»   » ‘ಚಂದಮಾಮ’ ನಾಗಿರೆಡ್ಡಿ ವಿಧಿವಶ

‘ಚಂದಮಾಮ’ ನಾಗಿರೆಡ್ಡಿ ವಿಧಿವಶ

Posted By: Super
Subscribe to Filmibeat Kannada
B. Nagi Reddi
ಚೆನ್ನೈ : ದಕ್ಷಿಣ ಭಾರತದ ಪ್ರಖ್ಯಾತ ನಿರ್ಮಾಪಕ ಹಾಗೂ ಚಂದಮಾಮ ಮಾಸಿಕ ಪತ್ರಿಕೆ ಮೂಲಕ ಭಾರತೀಯ ಮಕ್ಕಳಿಗೆ ಕಲ್ಪನೆಯ ಗರಿಗಳನ್ನು ಕೊಟ್ಟ , ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ವಿಜೇತ ಬಿ.ನಾಗಿರೆಡ್ಡಿ ಫೆ.25ರ ಗುರುವಾರ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು .

ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ 50 ಕ್ಕೂ ಹೆಚ್ಚು ಚಿತ್ರಗಳನ್ನು ನಾಗಿರೆಡ್ಡಿ ನಿರ್ಮಿಸಿದ್ದಾರೆ. ನಾಗಿರೆಡ್ಡಿ ಅವರು ಕನ್ನಡದಲ್ಲಿ ನಿರ್ಮಿಸಿರುವ ಸತ್ಯ ಹರಿಶ್ಚಂದ್ರ ಚಿತ್ರ ಅಪಾರ ಜನಪ್ರಿಯತೆ ಗಳಿಸಿದೆ. ವರನಟ ಡಾ.ರಾಜ್‌ಕುಮಾರ್‌ ಅಭಿನಯಿಸಿರುವ ಸತ್ಯ ಹರಿಶ್ಚಂದ್ರ ಅಪರೂಪದ ಪೌರಾಣಿಕ ಚಿತ್ರಗಳಲ್ಲೊಂದು. ಜಗದೇಕ ವೀರನ ಕಥೆ, ಮಾಯಾ ಬಜಾರ್‌ ನಾಗಿರೆಡ್ಡಿ ನಿರ್ಮಾಣದ ಇತರ ಜನಪ್ರಿಯ ಚಿತ್ರಗಳು.

ವಿಜಯ ಪ್ರೊಡಕ್ಷನ್ಸ್‌ ಮೂಲಕ ಅನೇಕ ಅದ್ದೂರಿ ಚಿತ್ರಗಳನ್ನು ನಿರ್ಮಿಸಿರುವ ನಾಗಿರೆಡ್ಡಿ , ಜಾನಪದ ಕಥಾವಸ್ತುವಿನ ಚಿತ್ರಗಳ ನಿರ್ಮಾಣಕ್ಕೆ ಹೆಚ್ಚಿನ ಒಲವು ಹೊಂದಿದ್ದರು. ದಕ್ಷಿಣ ಭಾರತ ಚಲನಚಿತ್ರ ಮಂಡಳಿ ಅಧ್ಯಕ್ಷರಾಗಿ, ಭಾರತೀಯ ಚಲನಚಿತ್ರ ಮಂಡಳಿ ಅಧ್ಯಕ್ಷರಾಗಿ ನಾಗಿರೆಡ್ಡಿ ಕಾರ್ಯ ನಿರ್ವಹಿಸಿದ್ದರು. 1987ರಲ್ಲಿ ನಾಗಿರೆಡ್ಡಿ ಅವರಿಗೆ ಫಾಲ್ಕೆ ಪ್ರಶಸ್ತಿ ದೊರೆತಿತ್ತು .

ಮಕ್ಕಳಿಗಾಗಿ ನಾಗಿರೆಡ್ಡಿ ಅವರು ತಮ್ಮ ಸಂಸ್ಥೆಯಿಂದ ಪ್ರಕಟಿಸುತ್ತಿದ್ದ ಚಂದಮಾಮ ಪತ್ರಿಕೆ 15 ಭಾರತೀಯ ಭಾಷೆಗಳಲ್ಲಿ ಪ್ರಕಟವಾಗುತ್ತಿತ್ತು .(ಇನ್ಫೋ ವಾರ್ತೆ)

English summary
B. Nagi Reddi, film producer, Dada Saheb Phalke awardee and philanthropist, died

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada