ ಸಂಸ್ಥೆ ಏಣಿಯಾಗಿ ಪರಿಣಮಿಸಿದುದನ್ನು ಸ್ಮರಿಸಿಕೊಂಡರು. ಆದಿತ್ಯನ ಭವಿಷ್ಯ ಉಜ್ವಲವಾಗಲೆಂದು ಅಂಬರೀಷ್‌ ಹರಸಿದರು.

ಆದಿತ್ಯನ ಅಜ್ಜಿ ಹಾಗೂ ಹಿರಿಯ ನಟಿ ಪ್ರತಿಮಾದೇವಿ ಜ್ಯೋತಿ ಬೆಳಗುವ ಮೂಲಕ ಮೊಮ್ಮಗನ ‘ಲವ್‌’ ಚಿತ್ರಕ್ಕೆ ಚಾಲನೆ ಕೊಟ್ಟರು. ಕನಸುಗಾರ ರವಿಚಂದ್ರನ್‌, ಹಂಸಲೇಖಾ, ಎಂ.ಪಿ.ಶಂಕರ್‌, ಜಯಂತಿ, ನಾಗತಿಹಳ್ಳಿ ಚಂದ್ರಶೇಖರ್‌, ಜೈಜಗದೀಶ್‌ ದಂಪತಿಗಳು, ಸುಂದರ್‌ ರಾಜ್‌ ಮೊದಲಾದವರು ಆದಿತ್ಯನನ್ನು ಹರಸಿದರು.

ರಾಜ್‌ ಹುಟ್ಟುಹಬ್ಬಕ್ಕೆ ಅಭಿ
ಪುನೀತ್‌ ರಾಜ್‌ಕುಮಾರ್‌ ಅಭಿನಯದ ‘ಅಭಿ’ ಚಿತ್ರ ರಾಜ್‌ ಹುಟ್ಟುಹಬ್ಬದ ಕೊಡುಗೆಯಾಗಿ (ಏಪ್ರಿಲ್‌ 24 ರಂದು) ತೆರೆ ಕಾಣಲಿದೆ. ಪುನೀತ್‌ ನಾಯಕತ್ವದ ಮೊದಲ ಚಿತ್ರ ‘ಅಪ್ಪು’ ಕೂಡ ರಾಜ್‌ ಹುಟ್ಟುಹಬ್ಬದಂದೇ ತೆರೆಕಂಡಿತ್ತು .

‘ಅಪ್ಪು’ ಚಿತ್ರದ ಭಾರೀ ಯಶಸ್ಸಿನ ನಂತರ ಪುನೀತ್‌ ನಾಯಕನಟರಾಗಿ ನಟಿಸಿರುವ ಎರಡನೇ ಚಿತ್ರ ‘ಅಭಿ’ ಗಾಂಧೀನಗರದಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada