ಇಂದಿರಾಗಾಂಧಿ ಪಾತ್ರದಲ್ಲಿ ನಟಿಸಲು ಮನಿಷಾ ರಿಹರ್ಸಲ್
*ದಟ್ಸ್‌ಕನ್ನಡ ಬ್ಯೂರೊ
ಮನಿಷಾ ಕೊಯಿರಾಲಾ ಈಗ ತುಂಬಾ ಬ್ಯುಸಿ. ಆಕೆಯ ಮುಂದಿನ ಚಿತ್ರ ‘ಇಂದಿರಾ ಗಾಂಧಿ’ಗೋಸ್ಕರ ತನ್ನ ಮೂಗನ್ನು ನೇರ ಮಾಡಿಕೊಳ್ಳುತ್ತಿದ್ದಾಳೆ.
ನಿತಿನ್ ಕೇಣಿ ನಿರ್ಮಿಸುತ್ತಿರುವ ‘ಇಂದಿರಾ ಗಾಂಧಿ’ಯ ನಿರ್ದೇಶಕ ಎನ್. ಚಂದ್ರ. ಶೂಟಿಂಗ್ ಶುರುವಾಗುವ ಮುನ್ನ ಕೋಯಿರಾಲಾ ಮೂಗು ನೇರವಾಗಬೇಕು.
ಸದ್ಯಕ್ಕೆ ಮನಿಷಾ ‘ಎಸ್ಕೇಪ್ ಫ್ರಮ್ ತಾಲಿಬಾನ್’ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ನಡುವೆ ಬಿಡುವು ಸಿಕ್ಕಾಗಲೆಲ್ಲ ವಿವಿಧ ನಮೂನೆಯ ಮೂಗುಗಳು ಮನಿಷಾಗೆ ಹೇಗೆ ಕಾಣಿಸುತ್ತದೆ... ಯಾವ ಮೂಗು ಇಟ್ಟರೆ ಅವರು ಥೇಟ್ ಇಂದಿರಾಗಾಂಧಿಯ ಹಾಗೆ ಕಾಣುತ್ತಾರೆ ಎಂಬ ಪ್ರಯೋಗಗಳು ನಡೆಯುತ್ತಿವೆ.
ಏಕ್ ಚೋಟೀಸೀ ಲವ್ ಸ್ಟೋರಿ ಆದ ಮೇಲೆ ಮನಿಷಾಗೆ ಬದುಕು ಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ‘ಎಸ್ಕೇಪ್ ಫ್ರಮ್ ತಾಲಿಬಾನ್’ ಮತ್ತು ‘ಇಂದಿರಾ ಗಾಂಧಿ’ ಚಿತ್ರಗಳ ಬಗ್ಗೆ ಮನಿಷಾಗೆ ತುಂಬಾ ಆತ್ಮ ವಿಶ್ವಾಸ . ಎರಡೂ ಚಿತ್ರಗಳ ನಿರ್ದೇಶಕರು ತುಂಬಾ ಶ್ರದ್ಧೆಯಿಂದ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗಳು ಹಿಟ್ ಆಗೋದು ಗ್ಯಾರಂಟಿ ಅನ್ನೋದು ಮನಿಷಾ ವಿಶ್ವಾಸ.
ಇನ್ನೂ ಒಂದೆರಡು ಚಿತ್ರಗಳು ಮನಿಷಾ ಕೈಯಲ್ಲಿದ್ದರೂ ಮನಿಷಾ ಧ್ಯಾನವೆಲ್ಲ ಮೂಗಿನ ಮೇಲೆ. ಇಂದಿರಾ ಗಾಂಧಿಯ ಹಾಗೆ ಹಠವಾದಿ, ಚೂಪು ಮೂಗು ಬೇಕು ಅಂತ ಮನಿಷಾ ಪಟ್ಟು ಹಿಡಿದು ಓಡಾಡುತ್ತಿದ್ದಾರೆ. ಇಂದಿರಾ ಗಾಂಧಿ ಸಿನೆಮಾ ಟೀಂ ಕೂಡ ಸದ್ಯಕ್ಕೆ ಮನಿಷಾಗೆ ಮೂಗು ಹುಡುಕುವುದರಲ್ಲಿ ವ್ಯಸ್ತ.
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications